ETV Bharat / sports

ಅಪ್ಪನಂತೆ ಮಕ್ಕಳು.. ಸೂಪರ್​ ಸಿಕ್ಸರ್​ ಸಿಡಿಸಿ ಮಿಂಚಿದ ವಾರ್ನರ್​ ಪುತ್ರಿಯರು : ವಿಡಿಯೋ - ಐಪಿಎಲ್ 2020

ವಾರ್ನರ್ ಮೈದಾನಕ್ಕೆ ಇಳಿದರೆ ಬೌಂಡರಿ ಸಿಕ್ಸರ್​ಗಳಿಗೆ ಬರ ಇರುವುದಿಲ್ಲ. ಅವರ ಆಟವನ್ನು ಐಪಿಎಲ್ ಮತ್ತು ಆಸ್ಟ್ರೇಲಿಯಾ ತಂಡದ ಪರ ಅವರು ಆಡುವಾಗ ಕ್ರಿಕೆಟ್​ ಅಭಿಮಾನಿಗಳು ನೋಡಿಯೇ ಇದ್ದಾರೆ. ಇದೀಗ ಅದೇ ಮಾದರಿಯಲ್ಲಿ ಅವರ ಹೆಣ್ಣುಮಕ್ಕಳು ಕೂಡ ಬ್ಯಾಟ್​ ಹಿಡಿದು ಸಿಕ್ಸರ್​ ಸಿಡಿಸುತ್ತಿದ್ದಾರೆ..

ಡೇವಿಡ್ ವಾರ್ನರ್​ ಮಕ್ಕಳು
ಡೇವಿಡ್ ವಾರ್ನರ್​ ಮಕ್ಕಳು
author img

By

Published : Nov 22, 2020, 7:18 PM IST

ನ್ಯೂ ಸೌತ್ ವೇಲ್ಸ್ ​: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸ್ಫೋಟಕ ಬ್ಯಾಟ್ಸ್​ಮನ್​ ಆಗಿ ಮಿಂಚುತ್ತಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ತಮ್ಮ ಮಕ್ಕಳನ್ನು ಚಿಕ್ಕಂದಿನಿಂದಲೇ ಕ್ರಿಕೆಟ್​ನಲ್ಲಿ ಬೆಳೆಯಲು ತಯಾರು ಮಾಡುತ್ತಿದ್ದಾರೆ.

ವಾರ್ನರ್ ಮೈದಾನಕ್ಕೆ ಇಳಿದರೆ ಬೌಂಡರಿ ಸಿಕ್ಸರ್​ಗಳಿಗೆ ಬರ ಇರುವುದಿಲ್ಲ. ಅವರ ಆಟವನ್ನು ಐಪಿಎಲ್ ಮತ್ತು ಆಸ್ಟ್ರೇಲಿಯಾ ತಂಡದ ಪರ ಅವರು ಆಡುವಾಗ ಕ್ರಿಕೆಟ್​ ಅಭಿಮಾನಿಗಳು ನೋಡಿಯೇ ಇದ್ದಾರೆ. ಇದೀಗ ಅದೇ ಮಾದರಿಯಲ್ಲಿ ಅವರ ಹೆಣ್ಣುಮಕ್ಕಳು ಕೂಡ ಬ್ಯಾಟ್​ ಹಿಡಿದು ಸಿಕ್ಸರ್​ ಸಿಡಿಸುತ್ತಿದ್ದಾರೆ.

ವಾರ್ನರ್​ ಮಕ್ಕಳಾದ ಐವಿ ಮೇ ಮತ್ತು ಇಂಡಿ ರೇ ಕ್ರಿಕೆಟ್​ ಆಡುವ ಮುದ್ದಾದ ವಿಡಿಯೋವನ್ನು ಡೇವಿಡ್​ ವಾರ್ನರ್​ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ಶೇರ್ ಮಾಡಿಕೊಂಡಿದೆ.

ವಿಡಿಯೋದಲ್ಲಿ ವಾರ್ನರ್​ ವೈಫ್​ ಬೌಲಿಂಗ್ ಮಾಡುತ್ತಿದ್ದು, ಎರಡನೇ ಮಗಳಾದ ಇಂಡಿ ರೇ ಸಿಕ್ಸರ್​ ಸಿಡಿಸುತ್ತಿದ್ದರೆ, ಮೊದಲನೇ ಮಗಳಾದ ಐವಿ ಮೇ ಚೆಂಡನ್ನು ಬಾರಿಸಿ 2 ರನ್​ ಗಳಿಸುತ್ತಿದ್ದಾರೆ. ಈ ವಿಡಿಯೋವನ್ನು ಹತ್ತಿರದಿಂದ ವಾರ್ನರ್​ ನೋಡಿ ಸಂಭ್ರಮಿಸುತ್ತಿದ್ದಾರೆ. ಅಲ್ಲದೆ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಾರ್ನರ್​ ದಂಪತಿ ತಮ್ಮ ಮಕ್ಕಳ ಜೊತೆ ಲಾಕ್​ಡೌನ್ ಸಂದರ್ಭದಲ್ಲಿ ಕೂಡ ಟಿಕ್​ಟಾಕ್​ನಲ್ಲಿ ಡ್ಯಾನ್ಸ್​, ತೆಲುಗು ಸಿನಿಮಾಗಳ ಡೈಲಾಗ್​ಗಳನ್ನು ಬಳಸಿ ಲಕ್ಷಾಂತರ ಅಭಿಮಾನಿಗಳನ್ನು ರಂಜಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.