ETV Bharat / sports

2ನೇ ಪಂದ್ಯದಲ್ಲೂ ಬಾಂಗ್ಲಾದೇಶವನ್ನು ಬಗ್ಗುಬಡಿದ ಲಂಕಾ... 4 ವರ್ಷಗಳ ನಂತರ ಸರಣಿ ಗೆಲುವು - ಬಾಂಗ್ಲಾದೇಶ ಕ್ರಿಕೆಟ್​

ತವರಿನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶದ ವಿರುದ್ಧ ಸತತ 2ನೇ ಪಂದ್ಯ ಗೆಲ್ಲುವ ಮೂಲಕ ಲಂಕಾ ತಂಡ 4 ವರ್ಷಗಳ ಬಳಿಕ ಏಕದಿನ ಸರಣಿ ಜಯಿಸಿದೆ.

ಶ್ರೀಲಂಕಾ
author img

By

Published : Jul 29, 2019, 10:43 AM IST

ಕೊಲೊಂಬೊ: ತವರಿನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯನ್ನು ಲಂಕಾ ತಂಡ ಇನ್ನೂ ಒಂದು ಪಂದ್ಯ ಉಳಿದಿರುವಂತೆ ವಶಪಡಿಸಿಕೊಂಡಿದೆ.

ಭಾನುವಾರ ನಡೆದ ಎರಡನೇ ಏಕದಿನ ಪಂದ್ಯವನ್ನು ಲಂಕಾ 7 ವಿಕೆಟ್​ಗಳಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್​ ಮಾಡಿದ ಬಾಂಗ್ಲಾದೇಶ ತಂಡ 239 ರನ್​ಗಳ ಟಾರ್ಗೆಟ್​ ನೀಡಿತು.

ಈ ಮೊತ್ತವನ್ನು ಬೆನ್ನಟ್ಟಿದ ಲಂಕಾ ತಂಡ, ಫರ್ನಾಂಡೋ (82) ಕುಶಾಲ್​ ಮೆಂಡಿಸ್​(41*) ಮ್ಯಾಥ್ಯೂಸ್​ (53*) ರನ್​ಗಳ ನೆರವಿನಿಂದ 44.4 ಓವರ್​ಗಳಲ್ಲಿ ಗುರಿ ತಲುಪಿ ಸರಣಿ ಕೈವಶ ಮಾಡಿಕೊಂಡಿತು. ಬಾಂಗ್ಲಾ ಪರ ರಹಮಾನ್​ 2 ವಿಕೆಟ್​ ಪಡೆದರು.

  • And that's a wrap, Sri Lanka do it in style and win the series 2-0 with 1-match to go!
    Sri Lanka 242/3 (44.4 ov, Avishka Fernando 82, Angelo Mathews 52*, Kusal Mendis 41*, Kusal Perera 30) v BAN 238/8 #SLvBAN pic.twitter.com/8NPB2GcYoD

    — Sri Lanka Cricket 🇱🇰 (@OfficialSLC) July 28, 2019 " class="align-text-top noRightClick twitterSection" data=" ">

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ್ದ ಬಾಂಗ್ಲಾತಂಡಕ್ಕೆ ವಿಕೆಟ್​ ಕೀಪರ್​ ಮುಶ್ಫಿಕರ್​ ರಹೀಮ್​ 98 ರನ್​ ಹಾಗೂ ಆಲ್​ರೌಂಡರ್​ ಮೆಹೆದಿ ಹಸನ್ 43 ರನ್​ಗಳ ನೆರವಿನಿಂದ ಬಾಂಗ್ಲಾ238 ರನ್​ಗಳ ಸಾಧಾರಣ ಮೊತ್ತ ಕಲೆಹಾಕಿತ್ತು. 110 ಎಸೆತಗಳೆನ್ನುದುರಿಸಿ ರಹೀಮ್​ 6 ಬೌಂಡರಿ ಹಾಗೂ ಒಂದು ಸಿಕ್ಸರ್​ ಸಿಡಿಸಿದ್ದರು.

ಲಂಕಾ ಪರ ಪ್ರದೀಪ್​ 2, ಇಸುರು ಉದಾನ 2 ಹಾಗೂ ಧನಂಜಯ 2 ವಿಕೆಟ್ ಪಡೆದು ಮಿಂಚಿದರು. 75 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 9 ಬೌಂಡರಿ ಸಿಡಿಸಿದ ಆವಿಸ್ಕಾ ಫರ್ನಾಂಡೋ 82 ರನ್​ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸತತ 2 ಪಂದ್ಯ ಗೆದ್ದ ಲಂಕಾ ತವರಿನಲ್ಲಿ 4 ವರ್ಷಗಳ ಬಳಿಕ ಏಕದಿನ ಸರಣಿ ಗೆದ್ದ ಸಾಧನೆ ಮಾಡಿತು. 4 ವರ್ಷಗಳ ಮಧ್ಯೆ ಐರ್ಲೆಂಡ್​ನಲ್ಲಿ 2-0 ಹಾಗೂ ಸ್ಕಾಟ್ಲೆಂಡ್​ ವಿರುದ್ಧ ಏಕೈಕ ಪಂದ್ಯದ ಸರಣಿಯನ್ನು ಶ್ರೀಲಂಕಾ ಗೆದ್ದಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಟೆಸ್ಟ್​ ಆಡುವ ತಂಡದ ವಿರುದ್ಧ ಏಕದಿನ ಸರಣಿ ಗೆದ್ದಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.