ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಭಾರತ ಸಿಡ್ನಿಯಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಟಿವ್ ಬಕ್ನರ್ ಭಾರತದ ವಿರುದ್ಧ 2 ವ್ಯತಿರಿಕ್ತ ತೀರ್ಪು ನೀಡಿ ಭಾರತ ತಂಡದ ಸೋಲಿಗೆ ಕಾರಣರಾಗಿದ್ದರು. ಇದೀಗ 12 ವರ್ಷಗಳ ಬಳಿಕ ತಮ್ಮ ತಪ್ಪನ್ನು ಅವರು ಒಪ್ಪಿಕೊಂಡಿದ್ದಾರೆ.
2008ರ ಆಸೀಸ್ ಪ್ರವಾಸದಲ್ಲಿ ಮೊದಲ ಟೆಸ್ಟ್ನಲ್ಲಿ ಸೋತಿದ್ದ ಅನಿಲ್ ಕುಂಬ್ಳೆ ನೇತೃತ್ವದ ಭಾರತ ತಂಡ, ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮವಾಗಿ ತಿರುಗಿ ಬಿದ್ದಿತ್ತು. ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 134 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಆ್ಯಂಡ್ರ್ಯೂ ಸೈಮಂಡ್ಸ್ ಸ್ಟಂಪ್ ಔಟ್ ಆಗುವುದನ್ನ ಬಕ್ನರ್ ತಪ್ಪಿಸಿದ್ದರು. ಆದರೆ, ಆ ಪಂದ್ಯದಲ್ಲಿ ಸೈಮಂಡ್ಸ್ 162 ರನ್ಗಳಿಸಿದರು. ಆಸ್ಟ್ರೇಲಿಯಾ 463 ರನ್ಗಳ ಮೊತ್ತ ದಾಖಲಿಸಿತು.
ಆದರೂ ಭಾರತ ತಂಡ ಎರಡನೇ ಇನ್ನಿಂಗ್ಸ್ನಲ್ಲಿ ಸಚಿನ್(154) ಹಾಗೂ ಲಕ್ಷ್ಮಣ್(109)ಹರ್ಭಜನ್ ಸಿಂಗ್)63) ರನ್ಗಳ ಸಹಾಯದಿಂದ 532 ರನ್ಗಳಿಸಿ 69 ರನ್ಗಳ ಮುನ್ನಡೆ ಸಾಧಿಸಿತ್ತು. ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ನಲ್ಲಿ 401ರನ್ಗಳಿಗೆ ಡಿಕ್ಲೇರ್ ಘೋಷಿಸಿ ಭಾರತಕ್ಕೆ 333ರನ್ಗಳ ಗುರಿ ನೀಡಿತ್ತು.
5ನೇ ದಿನವಾದ್ದರಿಂದ ಭಾರತ ಆರಂಭಿಕ ಆಘಾತ ಅನುಭವಿಸಿದರೂ ದ್ರಾವಿಡ್ 38 ರನ್ಗಳಿಸಿ ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯತ್ತಿದ್ದರು. ಅಷ್ಟರಲ್ಲಾಗಲೇ 105 ಎಸೆತಗಳನ್ನು ಎದುರಿಸಿದ್ದರು. ಸೈಮಂಡ್ಸ್ ಬೌಲಿಂಗ್ನಲ್ಲಿ ದ್ರಾವಿಡ್ ಅವರ ಪ್ಯಾಡ್ಗೆ ಬಿದ್ದ ಚೆಂಡನ್ನು ಗಿಲ್ಕ್ರಿಸ್ಟ್ ಪಡೆದು ಕ್ಯಾಚ್ ಎಂದು ಅಫೀಲ್ ಮಾಡಿದರು. ಇದನ್ನು ಸ್ಟಿವ್ ಬಕ್ನರ್ ಔಟ್ ಎಂದು ತೀರ್ಪು ನೀಡಿದ್ದರು. ಈ ಪಂದ್ಯವನ್ನು ಆಸ್ಟ್ರೇಲಿಯಾ 122 ರನ್ಗಳಿಂದ ಗೆದ್ದುಕೊಂಡಿತು. ಒಂದು ವೇಳೆ ದ್ರಾವಿಡ್ ವಿರುದ್ಧ ಬಕ್ನರ್ ತೀರ್ಪು ನೀಡಿರದಿದ್ದರೆ ಆ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಅವಕಾಶ ಕೂಡ ಇತ್ತು.
ಇದೀಗ 12 ವರ್ಷಗಳ ಬಳಿಕ ತಾವು ಮಾಡಿದ್ದ ಎರಡು ತಪ್ಪುಗಳನ್ನು ಒಪ್ಪಿಕೊಂಡಿರುವ ಬಕ್ನರ್ ನನ್ನ ಆ ಎರಡು ತಪ್ಪುಗಳಿಂದ ಭಾರತ ಸೋಲುವಂತಾಯಿತು. ಒಂದೇ ಪಂದ್ಯದಲ್ಲಿ ಎರಡು ಬಹುದೊಡ್ಡ ತಪ್ಪು ನಿರ್ಧಾರ ಕೈಗೊಂಡ ಅಂಪೈರ್ ನಾನೊಬ್ಬನೇ ಎಂದಿರುವ ಬಕ್ನರ್, ನನ್ನ ಆ 2 ತಪ್ಪುಗಳು ಈಗಲು ನನ್ನನ್ನು ಕಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಆದರೆ, ಆ ಪಂದ್ಯದ ನಂತರ ಬಕ್ನರ್ರನ್ನು ಐಸಿಸಿ ಅಂಪೈರ್ ಹುದ್ದೆಯಿಂದ ಅಮಾನತು ಮಾಡಲಾಯಿತು. ಮುಂದಿನ ಪಂದ್ಯದಲ್ಲಿ ಭಾರತ 72 ರನ್ಗಳ ಜಯ ಸಾಧಿಸಿತು. ಆದರೂ ಸರಣಿಯನ್ನು 2-1ರಲ್ಲಿ ಸೋಲು ಕಾಣಬೇಕಾಯಿತು. ಒಂದು ವೇಳೆ ಎರಡನೇ ಪಂದ್ಯದಲ್ಲಿ ಭಾರತ ಡ್ರಾ ಅಥವಾ ಗೆಲುವು ದಾಖಲಿಸಿದ್ದರೆ ಆಸ್ಟ್ರೇಲಿಯಾ ನೆಲದಲ್ಲಿ ಅನಿಲ್ ಕುಂಬ್ಳೆ ಪಡೆ ಇತಿಹಾಸ ನಿರ್ಮಿಸುತ್ತಿತ್ತು.