ETV Bharat / sports

ಏಷ್ಯಾಕಪ್​ ಟೂರ್ನಿ ಆತಿಥ್ಯ ವಹಿಸಲು ಸಿದ್ಧವೆಂದ  ಶ್ರೀಲಂಕಾ ಕ್ರಿಕೆಟ್ ಮಂಡಳಿ - PCB

ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ ಮತ್ತು ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ಶ್ರೀಲಂಕಾದಲ್ಲಿ ಏಷ್ಯಾಕಪ್​ ನಡೆಸಲು ಒಪ್ಪಿಕೊಂಡಿವೆ ಎಂದು ಸಿಲ್ವಾ ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ಕೋವಿಡ್​ ಸಮಸ್ಯೆ ಹಾಗೂ ಭದ್ರತಾ ಸಮಸ್ಯೆ ಇರುವುದರಿಂದ ಯುಎಇನಲ್ಲಿ ನಡೆಸಬಹುದು ಎನ್ನಲಾಗಿತ್ತು.

ಶ್ರೀಲಂಕಾ ಕ್ರಿಕೆಟ್ ಮಂಡಳಿ
ಏಷ್ಯಾಕಪ್2020
author img

By

Published : Jun 10, 2020, 1:53 AM IST

ಕೊಲಂಬೊ: ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾಕಪ್​ ಟೂರ್ನಿಯನ್ನು ತಮ್ಮ ದೇಶದಲ್ಲಿ ನಡೆಸಲು ಶ್ರೀಲಂಕಾ ಕ್ರಿಕೆಟ್​ ಮಂಡಳಿ ಸಿದ್ಧವಿದೆ ಎಂದು ಎಸ್​ಎಲ್​ಸಿ ಅಧ್ಯಕ್ಷ ಶಮ್ಮಿ ಸಿಲ್ವಾ ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ ಮತ್ತು ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ಶ್ರೀಲಂಕಾದಲ್ಲಿ ಏಷ್ಯಾಕಪ್​ ನಡೆಸಲು ಒಪ್ಪಿಕೊಂಡಿವೆ ಎಂದು ಸಿಲ್ವಾ ತಿಳಿಸಿದ್ದಾರೆ.

ಈ ಬಾರಿಯ ಏಷ್ಯಾಕಪ್​ ಪಾಕಿಸ್ತಾನದಲ್ಲಿ ನಿಯೋಜನೆಗೊಂಡಿತ್ತು. ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ರಾಜಕೀಯ ಭಿನ್ನಾಭಿಪ್ರಾಯ ಅಡ್ಡಿಯಾಗಿರುವುದರಿಂದ ಪಿಸಿಬಿ ಅನಿವಾರ್ಯವಾಗಿ ಈ ತನ್ನ ಆತಿಥ್ಯವನ್ನು ಬೇರೆ ದೇಶಕ್ಕೆ ಬಿಟ್ಟಿಕೊಡಬೇಕಿತ್ತು. ಅಲ್ಲದೆ ಪಾಕಿಸ್ತಾನದಲ್ಲಿ ಕೋವಿಡ್-19​ ಸಮಸ್ಯೆ ಹಾಗೂ ಭದ್ರತಾ ಸಮಸ್ಯೆ ಇರುವುದರಿಂದ ಯುಎಇನಲ್ಲಿ ನಡೆಸಬಹುದು ಎನ್ನಲಾಗಿತ್ತು. ಇದೀಗ ಶ್ರೀಲಂಕಾದಲ್ಲಿ ನಡೆಸಲು ಕೂಡ ಪಿಸಿಬಿ ಸಮ್ಮತಿಸಿದೆ.

ನಾವು ಪಿಸಿಬಿ ಜೊತೆ ಏಷ್ಯಾಕಪ್​ ಕುರಿತು ಚರ್ಚಿಸಿದ್ದೇವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಏಷ್ಯಾಕಪ್​ ಟೂರ್ನಿಯನ್ನು ಶ್ರೀಲಂಕಾದಲ್ಲಿ ನಡೆಸಲು ಅವರು ಈಗಾಗಲೆ ಒಪ್ಪಿದ್ದಾರೆ ಎಂದು ಶಮ್ಮಿ ಸಿಲ್ವಾ ತಿಳಿಸಿದ್ದಾರೆ.

ಕಳೆದ 2018ರ ಟೂರ್ನಿಯಲ್ಲಿ ಭಾರತವು ಕೊನೆಯ ಎಸೆತದಲ್ಲಿ ಸಿಂಗಲ್​ ತೆಗೆಯುವ ಮೂಲಕ 3 ವಿಕೆಟ್​​​ಗಳ ರೋಚಕ ಜಯ ಸಾಧಿಸಿತ್ತು. ಇಲ್ಲಿಯವರೆಗೆ 14 ಏಷ್ಯಾಕಪ್ ಟೂರ್ನಿ​ ನಡೆದಿದ್ದು, ಭಾರತ 7 ಬಾರಿ, ಶ್ರೀಲಂಕಾ 5 ಬಾರಿ ಹಾಗೂ ಪಾಕಿಸ್ತಾನ 2 ಬಾರಿ ​ಚಾಂಪಿಯನ್​ ಪಟ್ಟ ಗಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.