ETV Bharat / sports

ಚೇಸಿಂಗ್​ ಕಿಂಗ್ ವಿರಾಟ್​ ಕೊಹ್ಲಿ ಮೊದಲ ಶತಕ ಸಿಡಿಸಿ ಇಂದಿಗೆ 10 ವರ್ಷ... - ಚೇಸಿಂಗ್​ ಕ್ರಿಕೆಟ್​ ವಿರಾಟ್​ ಕೊಹ್ಲಿ

ಡಿಸೆಂಬರ್​ 24/ 2009 ರಲ್ಲಿ ಕೊಹ್ಲಿ ತಮ್ಮ ವೃತ್ತಿ ಜೀವನದ ಮೊದಲ ಶತಕ ಬಾರಿಸಿದ್ದರು. ಇದೀಗ 43 ಶತಕಗಳೊಡನೆ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ
author img

By

Published : Dec 24, 2019, 6:59 PM IST

ಮುಂಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮ ಮೊದಲ ಶತಕ ಸಿಡಿಸಿ ಇಂದಿಗೆ ಬರೋಬ್ಬರಿ 10 ವರ್ಷ ತುಂಬಿದೆ.

ಅಂಡರ್​ 19 ವಿಶ್ವಕಪ್​ ಗೆದ್ದ ಒಂದು ವರ್ಷದಲ್ಲಿ ಸೀನಿಯರ್​ ಟೀಮ್​ ಸೇರಿಕೊಂಡ ವಿರಾಟ್​ ಕೊಹ್ಲಿ ತಮ್ಮ ಸಾಮರ್ಥ್ಯ ತೋರಿದ್ದು 2009 ಡಿಸೆಂಬರ್​ 24 ರಂದು ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ. ಆ ಪಂದ್ಯದಲ್ಲಿ ಕೊಹ್ಲಿ ಭರ್ಜರಿ ಶತಕದ ಮೂಲಕ ತಮ್ಮ ವೃತ್ತಿ ಜೀವನದ ಚೊಚ್ಚಲ ಶತಕ ಸಿಡಿಸಿದ್ದರು.

ಅಂದು ಮೊದಲು ಬ್ಯಾಟಿಂಗ್​ ನಡೆಸಿದ್ದ ಶ್ರೀಲಂಕಾ ಉಪುಲ್​ ತರಂಗ(118) ಅವರ ಶತಕದ ನೆರವಿನಿಂದ 315 ರನ್​ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಭಾರತ ತಂಡ 23 ರನ್​ಗಳಾಗುವಷ್ಟರಲ್ಲಿ ಸಚಿನ್​ ಹಾಗೂ ತೆಂಡೂಲ್ಕರ್​ ವಿಕೆಟ್​ ಕಳೆದುಕೊಂಡಿತ್ತು. ಆದರೆ ಗಂಭೀರ್​ ಜೊತೆ ಸೇರಿಕೊಂಡ ಕೊಹ್ಲಿ 224 ರನ್​ಗಳ ಜೊತೆಯಾಟ ನಡೆಸಿ ಭಾರತಕ್ಕೆ ಜಯ ತಂದುಕೊಟ್ಟಿದ್ದರು.

virat kohli
ವಿರಾಟ್ ಕೊಹ್ಲಿ ಮೊದಲ ಶತಕ ಸಿಡಿಸಿದ ಸಂಭ್ರಮ

ಆ ಪಂದ್ಯದಲ್ಲಿ 107 ರನ್​ಗಳಿಸಿ ಕೊಹ್ಲಿ ಔಟಾಗಿದ್ದರು. ಗೌತಮ್​ ಗಂಭೀರ್​ ಅಜೇಯ 150 ರನ್​ ಗಳಿಸಿ ಭಾರತಕ್ಕೆ 7 ವಿಕೆಟ್​ಗಳ ಸುಲಭ ಜಯ ತಂದುಕೊಟ್ಟಿದ್ದರು. 150 ರನ್​ಗಳಿಸಿದ ಗಂಭೀರ್​ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೊಹ್ಲಿ ಜೊತೆ ಹಂಚಿಕೊಂಡು ಹೃದಯವೈಶಾಲ್ಯತೆ ಮೆರೆದಿದ್ದರು.

ಅಂದು ತಮ್ಮ ಮೊದಲ ಶತಕಕ್ಕೆ ಅಡಿಪಾಯ ಹಾಕಿದ್ದ ಕೊಹ್ಲಿ ಇಂದು ಏಕದಿನ ಕ್ರಿಕೆಟ್​ನಲ್ಲಿ 43 ಶತಕ ಸಿಡಿಸುವ ಮೂಲಕ ಹೆಚ್ಚು ಶತಕ ದಾಖಲಿಸಿರುವ 2ನೇ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ. ಇನ್ನು ಟೆಸ್ಟ್​ ಕ್ರಿಕೆಟ್​ನಲ್ಲೂ 27 ಶತಕ ಸಿಡಿಸಿರುವ ಕೊಹ್ಲಿ ಭಾರತ ಕ್ರಿಕೆಟ್​ ತಂಡದ ಅತ್ಯಂತ ಯಶಸ್ವಿ ನಾಯಕ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ಇತ್ತೀಚೆಗೆ ವೆಸ್ಟ್​ ಇಂಡೀಸ್​ ವಿರುದ್ಧ ಸತತ 10ನೇ ಏಕದಿನ ಸರಣಿ ಗೆದ್ದ ದಾಖಲೆಗೆ ಪಾತ್ರರಾಗಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.