ETV Bharat / sports

ಪ್ರಿನ್ಸ್​ ಆಫ್​ ಕೋಲ್ಕತ್ತಾ ಹೆಗಲಿಗೆ ಬಿಸಿಸಿಐ ಸಾರಥ್ಯ.. ಇಷ್ಟೆಲ್ಲ ಕೆಲಸ ನಿರ್ವಹಿಸಬೇಕು ಗಂಗೂಲಿ! - ಸೌರವ್​ ಗಂಗೂಲಿ

ವಿಶ್ವ ಕ್ರಿಕೆಟ್​ನಲ್ಲೇ ಶ್ರೀಮಂತ ಕ್ರಿಕೆಟ್​ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನ ಅಲಂಕರಿಸಲಿರುವ ಸೌರವ್​ ಗಂಗೂಲಿ ಹಲವು ಜವಾಬ್ದಾರಿಗಳನ್ನ ನಿರ್ವಹಿಸಬೆಕಾಗುತ್ತದೆ.

ಸೌರವ್ ಗಂಗೂಲಿ
author img

By

Published : Oct 17, 2019, 10:06 PM IST

ಮುಂಬೈ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಇದೇ 23 ರಂದು ಬಿಸಿಸಿಐ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದು, ಅವರ ಹೆಗಲಿಗೆ ಸಾಕಷ್ಟು ಜವಾಬ್ದಾರಿ ಬೀಳಲಿವೆ.

ಬಿಸಿಸಿಐ ಅಧ್ಯಕ್ಷ ಸ್ಥಾನ ಎಂಬುದು ಭಾರತೀಯ ಕ್ರಿಕೆಟ್ ಸಂಸ್ಥೆಯಲ್ಲಿ ಅತ್ಯುನ್ನತ ಹುದ್ದೆಯಾಗಿದೆ. ಇದೊಂದು ಗೌರವಯುತ ಸ್ಥಾನವಾಗಿದ್ದು, ಭಾರತದಲ್ಲಿ ಆಟದ ಜನಪ್ರಿಯತೆ ಮತ್ತು ಸಂಸ್ಥೆಯ ಆರ್ಥಿಕ ಪ್ರಭಾವದಿಂದಾಗಿ ಮತ್ತಷ್ಟು ಪ್ರತಿಷ್ಠಿತ ಹುದ್ದೆ ಎಂದು ಪರಿಗಣಿಸಲಾಗಿದೆ.

ಬಿಸಿಸಿಐನ ಜ್ಞಾಪಕ ಪತ್ರ, ನಿಯಮಗಳು ಮತ್ತು ನಿಬಂಧನೆಗಳಲ್ಲಿನ 'ಪದಾಧಿಕಾರಿಗಳ ಅಧಿಕಾರ ಮತ್ತು ಕರ್ತವ್ಯಗಳ' ಪ್ರಕಾರ, ಅಧ್ಯಕ್ಷರು ಸಾಮಾನ್ಯ ಸಂಸ್ಥೆ ಮತ್ತು ಸುಪ್ರೀಂ ಕೌನ್ಸಿಲ್‌ನ ಸಭೆಗಳಲ್ಲಿ ಅಧ್ಯಕ್ಷತೆ ವಹಿಸುತ್ತಾರೆ. ಬಿಸಿಸಿಐನ ಲೆಕ್ಕಪರಿಶೋಧಿತ ವಾರ್ಷಿಕ ಖಾತೆಗಳು ಮತ್ತು ಇತರ ಹಣಕಾಸು ಹೇಳಿಕೆಗೆ ಸಹಿ ಮಾಡುವ ಮೂವರಲ್ಲಿ ಅಧ್ಯಕ್ಷರು ಕೂಡ ಒಬ್ಬರಾಗಿರುತ್ತಾರೆ

Sourav Ganguly
ಸೌರವ್ ಗಂಗೂಲಿ

ಭಾರತದಲ್ಲಿನ ಕ್ರಿಕೆಟ್ ಆಟದ ಗುಣಮಟ್ಟ ಮತ್ತು ಮಾನದಂಡಗಳನ್ನು ನಿಯಂತ್ರಿಸಲು ಮತ್ತು ಸುಧಾರಿಸಲು, ಕ್ರಿಕೆಟ್ ಆಟಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿ ನೀತಿಗಳು, ಮರ್ಗಸೂಚಿಗಳನ್ನ ರೂಪಿಸುವುದು. ನಿಯಮಗಳನ್ನ ಮಾಡುವುದು, ಅವುಗಳನ್ನು ತಿದ್ದುಪಡಿ ಅಥವಾ ಬದಲಾಯಿಸುವುದು. ಆಟಗಾರರು ಮತ್ತು ಕ್ರಿಕೆಟ್​ ಅಭಿಮಾನಿಗಳ ಪ್ರಾಥಮಿಕ ಮಧ್ಯಸ್ಥಗಾರರಾಗಿ ಬಿಸಿಸಿಐ ಅಧ್ಯಕ್ಷರು ಕಾರ್ಯ ನಿರ್ವಹಿಸುತ್ತಾರೆ.

