ಮ್ಯಾಂಚೆಸ್ಟರ್: 2017ರ ಚಾಂಪಿಯನ್ ಟ್ರೋಫಿ ಫೈನಲ್ನಲ್ಲೂ ಭಾರತ ತಂಡ ಪಾಕಿಸ್ತಾನದ ವಿರುದ್ಧ ಮೊದಲ 2 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ನೀಡಿತ್ತು. ಇಂದು ಕೂಡ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿದೆ.
ಅಂದು 339 ರನ್ಗಳ ಗುರಿ ಪಡೆದಿದ್ದ ಕೊಹ್ಲಿಪಡೆ ಕೇವಲ 158 ರನ್ಗಳಿಗೆ ವಿಕೆಟ್ ಒಪ್ಪಿಸಿ 180 ರನ್ಗಳ ಹೀನಾಯ ಸೋಲುಕಂಡಿತ್ತು. ರೋಹಿತ್ ಶೂನ್ಯಕ್ಕೆ, ಕೊಹ್ಲಿ 5 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ಧವನ್ 21 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಇಂದೂ ಅದೇ ಪರಿಸ್ಥಿತಿಗೆ ಭಾರತ ತಂಡ ತಲುಪಿದ್ದು 240 ರನ್ಗಳ ಗುರಿ ಬೆನ್ನೆತ್ತಿ ಕೇವಲ 5 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಮೂವರು ಕೇವಲ ಒಂದೇ ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಾರ್ತಿಕ್ ಕೂಡ ಪರಿಣಾಮಕಾರಿಯಾಗದೇ ಕೇವಲ 4 ರನ್ಗಳಿಗೆ ವಿಕೆಟ್ ನೀಡಿ ನಿರಾಸೆ ಮೂಡಿಸಿದ್ದಾರೆ.
ಚಾಂಪಿಯನ್ ಟ್ರೋಫಿಯಲ್ಲಿ ಅಮೀರ್ ಭಾರತಕ್ಕೆ ಆಘಾತ ನೀಡಿದರೆ ಇಂದು ಮ್ಯಾಟ್ ಹೆನ್ರಿ ಹಾಗೂ ಬೌಲ್ಟ್ ಆಘಾತ ನೀಡಿದ್ದಾರೆ.