ETV Bharat / sports

ಶೆಫಾಲಿ, ಪೂನಮ್​​ ಕಮಾಲ್​​​: ಟಿ-20 ವಿಶ್ವಕಪ್​​ನಲ್ಲಿ ಭಾರತಕ್ಕೆ ಸತತ ಎರಡನೇ ಜಯ

ಬಾಂಗ್ಲಾದೇಶ ತಂಡವನ್ನು 124 ರನ್​ಗಳಿಗೆ ಕಟ್ಟಿಹಾಕುವ ಮೂಲಕ ಭಾರತ ಮಹಿಳಾ ತಂಡ 18 ರನ್​ಗಳ ಜಯ ಸಾಧಿಸಿ 2018ರ ಏಷ್ಯಾಕಪ್​ ಸೋಲಿಗೆ ಸೇಡು ತೀರಿಸಿಕೊಂಡಿದೆ.

T20 women world cup 2020
ಭಾರತ ಮಹಿಳಾ ತಂಡಕ್ಕೆ 2ನೇ ಜಯ
author img

By

Published : Feb 24, 2020, 8:28 PM IST

ಪರ್ತ್​: ಭಾರತ ಮಹಿಳಾ ತಂಡ ಬಾಂಗ್ಲಾದೇಶ ವನಿತೆಯರ ವಿರುದ್ಧ 18 ರನ್​ಗಳ ಜಯ ಸಾಧಿಸುವ ಮೂಲಕ ಟಿ-20 ವಿಶ್ವಕಪ್​ನಲ್ಲಿ ಸತತ ಎರಡನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ, ಬಾಂಗ್ಲಾ ತಂಡಕ್ಕೆ 143 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಭಾರತದ ಪರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಶೆಫಾಲಿ ವರ್ಮಾ ಕೇವಲ 17 ಎಸೆತಗಳಲ್ಲಿ 4 ಸಿಕ್ಸರ್​, 2 ಬೌಂಡರಿ ನೆರವಿನಿಂದ 39 ರನ್ ​ಗಳಿಸಿದರು.

ಶೆಫಾಲಿಗೆ ಸಾಥ್​ ನೀಡಿದ ಜಮೀಮಾ ರೋಡ್ರಿಗ್ಸ್​ 37 ಎಸೆತಗಳಲ್ಲಿ 34 ರನ್​ ಗಳಿಸಿ ರನ್​ ಔಟಾದರು. ನಾಯಕಿ ಹರ್ಮನ್​ ಪ್ರೀತ್​ ಕೌರ್​ 8 ರನ್ ​ಗಳಿಸಿ ಮತ್ತೆ ವಿಫಲರಾದರು. ಮಂದಾನ ಜಾಗಕ್ಕೆ ತಂಡ ಸೇರಿಕೊಂಡಿದ್ದ ರಿಚ ಘೋಷ್​ 14 ರನ್, ದೀಪ್ತಿ ಶರ್ಮಾ(11), ವೇದಾ ಕೃಷ್ಣಮೂರ್ತಿ ಔಟಾಗದೆ 20 ರನ್ ​ಗಳಿಸಿದರು.

T20 women world cup 2020
3 ವಿಕೆಟ್​ ಪಡೆದು ಮಿಂಚಿದ ಪೂನಮ್​ ಯಾದವ್​

ಬೌಲಿಂಗ್​ನಲ್ಲೂ ಅದ್ಭುತ ಪ್ರದರ್ಶನ ತೋರಿ ಎದುರಾಳಿಯನ್ನು 124 ರನ್​ಗಳಿಗೆ ಕಟ್ಟಿಹಾಕುವ ಮೂಲಕ ಭಾರತ 18 ರನ್​ಗಳ ಜಯ ಸಾಧಿಸಿ 2018ರ ಏಷ್ಯಾಕಪ್​ ಸೋಲಿಗೆ ಸೇಡು ತೀರಿಸಿಕೊಂಡಿತು.

ಬೌಲಿಂಗ್​ನಲ್ಲಿ ಮತ್ತೆ ಮಿಂಚಿದ ಪೂನಮ್​ ಯಾದವ್​ 4 ಓವರ್​ಗಳಲ್ಲಿ 18 ರನ್​ ನೀಡಿ 3 ವಿಕೆಟ್​ ಪಡೆದು ಗೆಲುವಿನ ರೂವಾರಿಯಾದರು. ಅರುಂಧತಿ ರೆಡ್ಡಿ 33ಕ್ಕೆ 2, ಶಿಖಾ ಪಾಂಡೆ 14ಕ್ಕೆ 2 ಹಾಗೂ ಗಾಯಕವಾಡ್​ ಒಂದು ವಿಕೆಟ್​ ಪಡೆದು ಮಿಂಚಿದರು.

T20 world cup 2020
ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಶೆಫಾಲಿ ವರ್ಮಾ

ಬಾಂಗ್ಲಾದೇಶ ಪರ ಮುರ್ಷಿದಾ ಖತುನ್ 30 ಹಾಗೂ ವಿಕೆಟ್​ ಕೀಪರ್​ ನಿಗರ್​ ಸುಲ್ತಾನ 35 ರನ್ ​ಗಳಿಸಿ ಗೆಲುವಿಗಾಗಿ ಹೋರಾಡಿದರೂ ಇತರೆ ಬ್ಯಾಟ್ಸ್​ವುಮನ್​ಗಳ ಬೆಂಬಲದ ಕೊರತೆಯಿಂದ ಸೋಲು ಕಾಣಬೇಕಾಯಿತು.

ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿದ ಶೆಫಾಲಿ ವರ್ಮಾ(39) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಭಾರತ ಫೆಬ್ರವರಿ 27ರಂದು ನ್ಯೂಜಿಲ್ಯಾಂಡ್​ ವಿರುದ್ಧ ಕಣಕ್ಕಿಳಿಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.