ಬಿಸಿಸಿಐ ಅಧ್ಯಕ್ಷರ ಕೆಲಸಗಳೇನು ಗೊತ್ತಾ?

  • ಕ್ರಿಕೆಟ್ ಆಟದ ಪ್ರಚಾರ ಮತ್ತು ಅಭಿವೃದ್ಧಿಗೆ ಅಗತ್ಯವಾದ ಕ್ರಮ ಕೈಗೊಳ್ಳುವುದು.
  • ಕ್ರಿಕೆಟಿಗರ ಕಲ್ಯಾಣ ಮತ್ತು ಕ್ರಿಕೆಟ್ ಆಟದಲ್ಲಿ ಅನೈತಿಕ ಮತ್ತು ಅನ್ಯಾಯದ ಅಭ್ಯಾಸಗಳನ್ನು ನಿರ್ಮೂಲನೆ ಮಾಡುವುದು. ಈ ಉದ್ದೇಶಕ್ಕಾಗಿ, ಕೋಚಿಂಗ್​ಗಳನ್ನ ಆಯೋಜಿಸಿ, ಕೋಚಿಂಗ್ ಅಕಾಡೆಮಿಗಳನ್ನು ಸ್ಥಾಪಿಸಿ, ಪಂದ್ಯಾವಳಿ, ಪ್ರದರ್ಶನ ಪಂದ್ಯಗಳು, ಟೆಸ್ಟ್ ಪಂದ್ಯಗಳು, ಏಕದಿನ ಪಂದ್ಯಗಳು, ಟಿ-20 ಮತ್ತು ಇನ್ನಾವುದೇ ಪಂದ್ಯಗಳನ್ನು ನಡೆಸಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳುವುದು.
  • ಕ್ರಿಕೆಟ್ ಆಟ, ಅದರ ಆಡಳಿತ, ಆಡಳಿತದಲ್ಲಿ ಕ್ರೀಡಾಪಟುತ್ವ ಮತ್ತು ವೃತ್ತಿಪರತೆಗಾಗಿ ಶ್ರಮಿಸುವುದು.
  • ಆಟಗಾರರು, ತಂಡದ ಅಧಿಕಾರಿಗಳು, ಅಂಪೈರ್‌ಗಳು ಮತ್ತು ನಿರ್ವಾಹಕರಲ್ಲಿ ಪಾರದರ್ಶಕತೆ ಮತ್ತು ನೈತಿಕ ಮಾನದಂಡಗಳ ತತ್ವಗಳನ್ನು ಬೆಳೆಸುವುದು.
  • ಡೋಪಿಂಗ್, ವಯಸ್ಸಿನ ವಂಚನೆ, ಲೈಂಗಿಕ ಕಿರುಕುಳ ಮತ್ತು ಇತರ ಎಲ್ಲ ರೀತಿಯ ಅಸಮಾನತೆ ಮತ್ತು ತಾರತಮ್ಯಗಳನ್ನು ನಿಷೇಧಿಸುವುದು.
  • ರಾಜ್ಯ, ಪ್ರಾದೇಶಿಕ ಅಥವಾ ಇತರ ಕ್ರಿಕೆಟ್ ಸಂಘಗಳ ರಚನೆ.
  • ಅಂತರ ರಾಜ್ಯ ಮತ್ತು ಇತರ ಪಂದ್ಯಾವಳಿಗಳ ಸಂಘಟನೆ.
  • ಅಗತ್ಯವಿದ್ದರೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸದಸ್ಯ ರಾಷ್ಟ್ರಗಳಿಂದ ಭಾರತಕ್ಕೆ ಬರುವ ಹಣಕಾಸು ವ್ಯವಹಾರವನ್ನ ವ್ಯವಸ್ಥೆಗೊಳಿಸಿ, ನಿಯಂತ್ರಿಸುವುದು.

ಬಿಸಿಸಿಐ ಅಧ್ಯಕ್ಷ ಸ್ಥಾನವನ್ನ ಅಲಂಕರಿಸಲಿರುವ ಸೌರವ್​ ಗಂಗೂಲಿ ಈ ಎಲ್ಲ ಕರ್ತವ್ಯವನ್ನ ನಿರ್ವಹಿಸಬೇಕಿದೆ. ಈ ಬಗ್ಗೆ ಮಾತನಾಡಿರುವ ಗಂಗೂಲಿ ಪ್ರಥಮ ದರ್ಜೆ ಕ್ರಿಕೆಟಿಗರ ಬಗ್ಗೆ ಗಮನ ಕೊಡುವುದೇ ನನ್ನ ಮೊದಲ ಆಧ್ಯತೆಯಾಗಿದೆ ಎಂದಿದ್ದಾರೆ.

Intro:Body:

news

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.