ಪಲ್ಲೆಕೆಲೆ(ಶ್ರೀಲಂಕಾ): ಏಂಜೆಲೋ ಮ್ಯಾಥ್ಯೂಸ್ ಅದ್ಭುತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಶ್ರೀಲಂಕಾ ತಂಡ 6 ರನ್ಗಳ ರೋಚಕ ಗೆಲುವು ಸಾಧಿಸುವ ಮೂಲಕ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯನ್ನು 3-0ಯಲ್ಲಿ ಕ್ಲೀನ್ಸ್ವೀಪ್ ಸಾಧಿಸಿದೆ.
ಕೊನೆಯ ಓವರ್ನಲ್ಲಿ ವಿಂಡೀಸ್ ಗೆಲುವಿಗೆ 14 ರನ್ಗಳ ಅಗತ್ಯವಿತ್ತು. 8 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ಗೆ 13 ಎಸೆತಗಳಲ್ಲಿ 33 ರನ್ ಗಳಿಸಿದ್ದ ಫ್ಯಾಬಿಯನ್ ಅಲೆನ್ಏಕೈಕ ಭರವಸೆಯಾಗಿದ್ದರು. ಲಂಕಾದ ಅನುಭವಿ ಏಂಜೆಲೋ ಮ್ಯಾಥ್ಯೂಸ್ ಕೊನೆಯ ಓವರ್ ಎಸೆಯಲು ಸಿದ್ಧರಾಗಿದ್ದರು. ಮೊದಲ ಎಸೆತವನ್ನು ಫೋರ್ಗಟ್ಟಿದ ಅಲೆನ್ ನಂತರದ ಎಸೆತದಲ್ಲಿ ಔಟ್ ಆದರು. ಕೊನೆಯ 4 ಎಸೆತಗಳಲ್ಲಿ ಕೇವಲ 2 ರನ್ ಬಿಟ್ಟುಕೊಟ್ಟ ಮ್ಯಥ್ಯೂಸ್ ಲಂಕಾ ಪಾಲಿಗೆ ಹೀರೋ ಆದರು. ಶ್ರೀಲಂಕಾ ತಂಡ ಕೊನೆಯ ಏಕದಿನ ಪಂದ್ಯವನ್ನು 6 ರನ್ಗಳಿಂದ ಗೆಲ್ಲುವ ಮೂಲಕ 3-0ಯಲ್ಲಿ ಸರಣಿ ಕ್ಲೀನ್ಸ್ವೀಪ್ ಸಾಧನೆ ಮಾಡಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ ತಂಡ ಕುಶಾಲ್ ಮೆಂಡಿಸ್ (55), ಕರುಣರತ್ನೆ(44), ಕುಸಾಲ್ ಪೆರೆರಾ(44), ಧನಂಜಯ ಡಿ ಸಿಲ್ವಾ(51), ತಿಸರಾ ಪೆರೆರಾ(38) ಅವರ ಅಮೋಘ ಪ್ರದರ್ಶನದ ನೆರವಿನಿಂದ 301 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು.
-
🇱🇰 win by 6 runs! 🎉 👏
— ICC (@ICC) March 1, 2020 " class="align-text-top noRightClick twitterSection" data="
What a finish!
Angelo Mathews keeps his cool to deliver a clean sweep for Sri Lanka ❄️ #SLvWI pic.twitter.com/1QpfkC3Mk3
">🇱🇰 win by 6 runs! 🎉 👏
— ICC (@ICC) March 1, 2020
What a finish!
Angelo Mathews keeps his cool to deliver a clean sweep for Sri Lanka ❄️ #SLvWI pic.twitter.com/1QpfkC3Mk3🇱🇰 win by 6 runs! 🎉 👏
— ICC (@ICC) March 1, 2020
What a finish!
Angelo Mathews keeps his cool to deliver a clean sweep for Sri Lanka ❄️ #SLvWI pic.twitter.com/1QpfkC3Mk3
302 ರನ್ಗಳ ಗುರಿ ಪಡೆದ ವೆಸ್ಟ್ ಇಂಡೀಸ್ ಮೊದಲ ವಿಕೆಟ್ಗೆ ಶತಕದ ಜೊತೆಯಾಟ ನೀಡಿ ಉತ್ತಮ ಆರಂಭ ಪಡೆಯಿತಾದರೂ ಗುರಿ ಮುಟ್ಟುವಲ್ಲಿ ವಿಫಲವಾಯಿತು. ಆರಂಭಿಕರಾದ ಶಾಯ್ ಹೋಪ್(72) ಹಾಗೂ ಸುನಿಲ್ ಆ್ಯಂಬ್ರಿಸ್(60) ರನ್ಗಳಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಬಂದ ಪೂರನ್(50) ಹಾಗೂ ಪೊಲಾರ್ಡ್(49) ಉತ್ತಮ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಸನಿಹ ತಂದರು. ಆದರೆ ಪೊಲಾರ್ಡ್ ನಿರ್ಣಾಯಕ ಹಂತದಲ್ಲಿ ವಿಕೆಟ್ ಒಪ್ಪಿಸಿದ್ದರಿಂದ ವಿಂಡೀಸ್ಗೆ ಭಾರಿ ಹಿನ್ನಡೆಯಾಯಿತು.
ಪೊಲಾರ್ಡ್ ಔಟಾಗುತ್ತಿದ್ದಂತೆ, ಹೋಲ್ಡರ್(8), ಹೇಡನ್ ವಾಲ್ಸ್(2), ರೋಸ್ಟನ್ ಚೇಸ್(0), ಬಂದ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು. ಇನ್ನು ಫ್ಯಾಬಿಯನ್ ಅಲೆನ್ ಕೇವಲ 15 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 37 ರನ್ಗಳಿಸಿದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ.
ಈ ಗೆಲುವಿನೊಂದಿಗೆ ಶ್ರೀಲಂಕಾ ತವರಿನಲ್ಲಿ ಸತತ ಎರಡನೇ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಸಾಧಿಸಿದಂತಾಯಿತು. 4 ವಿಕೆಟ್ ಪಡೆದ ಏಂಜೆಲೋ ಮ್ಯಾಥ್ಯೂಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಆಲ್ರೌಂಡ್ ಆಟ ಪ್ರದರ್ಶನ ನೀಡಿದ ಹಸರಂಗ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.