ದುಬೈ : ಮಂಗಳವಾರ ನಡೆದ ಸನ್ರೈಸರ್ಸ್ ವಿರುದ್ಧದ ಪಂದ್ಯದಲ್ಲಿ 15 ರನ್ಗಳ ಸೋಲಿನೊಂದಿಗೆ ನಿರಾಶೆಯನುಭವಿಸಿದ್ದ ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ಗೆ ಮತ್ತೊಂದು ಆಘಾತ ಎದುರಾಗಿದೆ. ನಿನ್ನೆಯ ಪಂದ್ಯದಲ್ಲಿ ನಿಗದಿತ ವೇಳೆ ಓವರ್ ಪೂರ್ಣಗೊಳಿಸದ್ದಕ್ಕೆ ಅಯ್ಯರ್ ₹12 ಲಕ್ಷ ದಂಡ ತೆರಬೇಕಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಬೌಲಿಂಗ್ ಮಾಡಲು ನಿಗದಿತ ಸಮಯಕ್ಕಿಂತ 23 ನಿಮಿಷ ಹೆಚ್ಚು ತೆಗೆದಿಕೊಂಡಿದ್ದರಿಂದ ₹12 ಲಕ್ಷ ದಂಡವಾಗಿ ವಿಧಿಸಲಾಗಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಓವರ್ ಮಾಡಿದ್ದಕ್ಕೆ ವಿರಾಟ್ ಕೊಹ್ಲಿ ಕೂಡ ದಂಡ ಕಟ್ಟಿದ್ದರು.
"ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿ ಟೂರ್ನಿಯ ಮೊದಲ ಬಾರಿಗೆ ನಿಧಾನಗತಿಯ ಓವರ್ಗಳ ಅಪರಾಧಕ್ಕೆ ಒಳಗಾಗಿದೆ. ಅದಕ್ಕಾಗಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ₹12 ಲಕ್ಷ ದಂಡ ವಿಧಿಸಲಾಗಿದೆ" ಎಂದು ಐಪಿಎಲ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.