ಚೆನ್ನೈ: ಮುಂಬೈ ವಿರುದ್ಧ ನಿನ್ನೆ ನಡೆದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು. ಪಂದ್ಯದ ವೇಳೆ ದುರುಗುಟ್ಟಿ ನೋಡಿದ ಬೌಲರ್ ಶ್ರೀಶಾಂತ್ಗೆ ಯಶಸ್ವಿ ಜೈಸ್ವಾಲ್ ಸಖತ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಕೇರಳ ಪರ ಶತಕ ಸಿಡಿಸಿದ ಅಜರುದ್ದೀನ್ಗೆ ಬಂಪರ್: 1 ರನ್ಗೆ 1,000 ರೂ.ನಂತೆ ಬಹುಮಾನ!
37 ವರ್ಷದ ಶ್ರೀಶಾಂತ್ ಅನೇಕ ವರ್ಷಗಳ ನಂತರ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, ತಾವು ಆಡಿದ ಮೊದಲ ಪಂದ್ಯದಲ್ಲೇ ವಿಕೆಟ್ ಪಡೆದು ಗಮನ ಸೆಳೆದಿದ್ದರು. ಆದರೆ ನಿನ್ನೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಕೇವಲ 4 ಓವರ್ಗಳಲ್ಲಿ 47ರನ್ ನೀಡಿ ದುಬಾರಿ ಆದರು. ಇದರ ಮಧ್ಯೆ ಮುಂಬೈ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಜೈಸ್ವಾಲ್ ಅವರನ್ನು ಬೌಲಿಂಗ್ ಮಾಡ್ತಿದ್ದ ವೇಳೆ ದುರುಗುಟ್ಟಿ(ದಿಟ್ಟಿಸಿ) ನೋಡಿದ್ದರಿಂದ ಬ್ಯಾಟ್ಸ್‌ಮನ್ ಸರಿಯಾಗಿ ತಿರುಗೇಟು ನೀಡಿದ್ದಾರೆ.
- — Sandybatsman (@sandybatsman) January 14, 2021 " class="align-text-top noRightClick twitterSection" data="
— Sandybatsman (@sandybatsman) January 14, 2021
">— Sandybatsman (@sandybatsman) January 14, 2021
ಶ್ರೀಶಾಂತ್ ಬೌಲಿಂಗ್ ಮಾಡುತ್ತಿದ್ದ ವೇಳೆ ಜೈಸ್ವಾಲ್ಗೆ ಆಕ್ರೋಶದಿಂದ ನೋಡಿದ್ದಾರೆ. ಇದಕ್ಕೆ ಸೇಡು ತೀರಿಸಿಕೊಂಡಿರುವ ಜೈಸ್ವಾಲ್ ನಂತರದ ಎರಡು ಎಸೆತಗಳನ್ನು ಸಿಕ್ಸರ್ಗೆ ಅಟ್ಟಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಜೈಸ್ವಾಲ್ 32 ಎಸೆತಗಳಲ್ಲಿ ಎರಡು ಸಿಕ್ಸರ್, ನಾಲ್ಕು ಬೌಂಡರಿ ಸೇರಿದಂತೆ 4 0ರನ್ ಗಳಿಕೆ ಮಾಡಿದ್ದಾರೆ.