ಮುಂಬೈ: ಸುಮಾರು ಒಂದೂವರೆ ತಿಂಗಳುಗಳ ಕಾಲ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ ಮಹಾಟೂರ್ನಿ ವಿಶ್ವಕಪ್ ಮುಕ್ತಾಯವಾಗಿದ್ದು, ಟೀಮ್ ಇಂಡಿಯಾ ಸೆಮೀಸ್ ಸೋಲಿನ ಆಘಾತದಿಂದ ಹೊರಬಂದು ವೆಸ್ಟ್ ಇಂಡೀಸ್ ವಿರುದ್ಧ ಸೆಣೆಸಲು ಸಜ್ಜಾಗುತ್ತಿದೆ.
ಆಗಸ್ಟ್ 3ರಿಂದ ಆರಂಭವಾಗಲಿರುವ ವಿಂಡೀಸ್ ಪ್ರವಾಸಕ್ಕೆ ಜುಲೈ 19ರಂದು ಟೀಮ್ ಇಂಡಿಯಾ ಆಯ್ಕೆ ನಡೆಯಲಿದ್ದು, ಹಿರಿಯ ಆಟಗಾರ ಧೋನಿ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ. 38 ವರ್ಷದ ಧೋನಿ ನಿವೃತ್ತಿ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ವಿಶ್ವಕಪ್ ಸೋಲಿನ ಹಿನ್ನೆಲೆ... ಏಕದಿನ ನಾಯಕತ್ವದಿಂದ ಕೊಹ್ಲಿ ತಲೆದಂಡ?
"ವಿಂಡೀಸ್ ಪ್ರವಾಸಕ್ಕೆ ಜುಲೈ 19ರಂದು ಮುಂಬೈನಲ್ಲಿ ಆಯ್ಕೆ ಸಮಿತಿ ಸಭೆ ಸೇರಲಿದ್ದು, ಇದುವರೆಗೂ ಧೋನಿ ನಿವೃತ್ತಿ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ನನ್ನ ಪ್ರಕಾರ ಧೋನಿ ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಅವರೇ(ಧೋನಿ) ತಮ್ಮ ಮುಂದಿನ ನಡೆಯ ಬಗ್ಗೆ ನಿರ್ಧರಿಸಲು ಸಾಧ್ಯ" ಎಂದು ಬಿಸಿಸಿಐನ ಅಧಿಕಾರಿಯೋರ್ವರು ನಿರ್ವಾಹಕ ಸಮಿತಿಯ ಸಭೆಯ ಬಳಿಕ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಕೊಹ್ಲಿ-ಬುಮ್ರಾಗೆ ರೆಸ್ಟ್ ಸಾಧ್ಯತೆ:
ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾರನ್ನು ಏಕದಿನ ಹಾಗೂ ಟಿ-20 ಸರಣಿಯಿಂದ ಹೊರಗಿಡುವ ಸಾಧ್ಯತೆ ಇದ್ದು, ಟೆಸ್ಟ್ ಪಂದ್ಯದ ವೇಳೆ ತಂಡ ಸೇರಿಕೊಳ್ಳಲಿದ್ದಾರೆ.
ಐಸಿಸಿ ರ‍್ಯಾಂಕಿಂಗ್: ಕೊಹ್ಲಿ ಸ್ಥಾನಕ್ಕೆ ಎದುರಾಗಿದೆ ಕುತ್ತು.. 'ವಿಶ್ವ' ವಿಜೇತ ಇಂಗ್ಲೆಂಡ್ಗೆ ಅಗ್ರಸ್ಥಾನ
ವಿಶ್ವಕಪ್ನಲ್ಲಿ ಆಸೀಸ್ ವಿರುದ್ಧದ ಪಂದ್ಯದಲ್ಲಿ ಹೆಬ್ಬೆರಳಿಗೆ ಆದ ಗಾಯದಿಂದ ಸಂಪೂರ್ಣ ಟೂರ್ನಿಯಿಂದ ಹೊರಗುಳಿದಿದ್ದ ಆರಂಭಿಕ ಆಟಗಾರ ಶಿಖರ್ ಧವನ್ ಲಭ್ಯತೆ ಬಗ್ಗೆ ಬಿಸಿಸಿಐ ಇನ್ನೂ ಸ್ಪಷ್ಟ ಮಾಹಿತಿ ನೀಡಿಲ್ಲ.
ಮುಂದಿನ ತಿಂಗಳ ಆರಂಭದಲ್ಲಿ ವಿಂಡೀಸ್ ಪ್ರವಾಸ ಕೈಗೊಳ್ಳಲಿರುವ ಭಾರತ, ಕೆರಬಿಯನ್ನರ ನಾಡಿನಲ್ಲಿ ಮೂರು ಟಿ-20, ಮೂರು ಏಕದಿನ ಪಂದ್ಯ ಹಾಗೂ ಎರಡು ಟೆಸ್ಟ್ ಪಂದ್ಯವನ್ನಾಡಲಿದೆ.