ಗಯಾನ: ವಿಂಡೀಸ್ ವಿರುದ್ಧದ ಟಿ-20 ಸರಣಿಯನ್ನು 3-0ಯಲ್ಲಿ ಗೆದ್ದು ಕ್ಷೀನ್ ಸಾಧಿಸುವ ಉತ್ಸಾಹದಲ್ಲಿರುವ ಭಾರತ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿರುವ ಟೀಮ್ ಇಂಡಿಯಾ ಕೊನೆಯ ಪಂದ್ಯದಲ್ಲೂ ತಮ್ಮ ಪ್ರದರ್ಶನವನ್ನು ಕಾಯ್ದುಕೊಳ್ಳುವ ಉದ್ದೇಶ ಹೊಂದಿದೆ. ಈ ಪಂದ್ಯದಲ್ಲಿ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದು, ಕಳೆದ ಪಂದ್ಯಗಳಲ್ಲಿ ಬೆಂಚ್ ಕಾಯ್ದಿದ್ದವರಿಗೆ ಅವಕಾಶ ನೀಡಲಾಗಿದೆ. ಓಪನರ್ ರೋಹಿತ್ ಬದಲಿಗೆ ರಾಹುಲ್, ಖಲೀಲ್ ಬದಲಿಗೆ ದೀಪಕ್ ಚಹಾರ್, ಜಡೇಜಾ ಬದಲಿಗೆ ರಾಹುಲ್ ಚಹಾರ್ ಕಣಕ್ಕಿಳಿದಿದ್ದಾರೆ.
ವಿಂಡೀಸ್ ತಂಡದಲ್ಲಿ ಖಾರಿ ಫಿಯಿರೆ ಬದಲಿಗೆ ಫಾಬಿಯನ್ ಅಲೆನ್ ತಂಡ ಸೇರಿಕೊಂಡಿದ್ದಾರೆ.
ಭಾರತ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಶಿಖರ್ ಧವನ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿ.ಕೀ), ಕೃನಾಲ್ ಪಾಂಡ್ಯ, ರಾಹುಲ್ ಚಹಾರ್, ವಾಷಿಂಗ್ಟನ್ ಸುಂದರ್, ಭುವನೇಶ್ವರ ಕುಮಾರ್, ನವದೀಪ್ ಸೈನಿ, ದೀಪಕ್ ಚಹಾರ್
ವೆಸ್ಟ್ ಇಂಡೀಸ್: ಕಾರ್ಲೋಸ್ ಬ್ರಾಥ್‌ವೈಟ್ (ನಾಯಕ), ಫಾಬಿಯನ್ ಅಲೆನ್, ಎವಿನ್ ಲೇವಿಸ್, ಶಿಮ್ರಾನ್ ಹೆಟ್ಮೇರ್, ನಿಕೋಲಸ್ ಪೂರನ್, ಕೀರನ್ ಪೊಲಾರ್ಡ್, ರೋವ್ಮನ್ ಪೊವೆಲ್, ಕೀಮೋ ಪಾಲ್, ಸುನಿಲ್ ನರೈನ್, ಶೆಲ್ಡನ್ ಕಾಟ್ರೆಲ್, ಓಶೇನ್ ಥಾಮಸ್