ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ನಂತರ ಕೃಷಿಯತ್ತ ಮುಖ ಮಾಡಿರುವುದು ಗೊತ್ತೇ ಇದೆ. ಕೃಷಿ ತೋಟದಲ್ಲಿ ಬೆಳೆದ ಸಾವಯವ ತರಕಾರಿ ಮತ್ತು ಹಣ್ಣುಗಳ ಮೇಲಿನ ಅವರ ಪ್ರೀತಿ ಮತ್ತೆ ಮುನ್ನೆಲೆಗೆ ಬಂದಿದೆ.
ತಮ್ಮ ತೋಟದಲ್ಲಿ ಸ್ಟ್ರಾಬೆರಿ ಹಣ್ಣು ಕಿತ್ತು, ಹಣ್ಣಿನ ರುಚಿ ಆಸ್ವಾಧಿಸುತ್ತಿರುವ ವಿಡಿಯೋವನ್ನು ಇನ್ಸ್ಟ್ರಾಗ್ರಾಂನಲ್ಲಿ ಹಂಚಿಕೊಂಡಿರುವ ಚೆನ್ನೈಸೂಪರ್ ಕಿಂಗ್ಸ್ ನಾಯಕ, 'ಒಂದು ವೇಳೆ ನಾನು ತೋಟಕ್ಕೆ ಹೋದರೆ, ಮಾರುಕಟ್ಟೆಗೆ ಸಾಗಿಸಲು ಒಂದು ಸ್ಟ್ರಾಬೆರಿ ಹಣ್ಣು ಕೂಡಾ ಉಳಿಯುವುದಿಲ್ಲ' ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ತವರು ಜಿಲ್ಲೆಯಾದ ರಾಂಚಿಯಲ್ಲಿ ಧೋನಿ 43 ಎಕರೆ ತೋಟದ ಪೈಕಿ 10 ಎಕರೆ ಸಾವಯವ ಹಣ್ಣು ಮತ್ತು ತರಕಾರಿ ಕೃಷಿ ಆರಂಭಿಸಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಕೋಸು, ಸ್ಟ್ರಾಬೆರಿ, ಟೊಮೊಟೋ ಹೀಗೆ ಹಲವು ಬೆಳೆಗಳನ್ನು ಬೆಳೆಯಲು ಅವರು ಸಜ್ಜಾಗಿದ್ದಾರೆ. ಅಲ್ಲದೆ, ಬಂದ ಫಸಲನ್ನು ದುಬೈ ಮಾರುಕಟ್ಟೆಗೆ ಸಾಗಿಸಲು ಯೋಜನೆ ಹಾಕಿದ್ದಾರೆ ಎಂದು ವರದಿಯಾಗಿತ್ತು.