ಅಡಿಲೇಡ್: ಆಸ್ಟ್ರೇಲಿಯಾದ ರನ್ಮಷಿನ್ ಎಂದೇ ಖ್ಯಾತರಾಗಿರುವ ಸ್ಟಿವ್ ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 7000 ರನ್ಗಳಿಸಿ ದಾಖಲೆ ಬರೆದಿದ್ದಾರೆ.
ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಸ್ಟಿವ್ ಸ್ಮಿತ್ ತಮ್ಮ 126ನೇ ಇನ್ನಿಂಗ್ಸ್ನಲ್ಲಿ 7000 ಸಾವಿರ ಗಡಿ ದಾಟುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟ್ಸ್ಮನ್ ಎನಿಸಿಕೊಂಡರು.
ಇದಕ್ಕೂ ಮುನ್ನ 1946ರಲ್ಲಿ ಇಂಗ್ಲೆಂಡ್ನ ವ್ಯಾಲಿ ಹ್ಯಾಮಂಡ್ 131 ಇನ್ನಿಂಗ್ಸ್ಗಳಲ್ಲಿ 7 ಸಾವಿರ ರನ್ಗಳಿಸಿ ದಾಖಲೆ ಬರೆದಿದ್ದರು. ಇದೀಗ 73 ವರ್ಷಗಳ ಬಳಿಕ ಆ ದಾಖಲೆ ಸ್ಮಿತ್ ಪಾಲಾಗಿದೆ. ಸೆಹ್ವಾಗ್ 134 ಇನ್ನಿಂಗ್ಸ್ಗಳಲ್ಲಿ, ಸಚಿನ್ ತೆಂಡೂಲ್ಕರ್ 136 ಇನ್ನಿಂಗ್ಸ್ಗಳಲ್ಲಿ 7000 ಸಾವಿರ ಗಡಿದಾಟಿ ನಂತರದ ಸ್ಥಾನದಲ್ಲಿದ್ದಾರೆ.
-
Steve Smith goes past Don Bradman to become the 11th Australian player to reach 7000 Test runs 🙌
— ICC (@ICC) November 30, 2019 " class="align-text-top noRightClick twitterSection" data="
He is the quickest in the world to achieve the feat, in just 126 innings!#AUSvPAK pic.twitter.com/RY2yxw2b5h
">Steve Smith goes past Don Bradman to become the 11th Australian player to reach 7000 Test runs 🙌
— ICC (@ICC) November 30, 2019
He is the quickest in the world to achieve the feat, in just 126 innings!#AUSvPAK pic.twitter.com/RY2yxw2b5hSteve Smith goes past Don Bradman to become the 11th Australian player to reach 7000 Test runs 🙌
— ICC (@ICC) November 30, 2019
He is the quickest in the world to achieve the feat, in just 126 innings!#AUSvPAK pic.twitter.com/RY2yxw2b5h
ಇನ್ನು ವೇಗವಾಗಿ 1000 ರನ್ ಬಾರಿಸಿದ ದಾಖಲೆ ಇಂಗ್ಲೆಂಡ್ನ ಪೀಟರ್ ಸಟ್ಕ್ಲಿಫ್ ಹಾಗೂ ವಿಂಡೀಸ್ನ ಎವೆರ್ಟನ್ ವೀಕ್ಸ್ ಹೆಸರಿನಲ್ಲಿದ್ದರೆ, 2000, 3000, 4000, 5000 ರನ್ಗಳನ್ನು ವೇಗವಾಗಿ ಸಿಡಿಸಿದ ದಾಖಲೆ ಆಸೀಸ್ನ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. 8000 ಹಾಗೂ 9000 ಸಂಗಾಕ್ಕರ ಹೆಸರಿನಲ್ಲಿದೆ.
10 ಸಾವಿರ ಮೈಲಿಗಲ್ಲನ್ನು ವೇಗವಾಗಿ ತಲುಪಿದ ದಾಖಲೆ ಜಂಟಿಯಾಗಿ ಲಾರಾ, ಸಚಿನ್ ಹಾಗೂ ಸಂಗಾಕ್ಕರ(195ಇನ್ನಿಂಗ್ಸ್) ಹೆಸರಿನಲ್ಲಿದೆ. ವೇಗವಾಗಿ 11ಹಾಗೂ 12 ಸಾವಿರ ತಲುಪಿದ ದಾಖಲೆ ಕೂಡ ಸಂಗಾಕ್ಕರ ಹೆಸರಿನಲ್ಲಿದೆ. ಆದರೆ 13,14 ಹಾಗೂ 15 ಸಾವಿರ ರನ್ ವೇಗವಾಗಿ ತಲುಪಿದ ದಾಖಲೆ ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ಹೆಸರಲ್ಲಿದೆ.