ಲಂಡನ್: ಇಂಗ್ಲೆಂಡ್ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಪಾಕಿಸ್ತಾನದ ವಿರುದ್ದದ ಮೊದಲ ಟೆಸ್ಟ್ ವೇಳೆ ಮೈದಾನದಲ್ಲಿ ಅನುಚಿತ ವರ್ತನೆ ತೋರಿ ಐಸಿಸಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಪಂದ್ಯದ ಸಂಭಾವನೆಯ ಶೇ15 ರಷ್ಟು ಮೊತ್ತವನ್ನು ದಂಡವಾಗಿ ತೆತ್ತಿದ್ದಾರೆ.
ಶನಿವಾರ ಅಂತ್ಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ರಾಡ್ ಐಸಿಸಿ ನಿಯಮಾವಳಿಯ ಅರ್ಟಿಕಲ್ 2.5 ಬ್ರೇಕ್ ಮಾಡಿದ್ದಾರೆ. ಪಂದ್ಯದ ವೇಳೆ ಅಸಂಬದ್ಧ ಪದ ಬಳಕೆ, ಸನ್ನೆ ಅಥವಾ ಮೈದಾನದಲ್ಲಿ ಎದುರಾಳಿಯ ವಿಕೆಟ್ ಪಡೆದಾಗ ಹದ್ದು ಮೀರಿ ವರ್ತಿಸಿದರೆ ಐಸಿಸಿ ನಿಯಮ ಉಲ್ಲಂಘನೆಯಾಗುತ್ತದೆ. ಬ್ರಾಡ್, ಯಾಸಿರ್ ಶಾ ವಿಕೆಟ್ ಪಡೆದ ಸಂದರ್ಭದಲ್ಲಿ ಕೆಟ್ಟ ಪದ ಬಳಸಿದ್ದಕ್ಕೆ ದಂಡ ವಿಧಿಸಲಾಗಿದೆ.
-
JUST IN: England fast bowler Stuart Broad has been fined for breaching the ICC Code of Conduct during the first #ENGvPAK Test.
— ICC (@ICC) August 11, 2020 " class="align-text-top noRightClick twitterSection" data="
Details 👉 https://t.co/2rsYrHV6Zi pic.twitter.com/4xrscKn1rb
">JUST IN: England fast bowler Stuart Broad has been fined for breaching the ICC Code of Conduct during the first #ENGvPAK Test.
— ICC (@ICC) August 11, 2020
Details 👉 https://t.co/2rsYrHV6Zi pic.twitter.com/4xrscKn1rbJUST IN: England fast bowler Stuart Broad has been fined for breaching the ICC Code of Conduct during the first #ENGvPAK Test.
— ICC (@ICC) August 11, 2020
Details 👉 https://t.co/2rsYrHV6Zi pic.twitter.com/4xrscKn1rb
ದಂಡದ ಜೊತೆಗೆ, ಬ್ರಾಡ್‌ನ ಶಿಸ್ತಿನ ದಾಖಲಾತಿಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ. ಇದು 24 ತಿಂಗಳ ಅವಧಿಯಲ್ಲಿ ಅವರ ಮೂರನೆಯ ನಿಯಮ ಉಲ್ಲಂಘನೆಯಾಗಿದೆ.
ಬ್ರಾಡ್ ಜನವರಿ 27 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ನಾಲ್ಕನೇ ಟೆಸ್ಟ್ನಲ್ಲಿ ಹಾಗೂ ಆಗಸ್ಟ್ 19, 2018ರಲ್ಲಿ ಭಾರತದ ವಿರುದ್ಧ ತಮ್ಮ ಅನುಚಿತ ವರ್ತನೆಗಾಗಿ ಒಂದೊಂದು ಡಿಮೆರಿಟ್ ಅಂಕ ಪಡೆದುಕೊಂಡಿದ್ದಾರೆ.