ETV Bharat / sports

ಭಾರತ ಹಿರಿಯರ ತಂಡದ ಬೌಲಿಂಗ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ ಕನ್ನಡಿಗ?

2017ರ ಚಾಂಪಿಯನ್​ ಟ್ರೋಫಿಯ ವೇಳೆ ಭಾರತ ತಂಡದ ಕೋಚ್​ ಆಗಿದ್ದ ಅನಿಲ್​ ಕುಂಬ್ಳೆ ರಾಜಿನಾಮೆ ನೀಡಿದ ನಂತರ ಭಾರತ ತಂಡದಲ್ಲಿ ಖಾಲಿ ಇರುವ ಬೌಲಿಂಗ್​ ಕೋಚ್​ ಜವಾಬ್ದಾರಿ ನಿರ್ವಹಿಸಲು ಕನ್ನಡಿಗ ಜೋಶಿ ಸಿದ್ದವಾಗಿದ್ದಾರೆ.

Sunil Joshi
author img

By

Published : Aug 6, 2019, 4:59 PM IST

ಬೆಂಗಳೂರು: ಭಾರತ ತಂಡದ ಮಾಜಿ ಸ್ಪಿನ್​ ಬೌಲರ್​ ಕನ್ನಡಿಗ ಸುನಿಲ್​ ಜೋಶಿ ಭಾರತ ಹಿರಿಯರ ತಂಡದ ಬೌಲಿಂಗ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

2017ರ ಚಾಂಪಿಯನ್​ ಟ್ರೋಫಿಯ ವೇಳೆ ಭಾರತ ತಂಡದ ಕೋಚ್​ ಆಗಿದ್ದ ಅನಿಲ್​ ಕುಂಬ್ಳೆ ರಾಜಿನಾಮೆ ನೀಡಿದ ನಂತರ ಭಾರತ ತಂಡಕ್ಕೆ ಯಾವುದೇ ಸ್ಪಿನ್​ ಬೌಲಿಂಗ್​ ಕೋಚ್​ ಆಯ್ಕೆ ಮಾಡಿಲ್ಲ. ಇದೀಗ 49 ವಯಸ್ಸಿನ ಕನ್ನಡಿಗ ಬೌಲಿಂಗ್​ ಕೋಚ್​ ಜವಾಬ್ದಾರಿ ನಿರ್ವಹಿಸಲು ಸಿದ್ದವಾಗಿದ್ದಾರೆ.

ಈ ಕುರಿತು ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿರುವ ಜೋಶಿ" ಹೌದು ನಾನು ಭಾರತ ತಂಡದ ಬೌಲಿಂಗ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ಎರಡೂವರೆ ವರ್ಷಗಳ ಕಾಲ ಬಾಂಗ್ಲಾದೇಶ ತಂಡಕ್ಕೆ ಸ್ಪಿನ್​ ಬೌಲಿಂಗ್​ ಸಲಹೆಗಾರನಾಗಿ ಸೇವೆ ಸಲ್ಲಿಸಿದ್ದೇನೆ. ಈಗ ದೊಡ್ಡ ಸವಾಲನ್ನು ಸ್ವೀಕರಿಸಲು ಸಿದ್ದನಿದ್ದೇನೆ. ಭಾರತ ತಂಡಕ್ಕೆ ಯಾವುದೇ ಸ್ಪಿನ್​ ಕೋಚ್​ ಇಲ್ಲದಿರುವುದರಿಂದ ನನ್ನ ಅನುಭವದ ಆಧಾರದ ಮೇಲೆ ಕೋಚ್​ ಸ್ಥಾನ ಲಭಿಸಬಹುದು ಎಂಬ ವಿಶ್ವಾಸದಲ್ಲಿದ್ದೇನೆ" ಎಂದು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ತಂಡಗಳಿಗೆ ಒಬ್ಬ ಬೌಲಿಂಗ್​ ತಜ್ಞ ಅಗತ್ಯವಾಗಿ ಇರಲೇಬೇಕಿದೆ. ಅದರಲ್ಲಿ ಸ್ಪಿನ್ ಕೋಚ್​​ ಅಥವಾ ವೇಗದ ಬೌಲಿಂಗ್​ ಕೋಚ್​ ಖಂಡಿತಾ ಬೇಕಾಗಿದೆ. ಇದಕ್ಕೆ ನಾನಾಗಿರಬಹುದು ಅಥವಾ ಮತ್ತೊಬ್ಬರಾಗಿರಬಹುದು ಎಂದು ಬಾಂಗ್ಲಾದೇಶ ತಂಡದ ಕೋಚ್​ ವಿಭಾಗದಿಂದ ಹೊರಬಂದಿರುವ ಜೋಶಿ ಹೇಳಿದ್ದಾರೆ.

ಜೋಶಿ 1996 ರಿಂದ 2001ರವರಗೆ ಭಾರತ ತಂಡದ ಪರ 15 ಟೆಸ್ಟ್​ ಪಂದ್ಯಗಳನ್ನಾಡಿ 41 ವಿಕೆಟ್​ ಪಡೆದಿದ್ದಾರೆ. 142 ರನ್​ ನೀಡಿ 5 ವಿಕೆಟ್​ ಪಡೆದಿರುವುದು ಉತ್ತಮ ಪ್ರದರ್ಶನವಾಗಿದೆ. 69 ಏಕದಿನ ಪಂದ್ಯಗಳಲ್ಲಿ 69 ವಿಕೆಟ್​ ಪಡೆದಿದ್ದಾರೆ. 6 ರನ್​ ನೀಡಿ 5 ವಿಕೆಟ್​ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್​ ಪ್ರದರ್ಶನವಾಗಿದೆ. ಇನ್ನು 160 ಪ್ರಥಮ ದರ್ಜೆ ಕ್ರಿಕೆಟ್​ನಿಂದ 615 ವಿಕೆಟ್​ ಪಡೆದಿದ್ದಾರೆ.

ಜೋಶಿ ಬಾಂಗ್ಲಾದೇಶ ತಂಡದ ಕೋಚ್​ ಆದ ಮೇಲೆ ತಂಡದ ಸ್ಪಿನ್​ ಬೌಲರ್​ಗಳಾದ ಮೆಹೆದಿ ಹಸನ್​, ಮೊಸದೆಕ್​ ಹುಸೇನ್​​​ ಮತ್ತು ಶಕಿಬ್​ ಅಲ್​ ಹಸನ್​ ಅವರಲ್ಲಿ ಉತ್ತಮ ಬದಲಾವಣೆ ತಂದಿದ್ದರು. ಏಷ್ಯಾಕಪ್​ ಹಾಗೂ ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ಬೌಲರ್​ಗಳ ಉತ್ತಮ ಪ್ರದರ್ಶನದ ಹಿಂದೆ ಜೋಶಿ ಪಾತ್ರ ಪ್ರಮುಖವಾಗಿತ್ತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.