ಕ್ರೈಸ್ಟ್‌ಚರ್ಚ್: ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿ ನಾಯಕನ ಆಟವಾಡಿ, ನ್ಯೂಜಿಲ್ಯಾಂಡ್ ತಂಡಕ್ಕೆ ಭರ್ಜರಿ ಗೆಲವು ತಂದುಕೊಟ್ಟಿದ್ದ, ವಿಲಿಯಮ್ಸನ್, ಎರಡನೇ ಪಂದ್ಯದಲ್ಲೂ ತಮ್ಮ ಅಮೋಘ ಫಾರ್ಮ್ ಮುಂದುವರೆಸಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಸಂಪೂರ್ಣ ಹಿಡಿತ ಸಾಧಿಸಿದೆ. ಕೇನ್ ವಿಲಿಯಮ್ಸನ್ ಈ ಪಂದ್ಯದಲ್ಲೂ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 250 ರನ್‌ಗಳಿಗೂ ಅಧಿಕ ಮುನ್ನಡೆ ಪಡೆದು ಮುನ್ನುಗ್ಗುತ್ತಿದೆ.
ಎರಡನೇ ದಿನದಾಟದಲ್ಲಿ ಶತಕ ಬಾರಿಸಿ ಅಜೇಯವಾಗುಳಿದಿದ್ದ, ವಿಲಿಯಮ್ಸನ್ ಮೂರನೇ ದಿನದಾಟದಲ್ಲಿ ಅದನ್ನು ದ್ವಿಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. 364 ಎಸೆತದಲ್ಲಿ ಕೇನ್ ವಿಲಿಯಮ್ಸನ್ 238 ರನ್ ಗಳಿಸಿ ಔಟಾದರು.
-
💯💯 Kane Williamson brings up his double ton!
— ICC (@ICC) January 5, 2021 " class="align-text-top noRightClick twitterSection" data="
What an innings by the New Zealand captain! That is his fourth double century - joint-highest with Brendon McCullum among 🇳🇿 batsmen!#NZvPAK SCORECARD ▶ https://t.co/eVFtwym5wg pic.twitter.com/gp0U4dlaqt
">💯💯 Kane Williamson brings up his double ton!
— ICC (@ICC) January 5, 2021
What an innings by the New Zealand captain! That is his fourth double century - joint-highest with Brendon McCullum among 🇳🇿 batsmen!#NZvPAK SCORECARD ▶ https://t.co/eVFtwym5wg pic.twitter.com/gp0U4dlaqt💯💯 Kane Williamson brings up his double ton!
— ICC (@ICC) January 5, 2021
What an innings by the New Zealand captain! That is his fourth double century - joint-highest with Brendon McCullum among 🇳🇿 batsmen!#NZvPAK SCORECARD ▶ https://t.co/eVFtwym5wg pic.twitter.com/gp0U4dlaqt
ಪಾಕಿಸ್ತಾನದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ದ್ವಿಶತಕದ ಜೊತೆ ಮತ್ತೊಂದು ಸಾಧನೆ ಮಾಡಿದ್ದಾರೆ. ನ್ಯೂಜಿಲ್ಯಾಂಡ್ ತಂಡದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 7000 ರನ್ ಗಳಿಸಿದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವಿಲಿಯಮ್ಸನ್ ಪಾತ್ರರಾಗಿದ್ದಾರೆ.
ಓದಿ : ಈ ವರ್ಷದ ಮೊದಲ ಶತಕ ಸಿಡಿಸಿದ ಕೇನ್: ಟೆಸ್ಟ್ ಕ್ರಿಕೆಟ್ನಲ್ಲಿ 7000 ರನ್ ಬಾರಿಸಿದ ವಿಲಿಯಮ್ಸನ್
ನ್ಯೂಜಿಲ್ಯಾಂಡ್ ತಂಡದ ಪರವಾಗಿ ರಾಸ್ ಟೈಲರ್ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಆಟಗಾರರಾಗಿದ್ದಾರೆ. ರಾಸ್ ಟೈಲರ್ 96 ಪಂದ್ಯಗಳಲ್ಲಿ 7000 ರನ್ ಪೂರೈಸಿದ್ದರು. ಈಗ ಕೇನ್ ವಿಲಿಯಮ್ಸನ್ ರಾಸ್ ಟೈಲರ್ ಹಾಗೂ ನ್ಯೂಜಿಲ್ಯಾಂಡ್ ತಂಡದ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಇಬ್ಬರನ್ನು ಹಿಂದಿಕ್ಕಿದ್ದು, 83ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ನ್ಯೂಜಿಲ್ಯಾಂಡ್ ತಂಡದ ಪರವಾಗಿ ಸದ್ಯ 3 ಆಟಗಾರರು ಮಾತ್ರವೇ 7000ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಸ್ಟೀಫನ್ ಫ್ಲೆಮಿಂಗ್ 111 ಟೆಸ್ಟ್ ಪಂದ್ಯಗಳಲ್ಲಿ 7,172 ರನ್ ಗಳಿಸಿದ್ದರೆ, 105* ಪಂದ್ಯಗಳನ್ನು ಆಡಿರುವ ರಾಸ್ ಟೈಲರ್ 7379 ರನ್ ಗಳಿಸಿದ್ದಾರೆ. ನ್ಯೂಜಿಲ್ಯಾಂಡ್ ತಂಡದ ಪರವಾಗಿ ಸ್ಟೀಫನ್ ಪ್ಲೆಮಿಂಗ್ ಹೆಸರಿನಲ್ಲಿದ್ದ ಅತಿ ಹೆಚ್ಚು 50+ ರನ್ ಗಳಿಸಿದ ದಾಖಲೆಯನ್ನು ವಿಲಿಯಮ್ಸನ್ ತಮ್ಮ ಹೆಸರಿಗೆ ಬರೆದು ಕೊಂಡಿದ್ದಾರೆ.
ಇನ್ನೂ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ರನ್ಗಳಿಸಿದ ಆಟಗಾರರಾಗಿ ಮೆಕ್ಲಮ್ ಜೊತೆ ಜಂಟಿ ಸ್ಥಾನ ಹಂಚಿಕೊಂಡಿದ್ದಾರೆ.