ETV Bharat / sports

1983 ವಿಶ್ವಕಪ್​ನಲ್ಲಿ ಭಾರತ ಚಾಂಪಿಯನ್... ವಿಂಡೀಸ್​ ಎದುರು ಕಪಿಲ್​ ಪಡೆಯ ತಾಕತ್ತು ಹೇಗಿತ್ತು ಗೊತ್ತಾ! - ವಿಶ್ವಕಪ್​

ಕಪಿಲ್ ದೇವ್ ನಾಯಕತ್ವದಲ್ಲಿ ಮೂರನೇ ವಿಶ್ವಕಪ್​ಗೆ ಭಾಗವಹಿಸಿದ್ದ ಭಾರತ ತಂಡ , ಈ ಹಿಂದಿನ 2 ವಿಶ್ವಕಪ್​ನಲ್ಲಿ ಗೆದ್ದಿದ್ದು, ಕೇವಲ ಒಂದೇ ಪಂದ್ಯ, ಆದರೆ ಮೂರನೇ ವಿಶ್ವಕಪ್​ನಲ್ಲಿ ಮಾತ್ರ ಬಲಿಷ್ಠ ವಿಂಡೀಸ್ ತಂಡದೆದರು ಭರ್ಜರಿ ಪ್ರದರ್ಶನ ತೋರಿ ವಿಶ್ವಕಪ್ ಎತ್ತಿ ಹಿಡಿಯಿತು.

kapil
author img

By

Published : May 18, 2019, 6:50 AM IST

Updated : Jun 25, 2019, 8:11 PM IST

ಮುಂಬೈ: ಮೊದಲೆರಡು ವಿಶ್ವಕಪ್​ನಲ್ಲಿ ಲೀಗ್ ಹಂತದಲ್ಲೇ ಮುಗ್ಗರಿಸಿದ್ದ ಭಾರತ ತಂಡ 2 ಬಾರಿ ಚಾಂಪಿಯನ್ ಆಗಿದ್ದ ದೈತ್ಯ ವಿಂಡೀಸರ ವಿರುದ್ಧ ಮೂರನೇ ವಿಶ್ವಕಪ್ ಫೈನಲ್​ನಲ್ಲಿ 43 ರನ್​ಳಿಂದ ಗೆಲುವು ಸಾಧಿಸಿ ಚಾಂಪಿಯನ್ ಆಗುವ ಮೂಲಕ ಇಡೀ ಕ್ರಿಕೆಟ್ ಜಗತ್ತನ್ನೇ ಬೆಕ್ಕಸ ಬೆರಗಾಗುವಂತೆ ಮಾಡಿತ್ತು.

ಕಪಿಲ್ ದೇವ್ ನಾಯಕತ್ವದಲ್ಲಿ ಮೂರನೇ ವಿಶ್ವಕಪ್​ಗೆ ಭಾಗವಹಿಸಿದ್ದ ಭಾರತ ತಂಡ , ಈ ಹಿಂದಿನ 2 ವಿಶ್ವಕಪ್​ನಲ್ಲಿ ಗೆದ್ದಿದ್ದು, ಕೇವಲ ಒಂದೇ ಪಂದ್ಯ, ಆದರೆ ಮೂರನೇ ವಿಶ್ವಕಪ್​ನಲ್ಲಿ ಮಾತ್ರ ಬಲಿಷ್ಠ ವಿಂಡೀಸ್ ತಂಡದೆದರು ಭರ್ಜರಿ ಪ್ರದರ್ಶನ ತೋರಿ ವಿಶ್ವಕಪ್ ಎತ್ತಿ ಹಿಡಿಯಿತು.

1983ರ ವಿಶ್ವಕಪ್ ಲೀಗ್​ನಲ್ಲಿ ಭಾರತ ಪ್ರದರ್ಶನ

8 ತಂಡಗಳು ಸ್ಪರ್ಧಿಸಿದ್ದ ಈ ಟೂರ್ನಿಯಲ್ಲಿ ಭಾರತ, ವೆಸ್ಟ್ ಇಂಡೀಸ್,ಜಿಂಬಾಬ್ವೆ ಹಾಗೂ ಆಸ್ಟ್ರೇಲಿಯಾ ತಂಡಗಳೊಂದಿಗೆ ಸ್ಥಾನ ಪಡೆದುಕೊಂಡಿತ್ತು. ಲೀಗ್ನಲ್ಲಿ ಮೂರು ತಂಡದ ವಿರುದ್ಧ 2 ಪಂದ್ಯಗಳನ್ನಾಡಿತ್ತು. ವಿಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಒಂದು ಗೆಲುವು ಒಂದು ಸೋಲು ಕಂಡಿದ್ದ ಕಪಿಲ್ ಪಡೆ ಜಿಂಬಾಬ್ವೆ ವಿರುದ್ಧ 2 ಪಂದ್ಯಗಳ ಗೆಲುವಿನೊಂದಿಗೆ ಟೂರ್ನಿಯಲ್ಲಿ 4 ಗೆಲುವು ಪಡೆದು ಎ ಗುಂಪಿನಲ್ಲಿ ವಿಂಡೀಸ್ ಜೊತೆ ಸೆಮಿ ಫೈನಲ್ ಪ್ರವೇಶಿಸಿತು.

ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ಮಣಿಸಿ ಪೈನಲ್​ಗೆ ಎಂಟ್ರಿ...

ಮೊದಲೆರಡು ವಿಶ್ವಕಪ್​ನಲ್ಲಿ ಲೀಗ್​ನಲ್ಲೇ ಹೊರಬಿದ್ದಿದ್ದ ಭಾರತ ಸೆಮಿಫೈನಲ್ ಪ್ರವೇಶಿಸಿರುವುದೆ ದೊಡ್ಡ ಸಾಧನೆ, ಇಂಗ್ಲೆಂಡ್ ವಿರುದ್ಧ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಬಿಂಬಿತವಾಗಿತ್ತು. ಆದರೆ ಅಂದು ನಡೆದದ್ದೇ ಬೇರೆ, ಮೊದಲು ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್ ಭಾರತದ ಬೌಲಿಂಗ್ ದಾಳಿಗೆ ಸಿಲುಕಿ 213 ರನ್​ಗಳಿಗೆ ಆಲೌಟ್ ಆಗಿತ್ತು. ನಾಯಕ ಕಪಿಲ್ ದೇವ್ 35ಕ್ಕೆ3, ಅಮರ್​ನಾಥ್ 27ಕ್ಕೆ2, ಹಾಗೂ ರೋಜರ್ ಬಿನ್ನಿ 43 ಕ್ಕೆ 2 ವಿಕೆಟ್ ಪಡೆದಿದ್ದರು.

214 ರನ್​ಗಳ ಗುರಿ ಬೆನ್ನೆತ್ತಿದ ಭಾರತಕ್ಕೆ ಯಶ್​ಪಾಲ್ ಶರ್ಮಾ 61, ಸಂದೀಪ್ ಪಾಟೀಲ್ 51 ಮೋಹಿಂದರ್ ಅಮರ್ನಾಥ್ 46 ರನ್​ಗಳಿಸಿ ಭಾರತವನ್ನು ಫೈನಲ್​ಗೇರುವಂತೆ ಮಾಡಿದರು.

2 ಬಾರಿಯ ಚಾಂಪಿಯನ್ನರಿಗೆ ಶಾಕ್... ಭಾರತಕ್ಕ ಚೊಚ್ಚಲ ವಿಶ್ವಕಪ್

36 ವರ್ಷಗಳ ಹಿಂದೆ ನಡೆದಿದ್ದ ಫೈನಲ್​ನಲ್ಲಿ ಪಂದ್ಯಕ್ಕೂ ಮುನ್ನ ವಿಂಡೀಸ್​ಗೆ ಹ್ಯಾಟ್ರಿಕ್ ಪ್ರಶಸ್ತಿ ಪಕ್ಕ ಎಂಬುದ ಎಲ್ಲರ ಅಭಿಪ್ರಾಯವಾಗಿತ್ತು. ಆದರೆ ಅಂದು ಭಾರತ ನೀಡಿದ ಪ್ರದರ್ಶನಕ್ಕೆ ಕ್ರಿಕೆಟ್ ಜಗತ್ತು ತಲೆಬಾಗಿಸಿತ್ತು.

ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ವಿಂಡೀಸ್ ಬೌಲಿಂಗ್ ದಿಗ್ಗಜರಾದ ಮಾರ್ಷಲ್(3) ಆ್ಯಂಡಿ ಗಾರ್ನರ್ (2), ಜಾಯೊಲ್ ಗಾರ್ನರ್(1) ಮೈಕಲ್ ಹೋಲ್ಡಿಂಗ್ (2) ಬೌಲಿಂಗ್ ದಾಳಿಗೆ ತತ್ತರಿಸಿ 183 ರನ್​ಳಿಸಿತ್ತು. ಭಾರತದ ಪರ ಕೆ,ಶ್ರೀಕಾಂತ್ 38, ಅಮರ್ನಾಥ್ 26 ರನ್​ಳಿಸಿದ್ದೇ ಗರಿಷ್ಠ ಮೊತ್ತವಾಗಿತ್ತು.

