ETV Bharat / sports

ಕೊಹ್ಲಿಯನ್ನು ಹೆಚ್ಚು ಬಾರಿ ಔಟ್​ ಮಾಡಿದ ದಾಖಲೆ ಬರೆದ ಕಿವೀಸ್​ ಸ್ಟಾರ್​ ಬೌಲರ್​ - ಭಾರತ- ನ್ಯೂಜಿಲ್ಯಾಂಡ್​ ಟೆಸ್ಟ್​ ಸರಣಿ

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ನ್ಯೂಜಿಲ್ಯಾಂಡ್​ ಪ್ರವಾಸದಲ್ಲಿ ತಮ್ಮ ಬ್ಯಾಟಿಂಗ್​ ವೈಫಲ್ಯವನ್ನು ಮುಂದುವರಿಸಿದ್ದಾರೆ. ಎರಡನೇ ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿ ಸೌಥಿ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಅಂಪೈರ್ ತೀರ್ಪಿನ ವಿರುದ್ಧ ರಿವ್ಯೂವ್​ ತೆಗದುಕೊಂಡರು ಕೊಹ್ಲಿ ಸೌಥಿ ಬಲೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ.

New India vs New Zealand
ವಿರಾಟ್​ ಕೊಹ್ಲಿ
author img

By

Published : Feb 29, 2020, 6:12 PM IST

ಕ್ರೈಸ್ಟ್​ಚರ್ಚ್​: ಕಿವೀಸ್​ ಬೌಲರ್​ ಟಿಮ್​ ಸೌಥಿ ಎರಡನೇ ಟೆಸ್ಟ್​ ಪಂದ್ಯದಲ್ಲಿ ರನ್​ ಮಷಿನ್ ವಿರಾಟ್​ ಕೊಹ್ಲಿಯನ್ನು ಎಲ್​ಬಿಡಬ್ಲ್ಯೂ ಬಲೆಗೆ ಬೀಳಿಸುವ ಮೂಲಕ ಹೆಚ್ಚು 10ನೇ ಬಾರಿ ಕೊಹ್ಲಿ ವಿರುದ್ಧ ಮೇಲುಗೈ ಸಾಧಿಸಿದ್ದಾರೆ.

ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ನ್ಯೂಜಿಲ್ಯಾಂಡ್​ ಪ್ರವಾಸದಲ್ಲಿ ತಮ್ಮ ಬ್ಯಾಟಿಂಗ್​ ವೈಫಲ್ಯವನ್ನು ಮುಂದುವರಿಸಿದ್ದಾರೆ. ಎರಡನೇ ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿ ಸೌಥಿ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಅಂಪೈರ್ ತೀರ್ಪಿನ ವಿರುದ್ಧ ರಿವ್ಯೂವ್​ ತೆಗದುಕೊಂಡರೂ ಸೌಥಿ ಬಲೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ.

India vs New Zealand
ಟಿಮ್​ ಸೌಥಿ

ಟಿಮ್​ ಸೌಥಿ ಕೊಹ್ಲಿಯನ್ನು 10ನೇ ಬಾರಿ ಔಟ್​ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿಹೆಚ್ಚು ರನ್​ಮಷಿನ್​ ವಿಕೆಟ್​ ಪಡೆದ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾದರು. ಸೌಥಿ ಟೆಸ್ಟ್​ನಲ್ಲಿ 3 ಬಾರಿ, ಏಕದಿನ ಕ್ರಿಕೆಟ್​ನಲ್ಲಿ 6 ಬಾರಿ, ಹಾಗೂ ಟಿ20 ಕ್ರಿಕೆಟ್​ನಲ್ಲಿ ಒಮ್ಮೆ ಕೊಹ್ಲಿಯನ್ನು ಔಟ್​ ಮಾಡಿದ್ದಾರೆ.

India vs New Zealand
ಕಿವೀಸ್​ ಪ್ರವಾಸದಲ್ಲಿ ಕೊಹ್ಲಿ ರನ್​ಗಳಿಕೆ

ಸೌಥಿ ಬಿಟ್ಟರೆ ಜೇಮ್ಸ್​ ಆ್ಯಂಡರ್ಸನ್​ 8, ಗ್ರೇಮ್​ ಸ್ವಾನ್​ 8, ಮಾರ್ನ್​ ಮಾರ್ಕೆಲ್​, ಆ್ಯಡಂ ಜಂಪಾ, ನಥನ್​ ಲಿಯೋನ್​, ಹಾಗೂ ರವಿ ರಾಂಪಾಲ್​ ತಲಾ 7 ಬಾರಿ ಕೊಹ್ಲಿ ವಿಕೆಟ್​ ಪಡೆದಿದ್ದಾರೆ.

ಕೊಹ್ಲಿ ಮೊದಲ ಟೆಸ್ಟ್​ನಲ್ಲಿ 2 ರನ್​ ಹಾಗೂ 19 ರನ್​ಗೆ ವಿಕೆಟ್​ ಒಪ್ಪಿಸಿದ್ದರು. ನಂತರ ಎರಡನೇ ಟೆಸ್ಟ್​ನಲ್ಲಿ 3 ರನ್​ಗೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ.

31 ವರ್ಷದ ಕೊಹ್ಲಿ ಕೊನೆಯ ಬಾರಿ 3 ಅಂಕಿ ಮೊತ್ತ ದಾಟಿ 21 ಇನ್ನಿಂಗ್ಸ್​ ಕಳೆದಿದೆ. ಕಳೆದ ವರ್ಷ ಬಾಂಗ್ಲಾದೇಶದ ವಿರುದ್ಧ ಕೊನೆಯ ಬಾರಿ ಶತಕ ಸಿಡಿಸಿದ್ದರು. ಕೊಹ್ಲಿ ಆ ಪಂದ್ಯದಲ್ಲಿ 136 ರನ್​ಗಳಿಸಿದ್ದರು.

ಮೊದಲ ಟೆಸ್ಟ್​ನಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದ ಕೊಹ್ಲಿ ಐಸಿಸಿ ಟೆಸ್ಟ್​ ಶ್ರೇಯಾಂಕದಲ್ಲೂ ನಂಬರ್​ ಒನ್​ ಸ್ಥಾನದಿಂದ ಕುಸಿದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.