ETV Bharat / sports

ಮಹಿಳಾ ಟಿ-20 ರ‍್ಯಾಂಕಿಂಗ್‌ ಪ್ರಕಟ: ಟಾಪ್​-10 ನಲ್ಲಿ ಮೂವರು ಭಾರತೀಯ ಆಟಗಾರ್ತಿಯರು

author img

By

Published : Feb 14, 2020, 9:24 PM IST

ಮಹಿಳಾ ಟಿ-20 ಕ್ರಿಕೆಟ್​ ಆಟಗಾರ್ತಿಯರ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಗೊಂಡಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾದ ಮೂವರು ಆಟಗಾರ್ತಿಯರು ಟಾಪ್-10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

Smriti Mandhana, ಸ್ಮೃತಿ ಮಂಧಾನ
ಸ್ಮೃತಿ ಮಂಧಾನ

ದುಬೈ: ಐಸಿಸಿ ಮಹಿಳಾ ಟಿ-20 ಅಂತಾರಾಷ್ಟ್ರೀಯ ಬ್ಯಾಟಿಂಗ್ ವಿಭಾಗದ ರ‍್ಯಾಂಕಿಂಗ್‌ ಪ್ರಕಟವಾಗಿದ್ದು, ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮೂರು ಸ್ಥಾನ ಏರಿಕೆ ಕಂಡು ನಾಲ್ಕನೇ ಸ್ಥಾನದಲ್ಲಿದ್ದಾರೆ.

There's been plenty of movement in the @MRFWorldwide Women's T20I rankings ahead of the #T20WorldCup 🔥

➡️ https://t.co/Mi1Wnw7DcI pic.twitter.com/FW8tMk4w92

— ICC (@ICC) February 14, 2020

ಭಾರತ ತಂಡದ ಮತ್ತೊಬ್ಬ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಮತ್ತೊಬ್ಬ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ 9 ನೇ ಸ್ಥಾನದಲ್ಲಿಯೇ ಉಳಿದಿದ್ದಾರೆ. ಬ್ಯಾಟಿಂಗ್​ ವಿಭಾಗದಲ್ಲಿ ಕಿವೀಸ್ ಆಟಗಾರ್ತಿ ಸುಜೈ ಬೇಟ್ಸ್​ (Suzie Bates) ಪ್ರಥಮ ಸ್ಥಾನದಲ್ಲಿದ್ದಾರೆ.

ಬೌಲರ್​ಗಳ ಪಟ್ಟಿಯಲ್ಲಿ ರಾಧ ಯಾದವ್ ಮೂರರಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು, ಮತ್ತೊಬ್ಬ ಆಟಗಾರತಿ ದೀಪ್ತಿ ಶರ್ಮಾ ಐದನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಆಟಗಾರ್ತಿ ಮೇಗನ್ ಸ್ಕಟ್(Megan Schutt) ಮೊದಲ ಸ್ಥಾನದಲ್ಲಿದ್ರೆ, ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್(Shabnim Ismail) ದ್ವಿತೀಯ ಸ್ಥಾನದಲ್ಲಿದ್ದಾರೆ.

ದುಬೈ: ಐಸಿಸಿ ಮಹಿಳಾ ಟಿ-20 ಅಂತಾರಾಷ್ಟ್ರೀಯ ಬ್ಯಾಟಿಂಗ್ ವಿಭಾಗದ ರ‍್ಯಾಂಕಿಂಗ್‌ ಪ್ರಕಟವಾಗಿದ್ದು, ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮೂರು ಸ್ಥಾನ ಏರಿಕೆ ಕಂಡು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಭಾರತ ತಂಡದ ಮತ್ತೊಬ್ಬ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಮತ್ತೊಬ್ಬ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ 9 ನೇ ಸ್ಥಾನದಲ್ಲಿಯೇ ಉಳಿದಿದ್ದಾರೆ. ಬ್ಯಾಟಿಂಗ್​ ವಿಭಾಗದಲ್ಲಿ ಕಿವೀಸ್ ಆಟಗಾರ್ತಿ ಸುಜೈ ಬೇಟ್ಸ್​ (Suzie Bates) ಪ್ರಥಮ ಸ್ಥಾನದಲ್ಲಿದ್ದಾರೆ.

ಬೌಲರ್​ಗಳ ಪಟ್ಟಿಯಲ್ಲಿ ರಾಧ ಯಾದವ್ ಮೂರರಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು, ಮತ್ತೊಬ್ಬ ಆಟಗಾರತಿ ದೀಪ್ತಿ ಶರ್ಮಾ ಐದನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಆಟಗಾರ್ತಿ ಮೇಗನ್ ಸ್ಕಟ್(Megan Schutt) ಮೊದಲ ಸ್ಥಾನದಲ್ಲಿದ್ರೆ, ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್(Shabnim Ismail) ದ್ವಿತೀಯ ಸ್ಥಾನದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.