ಕೋಲ್ಕತ್ತಾ: ಬಾಂಗ್ಲಾದೇಶ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಒಂದು ಇನ್ನಿಂಗ್ಸ್ ಮತ್ತು 46 ರನ್ಗಳಿಂದ ಜಯ ಸಾಧಿಸಿರುವ ಟೀಂ ಇಂಡಿಯಾ ವಿಶ್ವ ದಾಖಲೆಯೊಂದನ್ನ ನಿರ್ಮಿಸಿದೆ.
![ಟೆಸ್ಟ್ ಸರಣಿ ಗೆದ್ಧ ಟೀಂ ಇಂಡಿಯಾ, Team India script world record](https://etvbharatimages.akamaized.net/etvbharat/prod-images/5162247_thu.jpg)
ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ನಿರ್ವಹಣೆ ತೋರುತ್ತಿರುವ ಟೀಂ ಇಂಡಿಯಾ ಸತತವಾಗಿ ಪಂದ್ಯಗಳನ್ನ ಗೆಲ್ಲುತ್ತಾ ಬಂದಿದೆ. ಇಂದಿನ ಪಂದ್ಯದಲ್ಲಿ ಇನ್ನಿಂಗ್ಸ್ ಗೆದ್ದಿರುವ ಭಾರತ ತಂಡ ಟೆಸ್ಟ್ ಕ್ರಿಕೆಟ್ನಲ್ಲಿ ಸತತವಾಗಿ 4ನೇ ಪಂದ್ಯವನ್ನ ಇನ್ನಿಂಗ್ಸ್ನಿಂದ ಜಯ ಸಾಧಿಸಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಸತತವಾಗಿ 4 ಪಂದ್ಯಗಳನ್ನ ಇನ್ನಿಂಗ್ಸ್ನಿಂದ ಗೆಲುವು ಸಾಧಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆ ಟೀಂ ಇಂಡಿಯಾ ಪಾಲಾಗಿದೆ.
![ಟೆಸ್ಟ್ ಸರಣಿ ಗೆದ್ಧ ಟೀಂ ಇಂಡಿಯಾ, Team India script world record](https://etvbharatimages.akamaized.net/etvbharat/prod-images/5162247_th.jpg)
ಇದಕ್ಕೂ ಮೊದಲು ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಮತ್ತು 137 ರನ್ ಹಾಗೂ 3ನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 202 ರನ್ಗಳಿಂದ ಜಯ ಸಾಧಿಸಿತ್ತು. ಇನ್ನು ಬಾಂಗ್ಲಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 130 ರನ್ ಹಾಗೂ ಇಂದಿನ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 46ರನ್ಗಳಿಂದ ಗೆದ್ದಿರುವುದು ವಿಶೇಷ ದಾಖಲೆಯಾಗಿದೆ.