ಮುಂಬೈ (ಮಹಾರಾಷ್ಟ್ರ): ಸೈಯದ್ ಮುಷ್ತಾಕ್ ಅಲಿ ಟ್ರೋಫಿ ನಾಕ್ಔಟ್ ಹಂತಕ್ಕೆ ಸಾಗಿದ್ದು, ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ಈ ಪಂದ್ಯಗಳನ್ನು ಆಯೋಜಿಸಲಾಗಿದೆ. ಜನವರಿ 26 ರಿಂದ ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭವಾಗಲಿವೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡಗಳಿಗೆ ಕಳುಹಿಸಿದ ಪಂದ್ಯಗಳಲ್ಲಿ, ಕರ್ನಾಟಕ ಜನವರಿ 26 ರಂದು ನಡೆಯುವ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಪಂಜಾಬ್ ತಂಡ ಎದುರಿಸಲಿದೆ. ಅದೇ ದಿನ ಎರಡನೇ ಕ್ವಾರ್ಟರ್ ಫೈನಲ್ ತಮಿಳುನಾಡು ಮತ್ತು ಹಿಮಾಚಲ ಪ್ರದೇಶ ನಡುವೆ ನಡೆಯಲಿದೆ.
ಜನವರಿ 27 ರಂದು ನಡೆಯಲಿರುವ ಮೂರನೇ ನಾಕ್ಔಟ್ ಪಂದ್ಯದಲ್ಲಿ ಹರಿಯಾಣ ಮತ್ತು ಬರೋಡಾ ಮುಖಾಮುಖಿಯಾಗಲಿವೆ, ಬಿಹಾರ ಮತ್ತು ರಾಜಸ್ಥಾನಗಳು ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎದುರಾಗಲಿವೆ. ಎರಡೂ ಸೆಮಿಫೈನಲ್ ಪಂದ್ಯಗಳು ಜನವರಿ 29 ರಂದು ನಡೆಯಲಿದ್ದು, ಜನವರಿ 31 ರಂದು ಫೈನಲ್ ಪಂದ್ಯ ನಡೆಯಲಿದೆ.
ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಲು ಬಿಹಾರ, ಹರಿಯಾಣ, ಬರೋಡಾ, ಪಂಜಾಬ್ ಮತ್ತು ತಮಿಳುನಾಡು ಪಂದ್ಯಾವಳಿಯಲ್ಲಿ ತಮ್ಮ ಎಲ್ಲ ಐದು ಪಂದ್ಯಗಳನ್ನು ಗೆದ್ದಿದ್ದರೆ, ಹಿಮಾಚಲ, ಕರ್ನಾಟಕ ಮತ್ತು ರಾಜಸ್ಥಾನಗಳು ತಮ್ಮ ಐದು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಕಳೆದುಕೊಂಡು ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಗಳಿಸಿವೆ.