ETV Bharat / sports

ಸಿಮನ್ಸ್ ಹುದ್ದೆಗೆ ಸಂಚಕಾರವಿಲ್ಲ, ಅವರೊಬ್ಬ ಉತ್ತಮ ವ್ಯಕ್ತಿ : ವಿಂಡೀಸ್​ ಕ್ರಿಕೆಟ್​ ಮಂಡಳಿ ಅಧ್ಯಕ್ಷ - ಕಾಂಡೆ ರಿಲೆ

ಫಿಲ್​ ಸಿಮನ್ಸ್ಫಿಲ್​ ಸಿಮನ್ಸ್​ನ ನಮ್ಮ ಸಂಪೂರ್ಣ ಬೆಂಬಲ ಹೊಂದಿದ್ದಾರೆ. ಈ ಬಗ್ಗೆ ನಾನು ವೆಸ್ಟ್​ ಇಂಡೀಸ್​ ಕ್ರಿಕೆಟ್​ ಅಭಿಮಾನಿಗಳಿಗೆ ಸಂಪೂರ್ಣ ಭರವಸೆ ನೀಡುತ್ತೇನೆ. ಆ ಪತ್ರದಿಂದ ಸಿಮನ್ಸ್​ ಹುದ್ದೆಗೆ ಯಾವುದೇ ರೀತಿಯ ಬೆದರಿಕೆಯಿಲ್ಲ ಎಂದು ವೆಸ್ಟ್​ ಇಂಡೀಸ್​​​ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಸ್ಕೆರಿಟ್​ ಕಾನ್ಫರೆನ್ಸ್​ ಕಾಲ್​ ಮೂಲಕ ಹೇಳಿದ್ದಾರೆ.

ವೆಸ್ಟ್​ ಇಂಡೀಸ್​ ತಂಡದ ಕೋಚ್​ ಫಿಲ್ ಸಿಮ್ಮನ್ಸ್
ಫಿಲ್​ ಸಿಮನ್ಸ್​
author img

By

Published : Jul 2, 2020, 12:21 PM IST

ಸೇಂಟ್​ ಜಾನ್ಸ್​: ವೆಸ್ಟ್​ ಇಂಡೀಸ್​ ತಂಡದ ಕೋಚ್​ ಫಿಲ್ ಸಿಮ್ಮನ್ಸ್ ಅವ​ರ ಪರ ಸಿಡಬ್ಲ್ಯುಐ ಅಧ್ಯಕ್ಷ ರಿಕಿ ಸ್ಕೆರಿಟ್ ನಿಂತಿದ್ದು, ಸಿಮನ್ಸ್​ ಅವರ ಮಾವನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಂಡಳಿಯಿಂದ ಅನುಮತಿ ಪಡೆದಿದ್ದರು. ಆದ್ದರಿಂದ ಅವರು ಕೆಲಸ ಕಳೆದುಕೊಳ್ಳುವ ಅಪಾಯವಿಲ್ಲ ಎಂದಿದ್ದಾರೆ.

ಜುಲೈ 8 ರಿಂದ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸಣಿ ಆರಂಭವಾಗಲಿದೆ. ಈ ವೇಳೆ ಸಿಮನ್ಸ್​ ತಮ್ಮ ಮಾವನ ಅಂತ್ಯ ಸಂಸ್ಕಾರಕ್ಕಾಗಿ ಬಯೋ ಸೆಕ್ಯೂರ್​ ಸ್ಥಳದಿಂದ ಹೊರ ಬಂದಿದ್ದಾರೆ. ಹೀಗಾಗಿ ಅವರನ್ನು ತಕ್ಷಣವೇ ಕೋಚ್​ ಹುದ್ದೆಯಿಂದ ತೆಗೆದು ಹಾಕಬೇಕೆಂದು ಬಾರ್ಬಡೋಸ್ ಕ್ರಿಕೆಟ್ ಅಸೋಸಿಯೇಷನ್‌ನ (ಬಿಸಿಎ) ಮುಖ್ಯಸ್ಥ ಹಾಗೂ ಕ್ರಿಕೆಟ್ ವೆಸ್ಟ್ ಇಂಡೀಸ್ ಮಂಡಳಿಯ ಸದಸ್ಯರೂ ಆಗಿರುವ ಕಾಂಡೆ ರಿಲೆ ಒತ್ತಾಯಿಸಿದ್ದರು.

ಆದರೆ ಸಿಡಬ್ಲ್ಯುಐ ಅಧ್ಯಕ್ಷ ರಿಕಿ ಸ್ಕೆರಿಟ್​ ಸಿಮನ್ಸ್​ ಅವರ ಹುದ್ದೆಗೆ ಯಾವುದೇ ಸಂಚಕಾರ ಇಲ್ಲ ಎಂದು ತಿಳಿಸಿದ್ದಾರೆ.

ಸಿಡಬ್ಲ್ಯುಐ ಅಧ್ಯಕ್ಷ ರಿಕಿ ಸ್ಕೆರಿಟ್
ಸಿಡಬ್ಲ್ಯುಐ ಅಧ್ಯಕ್ಷ ರಿಕಿ ಸ್ಕೆರಿಟ್

ಫಿಲ್​ ಸಿಮನ್ಸ್​ ಕ್ರಿಕೆಟ್​ ವೆಸ್ಟ್​ ಇಂಡೀಸ್​ನ ಸಂಪೂರ್ಣ ಬೆಂಬಲ ಹೊಂದಿದ್ದಾರೆ ಎಂದು ನಾನು ವೆಸ್ಟ್​ ಇಂಡೀಸ್​ ಕ್ರಿಕೆಟ್​ ಅಭಿಮಾನಿಗಳಿಗೆ ಸಂಪೂರ್ಣ ಭರವಸೆ ನೀಡುತ್ತೇನೆ. ಆ ಪತ್ರದಿಂದ ಸಿಮನ್ಸ್​ ಹುದ್ದೆಗೆ ಯಾವುದೇ ರೀತಿಯ ಬೆದರಿಕೆಯಿಲ್ಲ ಎಂದು ಸ್ಕೆರಿಟ್​ ಕಾನ್ಫರೆನ್ಸ್​ ಕಾಲ್​ ಮೂಲಕ ಸ್ಪಷ್ಟಪಡಿಸಿದ್ದಾರೆ.

ವೆಸ್ಟ್​ ಇಂಡೀಸ್​ ತಂಡದ ಕೋಚ್​ ಫಿಲ್ ಸಿಮ್ಮನ್ಸ್
ಫಿಲ್​ ಸಿಮನ್ಸ್

ಅವರು ಒಂಬತ್ತು ತಿಂಗಳ ಹಿಂದೆ ವಿಂಡೀಸ್​ ಕೋಚ್​ ಆಗಲು ಬಹಳ ಹುರುಪಿನ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ನಾವು ಈ ಹುದ್ದೆಗೆ ಕಂಡುಕೊಳ್ಳಬಹುದಾದ ಅತ್ಯುತ್ತಮ ವ್ಯಕ್ತಿ ಸಿಮನ್ಸ್​ . ಅವರು ಈಗಲೂ ಉತ್ತಮ ವ್ಯಕ್ತಿ ಆಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮುಂದಿನವಾರ ಸೌತಾಂಪ್ಟನ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಮೊದಲ ಟೆಸ್ಟ್​ ಆರಂಭವಾಗಲಿದೆ. ಅದಕ್ಕೂ ಮುನ್ನ ಸಿಮನ್ಸ್​ ಓಲ್ಡ್​ ಟ್ರಾಫರ್ಡ್​ನ ಆನ್​ ಸೈಟ್​ ಹೋಟೆಲ್​ನಲ್ಲಿ ಸೆಲ್ಫ್​ ಐಸೋಲೇಸನ್​ನಲ್ಲಿ ಇರಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.