ETV Bharat / sports

ಸಂಜಿತಾ ಚಾನು ಮೇಲಿನ ಡೋಪಿಂಗ್​ ಪ್ರಕರಣ ವಜಾ: ವೇಟ್​ಲಿಫ್ಟರ್​ರಿಂದ ಪರಿಹಾರಕ್ಕಾಗಿ ಬೇಡಿಕೆ - ಅಂತಅರಾಷ್ಟ್ರೀಯ ವೇಟ್​ಲಿಫ್ಟಿಂಗ್​ ಫೆಡೆರೇಶನ್​

ಕ್ರೀಡಾಪಟುವಿನ ವೈದ್ಯಕೀಯ ಮಾದರಿಯನ್ನು ನ್ಯಾಯಯುತವಾಗಿ ಪರಿಗಣಿಸಿ ಅವರ ವಿರುದ್ಧದ ಪ್ರಕರಣವನ್ನು ಕೊನೆಗೊಳಿಸಬೇಕು ಎಂದು ವಾಡಾ ಶಿಪಾರಸ್ಸು ಮಾಡಿದೆ ಎಂದು ಐಡಬ್ಲ್ಯೂಎಫ್ ಇಮೇಲ್​ ಮೂಲಕ ತಿಳಿಸಿದೆ. ಚಾನು ಮಾದರಿಯನ್ನು ವಿಶ್ಲೇಷಿಸುವ ಸಮಯದಲ್ಲಿ ಡೋಪಿಂಗ್​ನ ಅನುರೂಪತೆಗಳು ಕಂಡುಬಂದಿಲ್ಲ ಎಂದು ವಾಡಾ ಐಡಬ್ಲ್ಯೂಎಫ್‌ಗೆ ತಿಳಿಸಿದೆ.

ಸಂಜಿತಾ ಚಾನು ಮೇಲಿನ ಡೂಪಿಂಗ್​ ಪ್ರಕರಣ ವಜಾ
ಸಂಜಿತಾ ಚಾನು ಮೇಲಿನ ಡೂಪಿಂಗ್​ ಪ್ರಕರಣ ವಜಾ
author img

By

Published : Jun 10, 2020, 12:33 PM IST

ಮಣಿಪುರದ ವೇಟ್‌ ಲಿಫ್ಟರ್ ಸಂಜಿತಾ ಚಾನು ವೈದ್ಯಕೀಯ ಮಾದರಿಯನ್ನು ನ್ಯಾಯಯುತವಾಗಿ ಪರಿಗಣಿಸಿ ಅವರ ವಿರುದ್ಧದ ಪ್ರಕರಣವನ್ನು ಕೊನೆಗೊಳಿಸಬೇಕು ಎಂದು ವಾಡಾ ಶಿಪಾರಸ್ಸು ಮಾಡಿದೆ ಎಂದು ಐಡಬ್ಲ್ಯೂಎಫ್ ಇಮೇಲ್​ ಮೂಲಕ ತಿಳಿಸಿದೆ.

26 ವರ್ಷದ ಚಾನು ಆರಂಭದಿಂದಲೂ ತಾವು ನಿರಪರಾಧಿ ಎಂದು ಹೇಳಿಕೊಂಡು ಬರುತ್ತಿದ್ದರು. ಇದೀಗ ವಿಶ್ವ ಡೋಪಿಂಗ್​ ವಿರೋಧಿ ಏಜೆನ್ಸಿಯ (ವಾಡಾ) ಶಿಫಾರಸ್ಸಿನನ ಆಧಾರದ ಮೇಲೆ ಐಡಬ್ಲ್ಯೂಎಫ್​ ಈ ನಿರ್ಧಾರವನ್ನು ಕೈಗೊಂಡಿದೆ. ಐಡಬ್ಲ್ಯೂಎಫ್​ನ ಕಾನೂನು ಸಲಹೆಗಾರ ಲಿಲ್ಲಾ ಸಾಗಿ ಸಹಿ ಮಾಡಿರುವ ಡೋಪಿಂಗ್​ ಹಿಂತೆಗೆದ ಅಂತಿಮ ತೀರ್ಪಿನ ಮಾಹಿತಿಯನ್ನು ಇ-ಮೇಲ್​ ಮೂಲಕ ಚಾನು ಅವರಿಗೆ ತಿಳಿಸಲಾಗಿದೆ.

