ETV Bharat / sports

ಶ್ರೇಯಸ್ ಅಯ್ಯರ್ ಶತಕ : ಮಹಾರಾಷ್ಟ್ರ ವಿರುದ್ಧ 6 ವಿಕೆಟ್​ಗಳಿಂದ ಜಯ ಸಾಧಿಸಿದ ಮುಂಬೈ - Azim Kazi century

ಮುಂಬೈ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ದವಳ್ ಕುಲಕರ್ಣಿ 5 ವಿಕೆಟ್ ಪಡೆದರೆ, ಠಾಕೂರ್​ ಮತ್ತು ತುಷಾರ್ ದೇಶಪಾಂಡೆ ತಲಾ ಒಂದು ವಿಕೆಟ್ ಪಡೆದರು.​.

ಮಹಾರಾಷ್ಟ್ರ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿದ ಮುಂಬೈ
ಶ್ರೇಯಸ್ ಅಯ್ಯರ್ ಶತಕ
author img

By

Published : Feb 23, 2021, 7:15 PM IST

ಜೈಪುರ್​ : ನಾಯಕ ಶ್ರೇಯಸ್​ ಅಯ್ಯರ್​ ಅವರ ಭರ್ಜರಿ ಶತಕದ ನೆರವನಿಂದ ಬಲಿಷ್ಠ ಮುಂಬೈ ತಂಡ ಮಹಾರಾಷ್ಟ್ರ ತಂಡವನ್ನು 6 ವಿಕೆಟ್​ಗಳಿಂದ ಮಣಿಸುವ ಮೂಲಕ ವಿಜಯ ಹಜಾರೆ ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿದೆ.

ಜೈಪುರದ ಕೆಎಲ್ ಸೈನಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮಹಾರಾಷ್ಟ್ರ ನೀಡಿದ 280 ರನ್​ಗಳ ಗುರಿಯನ್ನು ಮುಂಬೈ ತಂಡ 47.2 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು ತಲುಪಿತು.

ಆರಂಭಿಕರಾದ ಪೃಥ್ವಿ ಶಾ(34) ಮತ್ತು ಯಶಸ್ವಿ ಜೈಸ್ವಾಲ್​(40) ಮೊದಲ ವಿಕೆಟ್​​ಗೆ 67 ರನ್​ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿಕೊಟ್ಟರು. ಸೂರ್ಯ ಕುಮಾರ್ ಯಾದವ್​ 29 ರನ್​ಗಳಿಸಿ ಔಟಾದರು.

ಆದರೆ, ನಾಯಕ ಶ್ರೇಯಸ್ ಅಯ್ಯರ್​ 99 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 103 ರನ್​ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇವರಿಗೆ ಸಾಥ್ ನೀಡಿದ ಶಿವಂ ದುಬೆ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 47 ರನ್​ಗಳಿಸಿ ಗೆಲುವಿನ ರೂವಾರಿಯಾದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ ತಂಡ ಯಶ್ ನಹಾರ್(119) ಮತ್ತು ಅಜೀಮ್ ಕಾಜಿ(104) ಶತಕಗಳ ನೆರವಿನಿಂದ 279 ರನ್​ಗಳ ಸ್ಪರ್ಧಾತ್ಮ ಮೊತ್ತ ದಾಖಲಿಸಿತ್ತು. ಇವರಿಬ್ಬರನ್ನು ಬಿಟ್ಟರೆ ತಂಡದ ಯಾವೊಬ್ಬ ಬ್ಯಾಟ್ಸ್​ಮನ್ 20 ರನ್​ ಗಡಿ ದಾಟಲು ವಿಫಲರಾದರು.

ಮುಂಬೈ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ದವಳ್ ಕುಲಕರ್ಣಿ 5 ವಿಕೆಟ್ ಪಡೆದರೆ, ಠಾಕೂರ್​ ಮತ್ತು ತುಷಾರ್ ದೇಶಪಾಂಡೆ ತಲಾ ಒಂದು ವಿಕೆಟ್ ಪಡೆದರು.​

ಇದನ್ನು ಓದಿ:ಮೊಟೆರಾದಲ್ಲಿ ಸ್ಪಿನ್ನರ್​ಗಳು ಮೇಲುಗೈ ಸಾಧಿಸಲಿದ್ದಾರೆ ಎಂಬ ವಾದಕ್ಕೆ ಕೊಹ್ಲಿ ಕೊಟ್ಟ ಪ್ರತ್ಯುತ್ತರ ಇಷ್ಟೇ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.