ETV Bharat / sports

ಸಿಪಿಎಲ್​ 2020: ಬಲಿಷ್ಠ ಗಯಾನ ತಂಡವನ್ನು 10 ವಿಕೆಟ್​ಗಳಿಂದ ಬಗ್ಗುಬಡಿದು ಫೈನಲ್ ಪ್ರವೇಶಿಸಿದ ಲೂಸಿಯಾ ಜೌಕ್ಸ್ - St Lucia Zouks thrash Guyana Amazon Warriors by 10-wickets to enter final of CPL 2020

ಟೂರ್ನಿಯಲ್ಲಿ ತನ್ನ ಬೌಲಿಂಗ್​ ಬಲದಿಂದ ಫೈನಲ್​ ಪ್ರವೇಶಿಸಿರುವ ಸೇಂಟ್​ ಲೂಸಿಯಾ ಜೌಕ್ಸ್​ 2020ರ ಲೀಗ್​ನಲ್ಲಿ ಆಡಿದ 11 ಪಂದ್ಯಗಳಲ್ಲೂ ದಿಗ್ವಿಜಯ ಸಾಧಿಸಿ ಫೈನಲ್​ ಪ್ರವೇಶಿಸಿರುವ ಪೊಲಾರ್ಟ್​ ನೇತೃತ್ವದ ಟ್ರಿಂಬಾಗೋ ನೈಟ್​ ರೈಡರ್ಸ್​ ತಂಡವನ್ನು ಸೆಪ್ಟೆಂಬರ್​ 10ರಂದು ಎದುರಿಸಲಿದೆ.

ಸಿಪಿಎಲ್​ 2020
ಸಿಪಿಎಲ್​ 2020
author img

By

Published : Sep 9, 2020, 4:55 PM IST

ಟ್ರಿನಿಡಾಡ್​: ಬೌಲರ್​ಗಳ ಅದ್ಭುತ ಪ್ರದರ್ಶನದ ನೆರವಿನಿಂದ ಸೇಂಟ್​ ಲೂಸಿಯಾ ಜೌಕ್ಸ್​ ತಂಡ ಬಲಿಷ್ಠ ಗಯಾನ ಅಮೇಜಾನ್​ ವಾರಿಯರ್ಸ್​ ವಿರುದ್ಧ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ.

ಮಂಗಳವಾರ ನಡೆದ 2ನೇ ಸೆಮಿಫೈನಲ್​ನಲ್ಲಿ ಲೂಸಿಯಾ ಜೌಕ್ಸ್​ ತಂಡದ ಶಿಸ್ತು ಬದ್ದ ದಾಳಿಗೆ ತತ್ತರಿಸಿದ ಗಯಾನ ಕೇವಲ 55 ರನ್​ಗಳಿಗೆ ಆಲೌಟ್​ ಆಯಿತು. ಈ ಮೂಲಕ ಸಿಪಿಎಲ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್​ ಆದ ಎರಡನೇ ತಂಡ ಎಂಬ ಕುಖ್ಯಾತಿಗೆ ಕಾರಣವಾಯಿತು. 25 ರನ್​ಗಳಿಸಿದ ಚಂದ್ರಪಾಲ್ ಹೇಮರಾಜ್ ತಂಡದ ಗರಿಷ್ಠ ಸ್ಕೋರರ್​ ಆದರು.

ಹೆಟ್ಮೈರ್​(0) ಪೂರನ್​(11), ರಾಸ್​ ಟೇಲರ್​(3), ಬ್ರೆಂಡನ್​ ಕಿಂಗ್​(0), ಕೀಮೋ ಪಾಲ್​(2) , ಕ್ರಿಸ್​ಗ್ರೀನ್​(11), ಶೆಫಾರ್ಡ್​(1) ನವೀನ್ ಉಲ್​ಹಕ್​(2) ಹಾಗೂ ತಾಹೀರ್​ ಕೂಡ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿ ದಯನೀಯ ವೈಫಲ್ಯ ಅನುಭವಿಸಿದರು.

ಸೇಂಟ್​ ಲೂಸಿಯಾ ಜೌಕ್ಸ್​ ಪರ ಕುಗ್ಗೆಲೀಜ್ನ್​ 2, ಜಹೀರ್​ ಖಾನ್​ 2, ರಾಸ್ಟನ್​ ಚೇಸ್​ 2, ಮಾರ್ಕ್​ ಡೇಯಲ್​ 2 ಹಾಗೂ ನಬಿ ಮತ್ತು ಜಾವೆಲ್​ ಗ್ಲೆನ್​ ತಲಾ ಒಂದು ವಿಕೆಟ್​ ಪಡೆದರು ಗಯಾನ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

56 ರನ್​ಗಳ ಗುರಿಯನ್ನು ಬೆನ್ನತ್ತಿದ ಡರೇನ್​ ಸಾಮಿ ಪಡೆ 4.3 ಓವರ್​ಗಳಲ್ಲೇ ವಿಕೆಟ್​ ನಷ್ಟವಿಲ್ಲದೆ ಗುರಿ ತಲುಪಿತು. ರಖೀಮ್​ ಕಾರ್ನವಾಲ್​ 17 ಎಸೆತಗಳಲಗಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 32, ಮಾರ್ಕ್ ಡೇಯಲ್​ 10 ಎಸೆತಗಳಲ್ಲಿ 3 ಬೌಂಡರಿ , ಒಂದು ಸಿಕ್ಸರ್​ ನೆರವಿನಿಂದ 19 ರನ್​ಗಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.