ETV Bharat / sports

'ಒಂದು ಓವರ್‌ಗೆ ಬ್ಯಾಟ್ ಬೀಸಿ': ಆಸಿಸ್ ಆಟಗಾರ್ತಿಯ ಆಹ್ವಾನಕ್ಕೆ ಓಕೆ ಎಂದ ಸಚಿನ್ - ತೆಂಡೂಲ್ಕರ್ ಒಂದು ಓವರ್ ಬ್ಯಾಟಿಂಗ್

ನಾಳೆ ಬುಷ್​ಫೈರ್ ಕ್ರಿಕೆಟ್ ಪಂದ್ಯಕ್ಕೂ ಮೊದಲು ನಡೆಯುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಮಹಿಳಾ ಟಿ-20 ಪಂದ್ಯದ ಇನ್ನಿಂಗ್ಸ್ ಬ್ರೇಕ್​ನಲ್ಲಿ ಸಚಿನ್ ಒಂದು ಓವರ್​ಗಳ ಕಾಲ ಬ್ಯಾಟಿಂಗ್ ನಡೆಸಲಿದ್ದಾರೆ.

Sachin Tendulkar to come out of retirement, ಸಚಿನ್​ಗೆ ಆಸೀಸ್ ಆಟಗಾರ್ತಿ ಆಹ್ವಾನ
ಸಚಿನ್​ಗೆ ಆಸೀಸ್ ಆಟಗಾರ್ತಿ ಆಹ್ವಾನ
author img

By

Published : Feb 8, 2020, 4:51 PM IST

Updated : Feb 8, 2020, 5:13 PM IST

ನವದೆಹಲಿ: ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಆಸ್ಟ್ರೇಲಿಯಾಕ್ಕೆ ಸಹಾಯ ಮಾಡಲು ನಿರ್ಧರಿಸಿ ಆಸಿಸ್ ಕ್ರಿಕೆಟಿಗರು ಆಯೋಜಿಸಿರುವ ಬುಷ್‌ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯ ನಾಳೆ ನಡೆಯಲಿದೆ. ಇದಕ್ಕೂ ಮೊದಲು ಒಂದು ಓವರ್​ಗಳ ಕಾಲ ಬ್ಯಾಟ್ ಬೀಸುವಂತೆ ಆಸೀಸ್ ಆಟಗಾರ್ತಿ ಸಚಿನ್ ತೆಂಡೂಲ್ಕರ್​ಗೆ ಆಹ್ವಾನ ನೀಡಿದ್ದಾರೆ.

ಸಿಡ್ನಿಯಲ್ಲಿ ನಾಳೆ ಬುಷ್‌ಫೈರ್ ಕ್ರಿಕೆಟ್ ಬ್ಯಾಷ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮೊದಲು ಅದೇ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವನಿತೆಯರ ನಡುವೆ ಟಿ-20 ಪಂದ್ಯ ನಡೆಯಲಿದೆ. ಈ ವೇಳೆ ಇನ್ನಿಂಗ್ಸ್​ ಬ್ರೇಕ್ ಸಮಯದಲ್ಲಿ ಒಂದು ಓವರ್‌ಗೆ ಬ್ಯಾಟ್ ಬೀಸುವಂತೆ ಆಸಿಸ್ ಆಲ್​ರೌಂಡರ್​ ಎಲಿಸ್ ಪೆರ್ರಿ ಸಚಿನ್ ತೆಂಡೂಲ್ಕರ್‌ಗೆ ರಿಕ್ವೆಸ್ಟ್‌ ಮಾಡಿದ್ದಾರೆ.

ಈ ಬಗ್ಗೆ ವಿಡಿಯೋ ಮಾಡಿರುವ ಎಲಿಸ್ ಪೆರ್ರಿ, 'ಸಚಿನ್, ನೀವು ಬುಷ್​ಫೈರ್​ ಕ್ರಿಕೆಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾಕ್ಕೆ ಬಂದಿರುವುದು ಸಂತಸ ತಂದಿದೆ. ನೀವು ಒಂದು ತಂಡದ ಕೋಚ್​ ಆಗಿದ್ದೀರಿ ಎಂದು ತಿಳಿದಿದೆ. ಆದರೆ ನಿನ್ನೆ ಕೆಲ ಆಟಗಾರ್ತಿಯರು ಕುಳಿತು ಮಾತನಾಡಿಕೊಂಡೆವು. ನೀವು ನಿವೃತ್ತಿಯಿಂದ ಹೊರ ಬಂದು ಇನ್ನಿಂಗ್ಸ್​ ಬ್ರೇಕ್ ಸಮಯದಲ್ಲಿ ಒಂದು ಓವರ್​ ಬ್ಯಾಟ್ ಬೀಸಬೇಕು' ಎಂದಿದ್ದಾರೆ.

ಎಲಿಸ್ ಪೆರ್ರಿ ಆಹ್ವಾನಕ್ಕೆ ಪ್ರತಿಕ್ರಿಯಿಸಿರುವ ಸಚಿನ್, ಭುಜದ ನೋವಿನಿಂದ ವೈದ್ಯರು ಕ್ರಿಕೆಟ್ ಆಡಬಾರದು ಎಂದು ಹೇಳಿದ್ದರೂ, ನಾನು ಒಂದು ಓವರ್ ಬ್ಯಾಟ್ ಬೀಸಲು ಸಿದ್ದನಿದ್ದೇನೆ ಎಂದಿದ್ದಾರೆ. ಈ ಮೂಲಕ ಬಹುದಿನಗಳಿಂದ ಮೈದಾನಕ್ಕಿಳಿದು ಬ್ಯಾಟ್ ಬೀಸದ ಕ್ರಿಕೆಟ್ ದೇವರು ನಾಳೆ ಆಸೀಸ್ ಆಟಗಾರ್ತಿಯ ದಾಳಿಯನ್ನು ಎದುರಿಸಲು ಓಕೆ ಎಂದಿದ್ದಾರೆ. ಹಲವು ದಿನಗಳಿಂದ ದೇವರ ಆಟ ನೋಡಲು ಕಾಯುತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಈ ಸುದ್ದಿ ಸಂತಸ ತಂದಿದೆ.

Intro:Body:Conclusion:
Last Updated : Feb 8, 2020, 5:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.