ಕರಾಚಿ : ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹೀದ್ ಆಫ್ರಿದಿ ಪಾಕಿಸ್ತಾನ್ ಸೂಪರ್ ಲೀಗ್ ವೇಳೆ ಅಪಾಯಕಾರಿಯಾಗಿ ಕಾಣುವ ಹೆಲ್ಮೆಟ್ ಧರಿಸಿ ಬ್ಯಾಟಿಂಗ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ವರ್ಷಗಳು ಉರುಳಿದಂತೆ ಕ್ರಿಕೆಟಿಗರ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ಗಳ ವಿಕಸನವೇ ನಡಿದಿದೆ. ಬ್ಯಾಟ್ಸ್ಮನ್ಗಳ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ಪ್ರಸ್ತುತ ಹೆಲ್ಮೆಟ್ಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.
ಅದರಲ್ಲೂ ಸಚಿನ್ ತೆಂಡೂಲ್ಕರ್ ಅಂತಹ ಮಹಾನ್ ಕ್ರಿಕೆಟಿಗರೇ ಸ್ಪಿನ್ ಬೌಲಿಂಗ್ಗೆ ಬ್ಯಾಟಿಂಗ್ ಮಾಡುವಾಗಲೂ ಕೂಡ ಹೆಲ್ಮೆಟ್ ಕಡ್ಡಾಯಗೊಳಿಸಬೇಕೆಂದು ಐಸಿಸಿಗೆ ಮನವಿ ಸಲ್ಲಿಸಿದ್ದಾರೆ.
ಆದರೆ, ಪಿಎಸ್ಎಲ್ ವೇಳೆ ಶಾಹೀದ್ ಆಫ್ರಿದಿ ಸುರಕ್ಷತೆಯಿಲ್ಲ ಹೆಲ್ಮೆಟ್ ಬಳಿಸಿದ್ದಾರೆ. ಆ ಹೆಲ್ಮೆಟ್ನಲ್ಲಿ ಹಣೆ ಮತ್ತು ಕಣ್ಣಿನ ಭಾಗದಲ್ಲಿ ಗ್ರಿಲ್ ಅನ್ನು ಸಂಪೂರ್ಣ ತೆಗೆಯಲಾಗಿದೆ. ಇದು ನೋಡುಗರಿಗೆ ಅಪಾಯಕಾರಿಯಂತೆ ಕಾಣುತ್ತದೆ. ಆ ಹೆಲ್ಮೆಟ್ ಬ್ಯಾಟ್ಸ್ಮನ್ಗೆ ಗಂಭೀರ ಡ್ಯಾಮೇಜ್ ಮಾಡುವಂತಿದೆ.
ಗ್ರಿಲ್ ಕಡಿಮೆಯಿರುವುದರಿಂದ ಚೆಂಡು ಹೆಲ್ಮೆಟ್ ಒಳಗೆ ನುಗ್ಗುವ ಸಾಧ್ಯತೆ ಕೂಡ ಇದೆ ಎಂದು ತಿಳಿದು ಬಂದಿದೆ. ಶನಿವಾರ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಆಫ್ರಿದಿ ಮುಲ್ತಾನ್ ಸುಲ್ತಾನ್ ತಂಡದ ಪರ ಆಡಿದ್ದು, ಕೇವಲ 12 ಎಸೆತಗಳಲ್ಲಿ 12 ರನ್ಗಳಿಸಿ ಔಟಾದರು.