ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ಗೆ ಚಮಿಂದಾ ವಾಸ್ಗೆ ಮಣೆ ಹಾಕಿರುವ ಕ್ರಿಕೆಟ್ ಶ್ರೀಲಂಕಾ ಇದೀಗ ಬೌಲಿಂಗ್ ವಿಭಾಗದ ಕೋಚ್ ಆಗಿ ನೇಮಕ ಮಾಡಿದೆ.
ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ಅವರು ಲಂಕಾ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ಆರಂಭ ಮಾಡಲಿದ್ದಾರೆ. ತಂಡದ ಬೌಲಿಂಗ್ ವಿಭಾಗದ ಕೋಚ್ ಆಗಿದ್ದ ಡೇವಿಡ್ ಸೆಕರ್ ರಾಜೀನಾಮೆ ನೀಡಿದ ಬಳಿಕ ವಾಸ್ಗೆ ಮಣೆ ಹಾಕಲಾಗಿದೆ.
ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಲಂಕಾ ಬೌಲರ್ ಧಮ್ಮಿಕಾ ಪ್ರಸಾದ್ ವಿದಾಯ
ಚಮಿಂದಾ ವಾಸ್ ಸದ್ಯ ರಾಷ್ಟ್ರೀಯ ತಂಡದ ಫಾಸ್ಟ್ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಲಂಕಾ ಕ್ರಿಕೆಟ್ ತಂಡದಲ್ಲಿದ್ದ ವೇಳೆ ವಾಸ್ 111 ಟೆಸ್ಟ್ ಪಂದ್ಯಗಳಿಂದ 355 ವಿಕೆಟ್ ಹಾಗೂ 322 ಏಕದಿನ ಪಂದ್ಯಗಳಿಂದ 400 ವಿಕೆಟ್ ಕಬಳಿಕೆ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಮಾರ್ಚ್ 3ರಿಂದ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದ್ದು, ಫೆ.23ರಂದು ತಂಡ ಪ್ರವಾಸ ಕೈಗೊಳ್ಳಲಿದೆ. ಪ್ರವಾಸದ ವೇಳೆ ಮೂರು ಟಿ-20, ಮೂರು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾಗಿಯಾಗಲಿದೆ.