ಸೈಲೆಟ್(ಬಾಂಗ್ಲಾದೇಶ): ಬಾಂಗ್ಲಾದೇಶದ ವಿರುದ್ಧ 323 ರನ್ಗಳ ಬೆನ್ನತ್ತಿದ ಜಿಂಬಾಬ್ವೆ ತಂಡ ಕೇವಲ 4 ರನ್ಗಳ ವಿರೋಚಿತ ಸೋಲು ಅನುಭವಿಸಿತು.
ಮೂರು ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಬಾಂಗ್ಲಾದೇಶ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 322 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು. ಆರಂಭಿಕ ಬ್ಯಾಟ್ಸ್ಮನ್ ತಮೀಮ್ ಇಕ್ಬಾಲ್ 136 ಎಸೆತಗಳಲ್ಲಿ 20 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 158 ರನ್ಗಳಿಸಿ ಬೃಹತ್ ಮೊತ್ತಕ್ಕೆ ನೆರವಾದರು. ಇವರಿಗೆ ಸಾಥ್ ನೀಡಿದ ರಹೀಮ್ 55, ಮಹಮದುಲ್ಲಾ 41, ಮೊಹಮ್ಮದ್ ಮಿಥುನ್ 32 ರನ್ಗಳಿಸಿ ಬೃಹತ್ ಮೊತ್ತಕ್ಕೆ ನೆರವಾಗಿದ್ದರು.
ಜಿಂಬಾಬ್ವೆ ಪರ ಕಾರ್ಲ್ ಮುಂಬಾ2, ಡೊನಾಲ್ಡ್ ಟ್ರಿಪಾನೋ 2, ತ್ಸುಂಬಾ ಹಾಗೂ ಮಾಧೆವರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
323 ರನ್ಗಳ ಟಾರ್ಗೆಟ್ ಬೆನ್ನತ್ತಿದ ಜಿಂಬಾಬ್ವೆ 318 ರನ್ಗಳಿಸಷ್ಟೇ ಶಕ್ತವಾಗಿ ಕೇವಲ 4 ರನ್ಗಳ ವಿರೋಚಿತ ಸೋಲೊಪ್ಪಿಕೊಂಡಿತು.
ತಿನಾಶೆ ಕಮುನುಕಾಮ್ವೆ 51, ವೆಸ್ಲೆ ಮಾಧೆವರ್ 52, ಸಿಕಂದರ್ ರಾಝಾ 66, ಮುಟುಂಬೋಡ್ಜಿ 34 ಹಾಗೂ ಕೇವಲ 28 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 55 ರನ್ಗಳಿಸಿದ ಡೊನಾಲ್ಡ್ ಟ್ರಿಪಾನೊ ಹೋರಾಟ ವ್ಯರ್ಥವಾಯಿತು.
ಜಿಂಬಾಬ್ವೆಗೆ ಕೊನೆಯ 4 ಎಸೆತಗಳಲ್ಲಿ ಗೆಲ್ಲಲು 18 ರನ್ಗಳ ಅಗತ್ಯವಿತ್ತು. ಮೊದಲೆರಡು ಎಸೆತಗಳಲ್ಲಿ ಸತತ 2 ಸಿಕ್ಸರ್ ಸಿಡಿಸಿದ ಟ್ರಿಪಾನೋ ಕೊನೆಯ 2 ಎಸೆತಗಳಲ್ಲಿ ಕೇವಲ ಒಂದು ರನ್ಗಳಿಸಲಷ್ಟೇ ಶಕ್ತವಾಗಿ ನಿರಾಶೆಯನುಭವಿಸಿದರು.
ಬಾಂಗ್ಲಾದೇಶದ ಪರ ತೈಜುಲ್ ಇಸ್ಲಾಮ್ 3, ಆಲ್ ಅಮಿನ್, ಮೆಹಿದಿ ಹಸನ್, ಶಫಿವುಲ್ ಇಸ್ಲಾಮ್ ಹಾಗೂ ಮೋರ್ತಾಜಾ ತಲಾ ಒಂದು ವಿಕೆಟ್ ಪಡೆದರು. ಶತಕ ಸಿಡಿಸಿದ ತಮೀಮ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.