ETV Bharat / sports

ಸೀಮಿತ ಓವರ್​ಗಳ ಸರಣಿ ಆಯೋಜಿಸುವಂತೆ ಬಿಸಿಸಿಐಗೆ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಮನವಿ

ಕೊರೊನಾ ಭೀತಿಯಿಂದ ಐಪಿಎಲ್​ ಸೇರಿದಂತೆ ಹಲವು ಟೂರ್ನಿಗಳು ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿವೆ. ಇಂತಹ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಜುಲೈನಲ್ಲಿ ಭಾರತ-ಶ್ರೀಲಂಕಾ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ಆಯೋಜಿಸುವಂತೆ ಬಿಸಿಸಿಐಗೆ ಮನವಿ ಮಾಡಿದೆ.

India vs Sri LAnka
India vs Sri LAnka
author img

By

Published : May 16, 2020, 10:54 AM IST

ಮುಂಬೈ: ಕಳೆದ ಮೂರು ತಿಂಗಳಿಂದ ಕೊರೊನಾ ಭೀತಿಯಿಂದ ಕ್ರಿಕೆಟ್​ ಜಗತ್ತು ಸ್ತಬ್ಧಗೊಂಡಿದ್ದು, ಯಾವುದೇ ಮಾದರಿಯ ಕ್ರಿಕೆಟ್​ ಪಂದ್ಯಗಳು ನಡೆದಿಲ್ಲ. ಇದೀಗ ಕೊರೊನಾ ಕೆಲವು ಭಾಗಗಗಳಲ್ಲಿ ಕಡಿಮೆಯಾಗುತ್ತಿದ್ದಂತೆ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಬಿಸಿಸಿಐ ಜೊತೆ ದ್ವಿಪಕ್ಷೀಯ ಸರಣಿ ಬಗ್ಗೆ ಮಾತನಾಡಿದೆ.

ಕೊರೊನಾ ‌ ಭೀತಿಯಿಂದ ಐಪಿಎಲ್​ ಸೇರಿದಂತೆ ಹಲವು ಟೂರ್ನಿಗಳು ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿವೆ. ಇಂತಹ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಜುಲೈನಲ್ಲಿ ಭಾರತ-ಶ್ರೀಲಂಕಾ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ಆಯೋಜಿಸುವಂತೆ ಬಿಸಿಸಿಐಗೆ ಮನವಿ ಮಾಡಿದೆ.

ಈಗಾಗಲೇ ಭಾರತ ಮತ್ತು ಶ್ರೀಲಂಕಾ ನಡುವೆ ಜೂನ್​-ಜುಲೈನಲ್ಲಿ 3 ಪಂದ್ಯಗಳ ಏಕದಿನ ಪಂದ್ಯ ಹಾಗೂ ಅಷ್ಟೇ ಟಿ-20 ಪಂದ್ಯಗಳ ಸರಣಿ ಆಯೋಜನೆಗೊಂಡಿದೆ. ಇದಕ್ಕಾಗಿ ಎಸ್​ಸಿಎಲ್​ ಬಿಸಿಸಿಐಗೆ ಸರಣಿ ಆಯೋಜನೆಗೆ ಇ ಮೇಲ್​ ಮೂಲಕ ಮನವಿ ಮಾಡಿದ್ದು, ಬಿಸಿಸಿಐ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದೆ.

ಈಗಾಗಲೇ ಕೊರೊನಾ ವೈರಸ್​ ಭೀತಿಯಿಂದ ಇಂಗ್ಲೆಂಡ್​ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟೆಸ್ಟ್​ ಸರಣಿ ಮಾರ್ಚ್​ನಲ್ಲಿ ರದ್ದುಗೊಂಡಿತ್ತು. ಒಂದು ವೇಳೆ ಭಾರತದ ವಿರುದ್ಧ ಈ ಸರಣಿ ನಡೆಯದಿದ್ದರೆ ಲಂಕಾ ಕ್ರಿಕೆಟ್​ ಮಂಡಳಿಯ ಖಜಾನೆಗೆ ದೊಡ್ಡ ಹೊಡೆತ ಬೀಳಲಿದೆ.

ಇದಕ್ಕು ಮೊದಲು ಶ್ರೀಲಂಕಾ ಕ್ರಿಕೆಟ್​ ಮಂಡಳಿ 13ನೇ ಆವೃತ್ತಿಯ ಐಪಿಎಲ್​​ಅನ್ನು ತನ್ನ ದೇಶದಲ್ಲಿ ಸುರಕ್ಷಿತವಾಗಿ ನಡೆಸಿಕೊಡಲು ಸಿದ್ಧ ಎಂದು ಬಿಸಿಸಿಐಗೆ ಆಫರ್​ ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.