ಹೈದರಾಬಾದ್: ಮುಂದಿನ ವರ್ಷದ ಆರಂಭದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಐದು ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ.
ಅದೇ ಸಮಯದಲ್ಲಿ ಅಹಮಬಾದ್ನಲ್ಲಿ ಇಂಗ್ಲೆಂಡ್ ವಿರುದ್ಧ ಹಗಲು-ರಾತ್ರಿ ಟೆಸ್ಟ್ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಪೂರ್ಣ ಪ್ರಯಾಣದ ವೇಳಾಪಟ್ಟಿಯನ್ನ ಬಿಸಿಸಿಐ ಇನ್ನೂ ಘೋಷಣೆ ಮಾಡಿಲ್ಲ.
ದೇಶದಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ಪುನಾರಂಭದ ಕುರಿತು ಮಾತನಾಡಿದ ಗಂಗೂಲಿ, “ನಮ್ಮ ದೇಶೀಯ ಕ್ರಿಕೆಟ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ನಾಲ್ಕು ಟೆಸ್ಟ್ ಪಂದ್ಯಗಳು, ಮೂರು ಏಕದಿನ ಮತ್ತು ಐದು ಟಿ-20 ಪಂದ್ಯಗಳಿಗಾಗಿ ಇಂಗ್ಲೆಂಡ್ ಭಾರತ ಪ್ರವಾಸ ಮಾಡುತ್ತಿದೆ. ದ್ವಿಪಕ್ಷೀಯ ಸರಣಿಯನ್ನು ಆಯೋಜಿಸುವುದು ಸುಲಭ, ಏಕೆಂದರೆ ಎರಡು ತಂಡಗಳ ನಡುವೆ ಪಂದ್ಯಾವಳಿ ಆಗಿದ್ದರಿಂದ ಜನರ ಸಂಖ್ಯೆ ಕಡಿಮೆಯಾಗಿರುತ್ತದೆ. 8-10 ತಂಡಗಳ ನಡುವೆ ಪಂದ್ಯಗಳು ಇದ್ದಾಗ, ಅದು ಹೆಚ್ಚು ಕಷ್ಟಕರವಾಗುತ್ತದೆ. ಕೋವಿಡ್ ಪರಿಸ್ಥಿತಿಯಲ್ಲಿ ಅದನ್ನು ನಿಭಾಯಿಸುವುದು ಕಷ್ಟವಾಗುತ್ತದೆ ಎಂದಿದ್ದಾರೆ. ''
ಓದಿ:ಈ ಮಾಸ್ಕ್‌ನ 6 ತಿಂಗಳು ಬಳಸಬಹುದಂತೆ.. ಲಿವಿನ್‍ಗಾರ್ಡ್ ಬ್ರಾಂಡ್ ಅಂಬಾಸಿಡರ್ ಆದ ಸೌರವ್ ಗಂಗೂಲಿ!!
"ಮುಂಬೈ ಮತ್ತು ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ನಾನು ಕೇಳಿದ್ದೇನೆ, ಆದ್ದರಿಂದ ನಾವು ಸ್ವಲ್ಪ ಜಾಗರೂಕರಾಗಿ ಎಲ್ಲಾ ಮುಂಜಾಗ್ರತ ಕ್ರಮ ತೆಗೆದುಕೊಂಡು ಟೂರ್ನಿಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ " ಎಂದು ಗಂಗೂಲಿ ಹೇಳಿದರು. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆಟಗಾರರ ಕ್ವಾರಂಟೈನ್ ಅವಧಿ ಮಂಗಳವಾರಕ್ಕೆ ಅಂತ್ಯವಾಗಿದ್ದು, ನವೆಂಬರ್ 27 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಮೊದಲ ಏಕದಿನ ಪಂದ್ಯ ಆರಂಭಿಸಲಿದೆ.