ಕ್ರೀಡಾಪಟುವಿನ ಮಾದರಿಯನ್ನು ನ್ಯಾಯಯುತವಾಗಿ ಆಧರಿಸಿ ಅವರ ವಿರುದ್ಧದ ಪ್ರಕರಣವನ್ನು ಮುಚ್ಚಬೇಕು ಎಂದು ವಾಡಾ ಶಿಪಾರಸ್ಸು ಮಾಡಿರುವುದಾಗಿ ಐಡಬ್ಲ್ಯೂಎಫ್ ತಿಳಿಸಿದೆ. ಚಾನು ದೇಹದ ಮಾದರಿಯನ್ನು ವಿಶ್ಲೇಷಿಸುವ ಸಮಯದಲ್ಲಿ ಡೋಪಿಂಗ್​ನ ಅಂಶಗಳು ಕಂಡುಬಂದಿಲ್ಲ ಎಂದು ವಾಡಾ ತಿಳಿಸಿದೆ.

ಸಂಜಿತಾ ಚಾನು ಮೇಲಿನ ಡೂಪಿಂಗ್​ ಪ್ರಕರಣ ವಜಾ
ಸಂಜಿತಾ ಚಾನು (ಸಂಗ್ರಹ ಚಿತ್ರ)

ಡೋಪಿಂಗ್ ಆರೋಪಗಳಿಂದ ನಾನು ಅಂತಿಮವಾಗಿ ಮತ್ತು ಅಧಿಕೃತವಾಗಿ ಮುಕ್ತಳಾಗಿದ್ದೇನೆ ಎಂಬ ಅರ್ಥದಲ್ಲಿ ಸಂತೋಷವಾಗಿದ್ದೇನೆ. ಆದರೆ ನಾನು ಕಳೆದುಕೊಂಡಿರುವ ಅವಕಾಶಗಳ ಬಗ್ಗೆ ಏನು ಹೇಳ್ತೀರಾ?, ನಾನು ಅನುಭವಿಸಿದ ಮಾನಸಿಕ ಆಘಾತಗಳ ಜಾವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಎಂದು ಮಣಿಪುರದ ವೇಟ್​ಲಿಫ್ಟರ್​ ಅಳಲು ತೋಡಿಕೊಂಡಿದ್ದಾರೆ.

ಪ್ರತಿಯೊಂದು ಹಂತದಲ್ಲೂ ಸಂಭವಿಸಿರುವ ತಪ್ಪುಗಳಿಗೆ ಯಾರು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ? ಅಂತಿಮ ತೀರ್ಪು ಇಲ್ಲದೆ ನೀವು ಕ್ರೀಡಾಪಟುವನ್ನು ವರ್ಷಗಳ ಆಮಾನತಿನಲ್ಲಿಟ್ಟಿದ್ದೀರಿ. ಒಂದು ದಿನ ನೀವು ಈಗ ಆರೋಪಗಳಿಂದ ಮುಕ್ತರಾಗಿದ್ದೀರಿ ಎಂದು ಕೇವಲ ಇ- ಮೇಲ್​ ಮೂಲಕ ಕಳುಹಿಸುತ್ತೀರಾ? ಎಂದು ತಮಗಾಗಿರುವ ಮಾನಸಿಕ ವೇದನೆಯನ್ನು ಮಾಧ್ಯಮದ ಮುಂದೆ ವ್ಯಕ್ತಪಡಿಸಿದರು.

ಐಡಬ್ಲ್ಯೂಎಫ್​ ತಮ್ಮ ಟೋಕಿಯೋ ಒಲಿಂಪಿಕ್ಸ್​ ಅವಕಾಶವನ್ನು ಕಸಿದುಕೊಂಡಿದೆ. ಇದಕ್ಕಾಗಿ ಕ್ಷಮೆ ಯಾಚಿಸಬೇಕು ಮತ್ತು ತಾವೂ ಇಲ್ಲಿಯವರೆಗೆ ಅನುಭವಿಸಿದ ಮಾನಸಿಕ ಕಿರುಕುಳಕ್ಕೆ ಪರಿಹಾರ ನೀಡಬೇಕು ಎಂದು ಚಾನು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.