ETV Bharat / sports

ಮಕ್ಕಳ ಪ್ರದರ್ಶನಕ್ಕೆ ಸಂತಸ: 'ಈಟಿವಿ ಭಾರತ'ದೊಂದಿಗೆ ಖುಷಿ ಹಂಚಿಕೊಂಡ ಶಾರ್ದೂಲ್, ರಹಾನೆ ಪೋಷಕರು

ಟೀಂ ಇಂಡಿಯಾ ಪರ ತಮ್ಮ ಹುಡುಗರು ತೋರಿದ ಪ್ರದರ್ಶನಕ್ಕೆ ಪೋಷಕರು ಸಂತಸಗೊಂಡಿದ್ದು, ಶಾರ್ದೂಲ್ ಠಾಕೂರ್ ಮತ್ತು ಅಜಿಂಕ್ಯಾ ರಹಾನೆ ಅವರ ಕುಟುಂಬಸ್ಥರು 'ಈಟಿವಿ ಭಾರತ'ದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

Shardul Thakur and Rahane's family talk with ETV
ಈ ಟಿವಿ ಜೊತೆ ಶಾರ್ದೂಲ್, ರಹಾನೆ ಕುಟುಂಬಸ್ಥರ ಮಾತು
author img

By

Published : Jan 20, 2021, 1:52 PM IST

ನವದೆಹಲಿ: ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಬಾರ್ಡರ್ ಗವಾಸ್ಕರ್ ಸರಣಿಯನ್ನು ಮತ್ತೆ ಕೈವಶ ಮಾಡಿಕೊಂಡಿದ್ದು, ಟೀಂ ಇಂಡಿಯಾ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಶಾರ್ದೂಲ್ ಠಾಕೂರ್ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತ ತಂಡದ ಗೆಲುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶಾರ್ದೂಲ್ ಮೊದಲ ಇನ್ನಿಂಗ್ಸ್‌ನಲ್ಲಿ 115 ಎಸೆತಗಳಲ್ಲಿ 67 ರನ್ ಗಳಿಸಿದ್ದಲ್ಲದೆ 3 ವಿಕೆಟ್ ಪಡೆದಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಸೇರಿದಂತೆ ಅಂತಿಮ ಟೆಸ್ಟ್​ನಲ್ಲಿ ಒಟ್ಟು ಏಳು ವಿಕೆಟ್‌ ಪಡೆದಿದ್ದರು. ಮೂಲತಃ ಪಾಲ್ಘರ್‌ನ ಮಹೀಮ್ ಗ್ರಾಮದಿಂದ ಬಂದ ಶಾರ್ದೂಲ್ ಅವರ ಅತ್ಯುತ್ತಮ ಪ್ರದರ್ಶನದಿಂದ ಅವರ ಕುಟುಂಬಸ್ಥರು ಮೆಚ್ಚುಗೆ ಸೂಚಿಸಿದ್ದಾರೆ.

'ಈಟಿವಿ ಭಾರತ'ದೊಂದಿಗೆ ಸಂತಸ ಹಂಚಿಕೊಂಡ ಶಾರ್ದೂಲ್, ರಹಾನೆ ಪೋಷಕರ ಮಾತು

ಶಾರ್ದೂಲ್ ಬಾಲ್ಯದಿಂದಲೂ ಕ್ರಿಕೆಟ್ ಅನ್ನು ಪ್ರೀತಿಸುತ್ತಿದ್ದರು. ಗ್ರಾಮೀಣ ಪ್ರದೇಶದಲ್ಲಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಮೂಲಕ ತಮ್ಮ ಕನಸನ್ನು ಈಡೇರಿಸಿದ್ದಾರೆ. 2012-13ರಲ್ಲಿ ಶಾರ್ದೂಲ್​ಗೆ ಮುಂಬೈ ಪರ ರಣಜಿ ಟ್ರೋಫಿ ಆಡುವ ಅವಕಾಶ ಸಿಕ್ಕಿತ್ತು. 2015-16ರ ಋತುವಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್‌ ಪರ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಕ್ಕಿತ್ತು. 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು.

ಇತ್ತ ಅಜಿಂಕ್ಯಾ ರಹಾನೆ ತಂದೆ ಮಧುಕರ್ ರಹಾನೆ ಕೂಡ ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಜಿಂಕ್ಯ ಅವರ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತೇನೆ. ಅನನುಭವದ ಹೊರತಾಗಿಯೂ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಅಭಿನಂದಿಸುತ್ತೇನೆ ಎಂದಿದ್ದಾರೆ.

ಇದು ಎಲ್ಲರಿಗೂ ಬಹಳ ಸಂತೋಷದ ಕ್ಷಣವಾಗಿದೆ. ನಾವು ಮನೆಯಲ್ಲಿ ಸಿಹಿತಿಂಡಿಗಳನ್ನು ತಯಾರಿಸಿದ್ದೇವೆ. ಸಂಬಂಧಿಕರು ಕೂಡ ಫೋನ್ ಕರೆ ಮಾಡಿ ಅಭಿನಂಧಿಸುತ್ತಿದ್ದಾರೆ. ಭಾರತೀಯ ತಂಡ ಆಡಿದ ರೀತಿ ಗಮನಾರ್ಹವಾಗಿದೆ. ಅಜಿಂಕ್ಯಾ ಅವರೊಂದಿಗೆ ಹೆಚ್ಚು ಸಂವಹನ ನಡೆಸಲು ಸಾಧ್ಯವಾಗಿಲ್ಲ ಎಂದು ಮಧುಕರ್ ರಹಾನೆ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.