ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಚೇತಿರಿಸಿಕೊಳ್ಳುತ್ತಿದ್ದಾರೆ ಮತ್ತು ಅವರ ಪ್ರಮುಖ ಪ್ಯಾರಾಮೀಟರ್ಸ್ ಸ್ಥಿರವಾಗಿವೆ ಎಂದು ಅಪೋಲೋ ಗ್ಲೆನೇಗ್ಲೆಸ್ ಆಸ್ಪತ್ರೆ ಶನಿವಾರ ಹೇಳಿಕೆ ಬಿಡುಗಡೆ ಮಾಡಿದೆ.
ಜನವರಿ 28, 2021ರಂದು ಕೋಲ್ಕತ್ತಾದ ಅಪೊಲೊ ಗ್ಲೆನೆಗಲ್ಸ್ ಆಸ್ಪತ್ರೆಯಲ್ಲಿ ಆ್ಯಂಜಿಯೋಪ್ಲ್ಯಾಸ್ಟಿಗೆ ಒಳಗಾಗಿರುವ ಸೌರವ್ ಗಂಗೂಲಿಯನ್ನು ಇಂದು ಡಾ. ಅಫ್ತಾಬ್ ಖಾನ್ ಪರೀಕ್ಷಿಸಿದ್ದಾರೆ. ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ಅವರ ಎಲ್ಲಾ ಪ್ರಮುಖ ನಿಯತಾಂಕಗಳು(ಪ್ಯಾರಾಮೀಟರ್ಸ್) ಸ್ಥಿರವಾಗಿವೆ" ಎಂದು ಆಸ್ಪತ್ರೆ ಬಿಡುಗಡೆ ಮಾಡಿರುವ ವೈದ್ಯಕೀಯ ಬುಲೆಟಿನ್ ತಿಳಿಸಿದೆ.
ಶುಕ್ರವಾರ ಗಂಗೂಲಿ ಅವರನ್ನು ಸಿಸಿಯು(ಕ್ರಿಟಿಕಲ್ ಕೇರ್ ಯುನಿಟ್)ನಿಂದ ಖಾಸಗಿ ವಾರ್ಡ್ಗೆ ಸ್ಥಳಾಂತರಿಸಲಾಗಿತ್ತು. ಗುರುವಾರ ಗಂಗೂಲಿ ಎರಡನೇ ಸುತ್ತಿನ ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿದ್ದರು. ಅವರ ಕೊರೋನರಿ ಆರ್ಟರಿ(ಪರಿಧಮನಿಯ ಅಪಧಮನಿ) ಯಲ್ಲಿ ಎರಡು ಸ್ಟಂಟ್ಗಳನ್ನು ಅಳವಡಿಸಲಾಗಿತ್ತು.
ಜನವರಿಯ ಆರಂಭದಲ್ಲಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಗಂಗೂಲಿ ವುಡ್ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಆ್ಯಂಜಿಯೊಪ್ಲಾಸ್ಟಿಗೆ ಒಳಗಾಗಿದ್ದರು. ನಂತರ ಚೇತರಿಸಿಕೊಂಡಿದ್ದ ಅವರಿಗೆ ಮತ್ತೆ ಬುಧವಾರ ಸಣ್ಣ ಎದೆ ನೋವು ಕಾಣಿಸಿದ್ದರಿಂದ ಮತ್ತೆ ಅಪೋಲೋ ಆಸ್ಪತ್ರಗೆ ದಾಖಲಾಗಿದ್ದರು.
ಇದನ್ನು ಓದಿ:ಆಸ್ಟ್ರೇಲಿಯಾ ಸರಣಿ ಸೋತರೂ ಸಂಭ್ರಮಿಸಿದ ವಾರ್ನರ್ ಮಗಳು... ಯಾಕೆ ಗೊತ್ತಾ!?