ETV Bharat / sports

ಸೌರವ್​ ಗಂಗೂಲಿ, ಜಯ್​ ಶಾ ಭವಿಷ್ಯ ಇಂದು ಸುಪ್ರೀಂನಲ್ಲಿ ನಿರ್ಧಾರ

author img

By

Published : Jul 22, 2020, 12:33 PM IST

Updated : Jul 22, 2020, 1:16 PM IST

ಗಂಗೂಲಿ ಹಾಗೂ ಜಯ್​ ಶಾ ಮುಂದುವರಿಕೆಗೆ ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ಇಂದು ಸುಪ್ರೀಂಕೋರ್ಟ್​​ನಲ್ಲಿ ನಡೆಯಲಿದೆ. ಭಾರತದ ಮುಖ್ಯ ನ್ಯಾಯಮೂರ್ತಿ(ಸಿಐಜೆ) ಎಸ್​ಎ ಬೊಬ್ಡೆ ಹಾಗೂ ಎಲ್​ ನಾಗೇಶ್ವರ್​ ರಾವ್​ ನೇತೃತ್ವದ ದ್ವಿಸದಸ್ಯ ಪೀಠ ಇಂದು ಈ ಅರ್ಜಿಯ ವಿಚಾರಣೆ ನಡೆಸಲಿದೆ.

ಸೌರವ್​ ಗಂಗೂಲಿ, ಜಯ ಶಾ
ಸೌರವ್​ ಗಂಗೂಲಿ, ಜಯ ಶಾ

ನವದೆಹಲಿ: ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹಾಗೂ ಕಾರ್ಯದರ್ಶಿ ಅಧಿಕಾರವಧಿ ಈ ತಿಂಗಳಿಗೆ ಕೊನೆಯಾಗಲಿದೆ. ಆದರೆ ಬಿಸಿಸಿಐ ಅಧ್ಯಕ್ಷರಾಗಿ ಸೌರವ್​ ಗಂಗೂಲಿ ಅವರನ್ನ 2025ರವರೆಗೆ ಮುಂದುವರಿಸಬೇಕು ಎಂಬ ಬಿಸಿಸಿಐನ ಮನವಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಇಂದು ನಡೆಸಲಿದೆ.

ಸಿಜೆಐ ಎಸ್​​ ಎ ಬೊಬ್ಡೆ ಹಾಗೂ ಎಲ್​ ನಾಗೇಶ್ವರ್​ ರಾವ್​ ನೇತೃತ್ವದ ದ್ವಿಸದಸ್ಯ ಪೀಠ, ಗಂಗೂಲಿ ಹಾಗೂ ಜಯ್​ ಶಾ ಮುಂದುವರಿಕೆ ಕುರಿತಂತೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಗಂಗೂಲಿ ಬಂಗಾಳ​ ಕ್ರಿಕೆಟ್​ ಅಸೋಸಿಯೇಷನ್​ ಅಧ್ಯಕ್ಷರಾಗಿ 5 ವರ್ಷ ಪೂರೈಸಿದ್ದಾರೆ. ಹಾಗೂ ಜಯ್​ ಶಾ ಕೂಡ ಗುಜರಾತ್​ ಕ್ರಿಕೆಟ್​ ಅಸೋಸಿಯೇಷನ್​ನಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಿಸಿಸಿಐ ಸಂವಿಧಾನದ 6.4 ನಿಯಮದ ಪ್ರಕಾರ ರಾಜ್ಯ ಕ್ರಿಕೆಟ್​ ಸಂಸ್ಥೆಯಲ್ಲಿ 6 ವರ್ಷಗಳ ಸೇವೆ ಸಲ್ಲಿಸಿದವರು ಮುಂದಿನ ಮೂರು ವರ್ಷಗಳ ಕಾಲ ಕ್ರಿಕೆಟ್​ ಸಂಸ್ಥೆಯ ಹುದ್ದೆಯಿಂದ ದೂರ ಉಳಿಯಬೇಕಾಗಿದೆ.

ಈ ತಿಂಗಳ ಅಂತ್ಯಕ್ಕೆ ಗಂಗೂಲಿ ಕ್ರಿಕೆಟ್​ ಸಂಸ್ಥೆಯ ಉನ್ನತ ಹುದ್ದೆಯಲ್ಲಿ 6 ವರ್ಷ ಪೂರೈಸಲಿದ್ದಾರೆ ಹಾಗೂ ಜಯ್​ ಶಾ ಈಗಾಗಲೆ 6 ವರ್ಷಗಳನ್ನು ಪೂರೈಸಿದ್ದಾರೆ.

ಏಪ್ರಿಲ್​ 21ರಂದು ಬಿಸಿಸಿಐ ಅಪೆಕ್ಸ್​ ಕೋರ್ಟ್​ನಲ್ಲಿ ಗಂಗೂಲಿ ಮತ್ತು ಜಯ್​ ಶಾ ಅವರನ್ನು 2025ರವರೆಗೆ ಅಧಿಕಾರದಲ್ಲಿ ಮುಂದುವರಿಯುವಂತೆ ಬಿಸಿಸಿಐ ಸಂವಿಧಾನ ತಿದ್ದುಪಡಿಗೆ ಅವಕಾಶ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್​ಗೆ ಮನವಿ ಮಾಡಿತ್ತು.

Last Updated : Jul 22, 2020, 1:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.