ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ನ ವೇಗದ ಬೌಲರ್ ಮೊಹಮ್ಮದ್ ಅಮೀರ್ ಕೇವಲ ತಮ್ಮ 27ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದು, ಇದರ ಮಧ್ಯೆ ಬ್ರಿಟಿಷ್ ಪೌರತ್ವಕ್ಕೆ ಅರ್ಜಿ ಹಾಕಿದ್ದಾರೆ.
ಅಮೀರ್ ಈಗಾಗಲೇ ಬ್ರಿಟನ್ ಮೂಲದ ನರ್ಗಿಸ್ ಮಲಿಕ್ ಎಂಬವರನ್ನು 2016ರಲ್ಲಿ ವಿವಾಹವಾಗಿದ್ದು, ಅಲ್ಲಿ ನೆಲೆಸಲು ಕೇವಲ 30 ತಿಂಗಳ ವೀಸಾ ಪಡೆದಿದ್ದರು. ಇದೀಗ ಸಂಪೂರ್ಣವಾಗಿ ಇಂಗ್ಲೆಂಡ್ನಲ್ಲೇ ನೆಲೆಸುವ ಉದ್ದೇಶದಿಂದ ಅಲ್ಲಿನ ಪೌರತ್ವ ಪಡೆಯಲು ಮುಂದಾಗಿ, ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರ ಮಧ್ಯೆ ಮೊಹಮ್ಮದ್ ಅಮೀರ್ ಟ್ವೀಟ್ವೊಂದನ್ನ ಲೈಕ್ ಮಾಡಿ, ವಿವಾದ ಮೈಮೇಲೆ ಎಳೆದು ಕೊಂಡಿದ್ದಾರೆ.
-
Don't understand why some are making a big deal of Mohammad Amir applying for a British passport. He's entitled to apply for it and it doesn't mean that he will stop playing for Pakistan #Cricket
— Saj Sadiq (@Saj_PakPassion) July 28, 2019 " class="align-text-top noRightClick twitterSection" data="
">Don't understand why some are making a big deal of Mohammad Amir applying for a British passport. He's entitled to apply for it and it doesn't mean that he will stop playing for Pakistan #Cricket
— Saj Sadiq (@Saj_PakPassion) July 28, 2019Don't understand why some are making a big deal of Mohammad Amir applying for a British passport. He's entitled to apply for it and it doesn't mean that he will stop playing for Pakistan #Cricket
— Saj Sadiq (@Saj_PakPassion) July 28, 2019
ಪಾಕಿಸ್ತಾನದ ಪತ್ರಕರ್ತ ಸಾಜ್ ಸಜೀದ್, ಮೊಹಮ್ಮದ್ ಅಮೀರ್ ಬ್ರಿಟಿಷ್ ಪೌರತ್ವ ಪಡೆದುಕೊಳ್ಳುವುದರ ಕುರಿತು ಎಲ್ಲರೂ ಯಾಕೆ ಇಷ್ಟೊಂದು ಚರ್ಚೆ ಮಾಡಬೇಕು. ಅದನ್ನ ಪಡೆದುಕೊಳ್ಳುವುದು ಅವರ ಕರ್ತವ್ಯವಾಗಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕ್ರೀಡಾಭಿಮಾನಿ ಒಬ್ಬ ನನಗೆ ಅನಿಸಿರುವ ಪ್ರಕಾರ, ಮೊಹಮ್ಮದ್ ಅಮೀರ್ ಇನ್ಮುಂದೆ ಭಯೋತ್ಪಾದಕ ದೇಶದಲ್ಲಿ ಇರಲು ಇಷ್ಟಪಡುತ್ತಿಲ್ಲ. ಹೀಗಾಗಿ ಉಗ್ರರ ದೇಶ ತೊರೆದು ಬೇರೆಡೆ ನೆಲೆಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೇ ಪಾಕ್ ಬೌಲರ್ ಮೊಹಮ್ಮದ್ ಅಮೀರ್ ಲೈಕ್ ಮಾಡಿದ್ದಾರೆ. ಅವರು ಟ್ವೀಟ್ ಲೈಕ್ ಮಾಡುತ್ತಿದ್ದಂತೆ ವಿವಾದ ಉದ್ಭವವಾಗಿದೆ.
-
Well... pic.twitter.com/WPFYk835kT
— DIVYANSHU (@MSDivyanshu) July 28, 2019 " class="align-text-top noRightClick twitterSection" data="
">Well... pic.twitter.com/WPFYk835kT
— DIVYANSHU (@MSDivyanshu) July 28, 2019Well... pic.twitter.com/WPFYk835kT
— DIVYANSHU (@MSDivyanshu) July 28, 2019
ಇದೇ ವಿಷಯವನ್ನಿಟ್ಟುಕೊಂಡು ಅನೇಕರು ಮೊಹಮ್ಮದ್ ಅಮೀರ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇನ್ನು ಚಿಕ್ಕ ವಯಸ್ಸಿನಲ್ಲೇ ಮೊಹಮ್ಮದ್ ಅಮೀರ್ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿದ್ದಕ್ಕಾಗಿ ಪಾಕ್ನ ಅನೇಕ ದಿಗ್ಗಜ ಕ್ರಿಕೆಟರು ಆಶ್ಚರ್ಯ ವ್ಯಕ್ತಪಡಿಸಿದ್ದರು.
ಇದು ಆಕಸ್ಮಿಕ... ಉದ್ದೇಶ ಪೂರ್ವಕವಲ್ಲ:
ಇದೇ ವೇಳೆ, ಈ ಟ್ವೀಟ್ ಲೈಕ್ ಮಾಡಿದ್ದು ವಿವಾದಕ್ಕೆ ಒಳಗಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಮೊಹಮ್ಮದ್ ಅಮೀರ್ ಬೈ ಮಿಸ್ಟೇಕ್ ಆಗಿ ಬಟನ್ ಒತ್ತಿದ್ದೇನೆ. ಅದು ಆಕಸ್ಮಿಕವಾಗಿ ಆದ ಘಟನೆ. ಆ ವಿಚಾರ ನನ್ನ ತಲೆಯಲ್ಲೇ ಇಲ್ಲ, ಸ್ಕ್ರಾಲ್ ಮಾಡುವಾಗ ಕಣ್ತಪ್ಪಿನಿಂದ ಆದ ಲೈಕ್ ಇದಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲ ಪಾಕ್ ತಂಡವನ್ನು ಪ್ರತಿನಿಧಿಸಿರುವುದು ನನಗೆ ಸಿಕ್ಕ ಗೌರವ ಎಂದು ಅವರು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.