ಕರಾಚಿ: ಪಿಎಸ್ಎಲ್ನ 2ನೇ ಎಲಿಮೇನೇಟರ್ ಪಂದ್ಯದ ವೇಳೆ ಪಾಕಿಸ್ತಾನದ ಲೆಜೆಂಡ್ ಶಾಹೀದ್ ಅಫ್ರಿದಿಯನ್ನು ಅದ್ಭುತ ಯಾರ್ಕರ್ ಮೂಲಕ ಹ್ಯಾರೀಸ್ ರವೂಫ್ ಡಕ್ಔಟ್ ಮಾಡಿದ್ದರು. ಆದರೆ ತಕ್ಷಣವೇ ಅಫ್ರಿದಿಯ ಕ್ಷಮೆ ಕೇಳಿ ಆಶ್ಚರ್ಯಕ್ಕೀಡು ಮಾಡಿದ್ದರು.
ಈ ಹಿಂದಿನ ಪಂದ್ಯಗಳಲ್ಲಿ ಎದುರಾಳಿ ಬ್ಯಾಟ್ಸ್ಮನ್ಗಳ ವಿಕೆಟ್ ಪಡೆದಾಗ ರವೂಫ್ ಆಕ್ರಮಣಕಾರಿ ಮನೋಭಾವದಿಂದ ಸಂಭ್ರಮಿಸುತ್ತಿದ್ದರು. ಆದರೆ ಅಫ್ರಿದಿಯನ್ನು ಸೊನ್ನೆ ಸುತ್ತುವಂತೆ ಮಾಡಿದ್ದ ವೇಗಿ, ನಂತರ 'ನನ್ನನ್ನು ಕ್ಷಮಿಸಿ ಲಾಲಾ' ಎಂದು ಕೈ ಮುಗಿದು ವಿನಂತಿಸಿದ್ದರು.
-
It was a great and unplayable yorker Haris very well bowled! Please bowl slow to me next time 😜 congratulations to Qalandars for final berth. Look forward to an exciting match tomorrow. Thank you Sultans fans for supporting us throughout the season. https://t.co/GySOxr43ov
— Shahid Afridi (@SAfridiOfficial) November 16, 2020 " class="align-text-top noRightClick twitterSection" data="
">It was a great and unplayable yorker Haris very well bowled! Please bowl slow to me next time 😜 congratulations to Qalandars for final berth. Look forward to an exciting match tomorrow. Thank you Sultans fans for supporting us throughout the season. https://t.co/GySOxr43ov
— Shahid Afridi (@SAfridiOfficial) November 16, 2020It was a great and unplayable yorker Haris very well bowled! Please bowl slow to me next time 😜 congratulations to Qalandars for final berth. Look forward to an exciting match tomorrow. Thank you Sultans fans for supporting us throughout the season. https://t.co/GySOxr43ov
— Shahid Afridi (@SAfridiOfficial) November 16, 2020
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ರವೂಫ್, "ನಾನು ವಿಕೆಟ್ ಪಡೆದಾಗಲೆಲ್ಲಾ ಭಾಗಶಃ ಉದ್ವೇಗಕ್ಕೊಳಗಾಗಿ ಸಂಭ್ರಮಿಸುತ್ತೇನೆ. ಆದರೆ ಅಫ್ರಿದಿ ವಿಕೆಟ್ ಪಡೆದಾಗ ಹಾಗೆ ಮಾಡಲಾಗಲಿಲ್ಲ. ಏಕೆಂದರೆ ಅವರು ಪಾಕಿಸ್ತಾನದ ಲೆಜೆಂಡ್ " ಎಂದರು.
ಇಎಸ್ಪಿಎನ್ ಈ ವಿಡಿಯೋವನ್ನು ಟ್ವೀಟ್ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅಫ್ರಿದಿ, " ಹ್ಯಾರೀಸ್ ನನ್ನನ್ನು ಬೌಲ್ಡ್ ಮಾಡಿದ ಎಸೆತ ಅದ್ಭುತ ಮತ್ತು ಆಡಲಾಗದ ಯಾರ್ಕರ್ ಆಗಿತ್ತು. ಮುಂದಿನ ಸಾರಿ ನನಗೆ ಸ್ವಲ್ಪ ನಿಧಾನವಾಗಿ ಬೌಲಿಂಗ್ ಮಾಡು ಎಂದು ತಮಾಷೆಯಾಗಿ ಹೇಳಿದ್ದಾರೆ. ಅಲ್ಲದೆ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಲಾಹೋರ್ ಕಲಂದರ್ಗೆ ಅಭಿನಂದನೆ ತಿಳಿಸಿದ್ದಾರೆ.
ಲಾಹೋರ್ ಕಲಂದರ್ ಮತ್ತು ಕರಾಚಿ ಕಿಂಗ್ಸ್ ತಂಡಗಳು ಇಂದು ನಡೆಯುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ.