ಹೈದರಾಬಾದ್: ಟೀಂ ಇಂಡಿಯಾ ಸೇರಿದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್ ಬಗ್ಗೆ ಅತ್ಯಂತ ಕುತೂಹಲಿಗರಾಗಿದ್ದಾರೆ. ಕಾರಣ ಚೊಚ್ಚಲ ಅಹರ್ನಿಶಿ ಪಂದ್ಯ.
ಇದೇ ಮೊದಲ ಬಾರಿಗೆ ಪಿಂಕ್ ಬಾಲ್ನಲ್ಲಿ ಆಡಲು ಟೀಂ ಇಂಡಿಯಾ ಕ್ರಿಕೆಟರ್ಗಳು ಸಿದ್ಧರಾಗಿದ್ದು, ಈ ನಿಟ್ಟಿನಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ತಮ್ಮ ತಯಾರಿ ಹಾಗೂ ಪಿಂಕ್ ಬಾಲ್ ಅನುಭವದ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
"ಕೆಂಪು ಚೆಂಡಿನಲ್ಲಿ ಬಾರಿಸುವಂತೆ ಆರಂಭದಲ್ಲೇ ಪಿಂಕ್ ಬಾಲ್ನಲ್ಲಿ ಆಡಲು ಸಾಧ್ಯವಿಲ್ಲ, ಹೀಗಾಗಿ ಈ ಪಂದ್ಯ ರಿಯಲ್ ಟೆಸ್ಟ್" ಎಂದು ನಾಯಕ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಪಿಚ್ ಮತ್ತು ಪಿಂಕ್ ಬಾಲ್ ಬಳಕೆ... ಅಹರ್ನಿಶಿ ಟೆಸ್ಟ್ ಪಂದ್ಯದ ಮುಂದಿದೆ ಭಾರಿ ಸವಾಲು
"ಇದು ಪಿಂಕ್ ಬಾಲ್ನಲ್ಲಿ ನನ್ನ ಮೊದಲ ಅನುಭವ, ಹೀಗಾಗಿ ಪಂದ್ಯಕ್ಕಾಗಿ ಕಾತರನಾಗಿದ್ದೇನೆ" ಎಂದು ಹಿಟ್ಮ್ಯಾನ್ ರೋಹಿತ್ ಶರ್ಮಾ ಹೇಳಿದ್ದಾರೆ.
- ' class='align-text-top noRightClick twitterSection' data=''>
"ನಾನು ಇಲ್ಲಿಯವರೆಗೂ ಪಿಂಕ್ ಬಾಲ್ನಲ್ಲಿ ಆಡಿಲ್ಲ. ಮೊದಲ ಪಂದ್ಯಕ್ಕೆ ಎದುರು ನೋಡುತ್ತಿದ್ದೇನೆ. ಈಡನ್ ಗಾರ್ಡನ್ನಲ್ಲಿ ನಡೆಯುವ ಈ ಅಹರ್ನಿಶಿ ಟೆಸ್ಟ್ ಭಾರತ ಟೆಸ್ಟ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ" ಎಂದು ಸ್ಪಿನ್ನರ್ ಆರ್ ಅಶ್ವಿನ್ ಹೇಳಿದ್ದಾರೆ.
ಅಹರ್ನಿಶಿ ಟೆಸ್ಟ್ ಪಂದ್ಯದ ಟಿಕೆಟ್ಗೆ ಉತ್ತಮ ಬೇಡಿಕೆ... ಮೂರು ದಿನದ ಟಿಕೆಟ್ ಸೋಲ್ಡ್ಔಟ್!
ಇನ್ನುಳಿದಂತೆ ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದೆ.