ETV Bharat / sports

ಐಪಿಎಲ್ ಪ್ಲೇಆಫ್, ಮಹಿಳಾ ಟಿ20 ಚಾಲೆಂಜ್​ ವೇಳಾಪಟ್ಟಿ ಘೋಷಿಸಿದ ಬಿಸಿಸಿಐ - ಐಪಿಎಲ್ ಕ್ವಾಲಿಫೈಯರ್​

ಮೊದಲ ಕ್ವಾಲಿಫೈಯರ್​ ನವೆಂಬರ್​ 5ರಂದು ದುಬೈನಲ್ಲಿ, ನವೆಂಬರ್​ 6 ರಂದು ಅಬುಧಾಬಿಯಲ್ಲಿ ಎಲಿಮಿನೇಟರ್ ಹಾಗೂ ನವೆಂಬರ್​ 8ರಂದು ಅಬುಧಾಬಿಯಲ್ಲಿ 2ನೇ ಕ್ವಾಲಿಫೈಯರ್​ ಹಾಗೂ ನವೆಂಬರ್ 10 ರಂದು ದುಬೈನಲ್ಲಿ ಫೈನಲ್ ನಡೆಯಲಿದೆ.

ಐಪಿಎಲ್ 2020
ಐಪಿಎಲ್ 2020
author img

By

Published : Oct 25, 2020, 10:23 PM IST

ಹೈದರಾಬಾದ್​: ಐಪಿಎಲ್​ ಆಡಳಿತ ಮಂಡಳಿ ಐಪಿಎಲ್ ಪ್ಲೇಆಫ್ ಮತ್ತು ಫೈನಲ್ ಹಾಗೂ ಮಹಿಳಾ ಟಿ20 ಚಾಲೆಂಜ್​ನ ವೇಳಾಪಟ್ಟಿಯನ್ನು ಭಾನುವಾರ ಘೋಷಣೆ ಮಾಡಿದ್ದಾರೆ.

ಸೆಪ್ಟೆಂಬರ್ 6ರಂದು ಬಿಸಿಸಿಐ ಐಪಿಎಲ್ ವೇಳಾಪಟ್ಟಿಯನ್ನು ಘೋಷಣೆ ಮಾಡಿತ್ತು. ಆದರೆ ಪ್ಲೇ ಆಫ್ ಮತ್ತು ಫೈನಲ್​ ದಿನಾಂಕವನ್ನು ಬಹಿರಂಗಗೊಳಿಸಿರಲಿಲ್ಲ. ಇದೀಗ ಲೀಗ್ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಐಪಿಎಲ್ ಜನರಲ್ ಕೌನ್ಸಿಲ್ ಭಾನುವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಹಿ ಮಾಡಿರುವ ಪ್ಲೇಆಫ್ ವೇಳಾಪಟ್ಟಿಯನ್ನು ತನ್ನ ವೆಬ್​​ಸೈಟ್​ನಲ್ಲಿ ಪ್ರಕಟಿಸಿದೆ.

ಮೊದಲ ಕ್ವಾಲಿಫೈಯರ್​ ನವೆಂಬರ್​ 5ರಂದು ದುಬೈನಲ್ಲಿ, ನವೆಂಬರ್​ 6 ರಂದು ಅಬುಧಾಬಿಯಲ್ಲಿ ಎಲಿಮಿನೇಟರ್ ಹಾಗೂ ನವೆಂಬರ್​ 8ರಂದು ಅಬುಧಾಬಿಯಲ್ಲಿ 2ನೇ ಕ್ವಾಲಿಫೈಯರ್​ ಹಾಗೂ ನವೆಂಬರ್ 10 ರಂದು ದುಬೈನಲ್ಲಿ ಫೈನಲ್ ನಡೆಯಲಿದೆ.

ಮಹಿಳಾ ಟಿ20 ಚಾಲೆಂಜ್ ವೇಳಾಪಟ್ಟಿ

ಇದೇ ಸಂದರ್ಭದಲ್ಲಿ ಬಿಸಿಸಿಐ 4 ಪಂದ್ಯಗಳ ಮಹಿಳಾ ಟಿ20 ಚಾಲೆಂಜ್​ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

  • ಸೂಪರ್​ನೋವಾಸ್ vs ವೆಲಾಸಿಟಿ - ನವೆಂಬರ್ 4
  • ವೆಲಾಸಿಟಿ ಮತ್ತು ಟ್ರೈಲ್‌ಬ್ಲೇಜರ್ಸ್​ - ನವೆಂಬರ್ 5
  • ಟ್ರೈಲ್‌ಬ್ಲೇಜರ್ಸ್ Vs ಸೂಪರ್ನೋವಾಸ್ - ನವೆಂಬರ್ 7

ಫೈನಲ್- ನವೆಂಬರ್​ 10ರಂದು ನಡೆಯಲಿದೆ. ಈ ಎಲ್ಲಾ ಪಂದ್ಯಗಳು ಶಾರ್ಜಾದಲ್ಲಿ ನಡೆಯಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.