ಕೇವಲ 183 ರನ್​ಗಳನ್ನ ವಿಂಡೀಸ್ ಸುಲಭವಾಗಿ ಚೇಸ್ ಮಾಡಿ ಹ್ಯಾಟ್ರಿಕ್ ಪ್ರಶಸ್ತಿ ಪಡೆಯಬಹುದೆಂದು ಭಾವಿಸಲಾಗಿತ್ತು. ಆದರೆ ಸುಲಭಗುರಿ ಪೊಡೆದ ಗುಂಗಿನಲ್ಲಿ ಕೆಟ್ಟ ಹೊಡೆತಕ್ಕೆ ಕೈಹಾಕಿ ವಿಂಡೀನ್ ಬಲಿಷ್ಠ ಬ್ಯಾಟ್ಸ್​ಮನ್​ಗಳಾದ ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಗಾರ್ಡನ್ ಗ್ರೀನಿಡ್ಜ್, ಡೆಸ್ಮನ್ ಹೇನಸ್ ಭಾರತದ ಬೌಲರ್​ಗಳ ದಾಳಿಗೆ ಉತ್ತರಿಸಲಾಗದೆ ವಿಕೆಟ್ ಕೈಚೆಲ್ಲಿದರು.

ದಿಗ್ಗಜ ವಿವಿಯನ್ ರಿಚರ್ಡ್ಸ್ ನೀಡಿದ ಅದ್ಭುತ ಕ್ಯಾಚ್ ಪಡೆದ ಕಪಿಲ್ ಭಾರತಕ್ಕೆ ಗೆಲುವು ಖಚಿತಗೊಳಿಸಿದರು. ರಿಚರ್ಡ್ಸ್ ಔಟಾಗುತ್ತಿದ್ದಂತೆ ವಿಂಡೀಸ್ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. ಕೊನೆಗೆ 183 ರನ್​ಗಳನ್ನು ಚೇಸ್ ಮಾಡಲಾಗದೆ 140 ರನ್​ಗಳಿಗೆ ಅಲೌಟ್ ಆಗಿ 43 ರನ್​ಗಳ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಕಪಿಲ್​ದೇವ್ ಪಡೆ ಕ್ರಿಕೆಟ್ ಜಗತ್ತಿಗೆ ಭಾರತದ ಶಕ್ತಿಯನ್ನ ತೋರಿಸಿದ್ದರು. ಸತತ 2 ಬಾರಿ ಚಾಂಪಿಯನ್ ಆಗಿದ್ದ ವಿಂಡೀಸ್​ಗೆ ಭಾರತ ನೀಡಿದ ಹೊಡೆತ ಹೇಗಿತ್ತೆಂದರೆ ವಿಂಡೀಸ್ 36 ವರ್ಷವಾದರೂ ಇಂದಿಗೂ ಒಮ್ಮಯೂ ಫೈನಲ್​ ಕೂಡ ತಲುಪಿಲ್ಲ.

ಚಾಂಪಿಯನ್​ ನಂತರದ ಭಾರತ ತಂಡದ ಸಾಧನೆ

ನಂತರದ 1989ರ ವಿಶ್ವಕಪ್​ನಲ್ಲಿ ಸೆಮಿಫೈನಲ್, 1992 ರಲ್ಲಿ 7 ನೇಸ್ಥಾನ, 1996ರಲ್ಲಿ ಸೆಮಿಫೈನಲ್, 1999ರಲ್ಲಿ 6 ನೇ ಸ್ಥಾನ ತಲುಪಿತ್ತು. ಆದರೆ 2003 ರಲ್ಲಿ ಗಂಗೂಲಿ ನೇತೃತ್ವದಲ್ಲಿ ಪೈನಲ್ ತಲುಪಿತ್ತಾದರೂ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿ ರನ್ನರ್ ಆಪ್ ಆಯಿತು. 2007ರಲ್ಲಿ ಲೀಗ್​ನಲ್ಲಿ ಹೀನಾಯ ಸೋಲು ಕಂಡಿತ್ತು. 2007 ಸೋಲಿನಿಂದ ಕಂಗೆಟ್ಟ ಬಿಸಿಸಿಐ ಧೋನಿ ನಾಯಕತ್ವದಲ್ಲಿ ಮತ್ತೆ 4 ವರ್ಷಗಳ ಕಾಲ ಬಲಿಷ್ಠ ತಂಡ ಕಟ್ಟುವ ಮೂಲಕ 2011ರಲ್ಲಿ 28 ವರ್ಷಗಳ ನಂತರ ವಿಶ್ವಕಪ್ ಎತ್ತಿ ಹಿಡಿದಿತ್ತು. 2015ರಲ್ಲಿ ಸೆಮಿಫೈನಲ್​ನಲ್ಲಿ ಆಸೀಸ್​ ವಿರುದ್ಧ ಸೋಲನುಭವಿಸಿ ನಿರಾಸೆಯನುಭವಿಸಿತ್ತು.

Intro:Body:Conclusion:
Last Updated : Jun 25, 2019, 8:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.