ETV Bharat / sports

ಶೇನ್​ ವಾರ್ನ್​ ನೆಚ್ಚಿನ ಭಾರತ ತಂಡದಲ್ಲಿ ಮೂವರು ಕನ್ನಡಿಗರು... ದಾದಾ ನಾಯಕ ಕೊಹ್ಲಿ,ಧೋನಿಗೆ ಸ್ಥಾನವಿಲ್ಲ! - ಸೌರವ್​ ಗಂಗೂಲಿಗೆ ನಾಯಕತ್ವ ನೀಡಿದ ವಾರ್ನ್​

ವಾರ್ನ್​ ಘೋಷಿಸಿದ ನೆಚ್ಚಿನ ಭಾರತ ತಂಡದಲ್ಲಿ ಕನ್ನಡಿಗರಾದ ರಾಹುಲ್​ ದ್ರಾವಿಡ್​, ಜಾವಗಲ್​ ಶ್ರೀನಾಥ್​ ಹಾಗೂ ಅನಿಲ್​ ಕುಂಬ್ಳೆಗೆ ಶೇನ್​ ವಾರ್ನ್​ ಅವಕಾಶ ನೀಡಿದ್ದಾರೆ.

Shane Warne picks his greatest Indian XI
ಶೇನ್​ ವಾರ್ನ್​ ನೆಚ್ಚಿನ ಭಾರತ ತಂಡ
author img

By

Published : Apr 2, 2020, 8:44 AM IST

ಸಿಡ್ನಿ: ಆಸ್ಟ್ರೇಲಿಯಾದ ಶ್ರೇಷ್ಠ ಸ್ಪಿನ್ನರ್​ ಶೇನ್​ ವಾರ್ನ್​ ತಮ್ಮ ನೆಚ್ಚಿನ ಭಾರತ ತಂಡವನ್ನು ಘೋಷಿಸಿದ್ದು, ಅದರಲ್ಲಿ ದಾದಾರನ್ನು ನಾಯಕರಾಗಿ ನೇಮಿಸಿದ್ದರೆ, ಧೋನಿ,ಕೊಹ್ಲಿಯನ್ನು ಕೈಬಿಟ್ಟು ಅಚ್ಚರಿ ಮೂಡಿಸಿದ್ದಾರೆ.

ಕ್ರಿಕೆಟ್​ ಜಗತ್ತಿನಲ್ಲಿ ತನ್ನ ಸ್ಪಿನ್​ ಬೌಲಿಂಗ್​ನಿಂದ ಹೆಚ್ಚು ಪ್ರಸಿದ್ದಿಯಾಗಿರುವ ವಾರ್ನ್​ ನಿವೃತ್ತಿ ನಂತರವೂ ಕೆಲವು ವಿಚಾರಗಳಲ್ಲಿ ಸುದ್ದಿಯಲ್ಲಿದ್ದಾರೆ. ತಮ್ಮ ಆತ್ಮಚರಿತ್ರೆ ಪುಸ್ತಕದಲ್ಲಿ ಹಲವಾರ ವಿವಾದಗಳನ್ನು ಸೃಷ್ಠಿಸಿದ್ದ ಅವರು ಇದೀಗ ತಮ್ಮ ನೆಚ್ಚಿನ ಭಾರತ ತಂಡವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದು, ಆ ತಂಡಕ್ಕೆ ಸೌರವ್​ ಗಂಗೂಲಿಯವರನ್ನು ನಾಯಕರನ್ನಾಗಿ ನೇಮಿಸಿದ್ದಾರೆ.

Shane Warne picks his greatest Indian XI
ಧೋನಿ-ಕೊಹ್ಲಿ

ಅಚ್ಚರಿಯೆಂದರೆ ವಿಶ್ವದ ಅತ್ಯುತ್ತಮ ನಾಯಕ ಹಾಗೂ ವಿಕೆಟ್​ ಕೀಪರ್​ ಎಂದೇ ಖ್ಯಾತಿ ಪಡೆದಿರುವ ಮಹೇಂದ್ರ ಸಿಂಗ್​ ಧೋನಿ, ರನ್​ಮಷಿನ್​ ವಿರಾಟ್​ ಕೊಹ್ಲಿ ಇವರ ನೆಚ್ಚಿನ ತಂಡದಲ್ಲಿ ಸ್ಥಾನಪಡೆದಿಲ್ಲ. ಹಿಟ್​ಮ್ಯಾನ್ ರೋಹಿತ್​ ಶರ್ಮಾ ಹೆಸರನ್ನು ಕೂಡ ವಾರ್ನ್​ ಸೇರಿಸಿಲ್ಲ. ಅಚ್ಚರಿಯಂದರೆ ವಿಕೆಟ್​ ಕೀಪರ್​ ಸ್ಥಾನದಲ್ಲಿ ಧೋನಿ ಬದಲಾಗಿ ದಿನೇಶ್​ ಮೊಂಗಿಯಾ ಅವರನ್ನು ತಂಡದಲ್ಲಿ ಹೆಸರಿಸಿದ್ದಾರೆ.

ವಾರ್ನ್​ ನೆಚ್ಚಿನ ಭಾರತ ತಂಡ

ಆರಂಭಿಕರಾಗಿ ಸೆಹ್ವಾಗ್​ ಜೊತೆಗೆ ನವಜೋತ್​ ಸಿಂಗ್​ ಸಿಧು ಆಯ್ಕೆ ಮಾಡಿದ್ದಾರೆ. ಇನ್ನುಳಿದಂತೆ ಬ್ಯಾಟಿಂಗ್​ ವಿಭಾಗಕ್ಕೆ ಸಚಿನ್​, ದ್ರಾವಿಡ್​, ಅಜರುದ್ದೀನ್​, ಗಂಗೂಲಿ, ಆಲ್​ರೌಂಡರ್​ ವಿಭಾಗದಲ್ಲಿ ಕಪಿಲ್​ ದೇವ್​ ಇದ್ದರೆ, ಬೌಲರ್​ ವಿಭಾಗದಲ್ಲಿ ಶ್ರೀನಾಥ್​, ಭಜ್ಜಿ,ಕುಂಬ್ಳೆ ಇದ್ದಾರೆ.

ಈ ತಂಡದಲ್ಲಿ ಕನ್ನಡಿಗರಾದ ರಾಹುಲ್​ ದ್ರಾವಿಡ್​, ಜಾವಗಲ್​ ಶ್ರೀನಾಥ್​ ಹಾಗೂ ಅನಿಲ್​ ಕುಂಬ್ಳೆಗೆ ಶೇನ್​ ವಾರ್ನ್​ ಅವಕಾಶ ನೀಡಿದ್ದಾರೆ.

ವಾರ್ನ್​ ಹೆಸರಿಸಿದ ಸಾರ್ವಕಾಲಿಕ ಭಾರತ ತಂಡ

ವೀರೇಂದ್ರ ಸೆಹ್ವಾಗ್, ನವಜೋತ್ ಸಿಂಗ್ ಸಿಧು, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್,ಸೌರವ್ ಗಂಗೂಲಿ (ನಾಯಕ), ಮೊಹಮ್ಮದ್ ಅಜರುದ್ದೀನ್,, ಕಪಿಲ್ ದೇವ್, ನಯನ್ ಮೊಂಗಿಯಾ (ವಿಕೆಟ್ ಕೀಪರ್), ಹರ್ಭಜನ್ ಸಿಂಗ್, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.