ಸೆಂಚುರಿಯನ್: ದಿನೇಶ್ ಚಂಡಿಮಾಲ್(85) ಮತ್ತು ಧನಂಜಯ ಡಿ ಸಿಲ್ವಾ(79) ರನ್ಗಳ ನೆರವಿನಿಂದ ಶ್ರೀಲಂಕಾ ತಂಡ ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ 6 ವಿಕೆಟ್ ಕಳೆದುಕೊಂಡು 340 ರನ್ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಕೇವಲ 54 ರನ್ಗಳಾಗುವಷ್ಟರಲ್ಲಿ ನಾಯಕ ಕರುಣ ರತ್ನೆ(22), ಕುಸಾಲ್ ಪೆರೆರಾ(16) ಹಾಗೂ ಕುಸಾಲ್ ಮೆಂಡಿಸ್(12) ವಿಕೆಟ್ ಕಳೆದುಕೊಂಡಿತು. ಆದರೆ ಚಂಡಿಮಾಲ್ 161 ಎಸೆತಗಳಲ್ಲಿ 85, ಧನಂಜಯ ಡಿ ಸಿಲ್ವಾ 106 ಎಸೆತಳಲ್ಲಿ 79 ರನ್ ಸಿಡಿಸಿ ಆಘಾತದಿಂದ ಪಾರು ಮಾಡಿದರು.
-
Stumps, day one
— ICC (@ICC) December 26, 2020 " class="align-text-top noRightClick twitterSection" data="
The tourists have batted well and end on 340/6 thanks to fifties from Dinesh Chandimal and Dhananjaya de Silva 👏 #SAvSL SCORECARD ▶️ https://t.co/5jzy9lhScF pic.twitter.com/H3yIV7GGjF
">Stumps, day one
— ICC (@ICC) December 26, 2020
The tourists have batted well and end on 340/6 thanks to fifties from Dinesh Chandimal and Dhananjaya de Silva 👏 #SAvSL SCORECARD ▶️ https://t.co/5jzy9lhScF pic.twitter.com/H3yIV7GGjFStumps, day one
— ICC (@ICC) December 26, 2020
The tourists have batted well and end on 340/6 thanks to fifties from Dinesh Chandimal and Dhananjaya de Silva 👏 #SAvSL SCORECARD ▶️ https://t.co/5jzy9lhScF pic.twitter.com/H3yIV7GGjF
ಡಿ ಸಿಲ್ವಾ ಗಾಯಗೊಂಡು ನಿವೃತ್ತಿಯಾದರೆ, ಚಂಡಿಮಾಲ್ ಮಲ್ಡರ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಿರೋಶನ್ ಡಿಕ್ವೆಲ್ಲಾ 49 ರನ್ಗಳಿಸಿದರು, ಶನಾಕ 25 ಹಾಗೂ ಕಸುನ್ ರಜಿತಾ 7 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಆಫ್ರಿಕಾ ಪರ ವಿಯಾನ್ ಮಲ್ಡರ್ 68ಕ್ಕೆ3 , ಎನ್ರಿಚ್ ನೋಕಿಯಾ, ಸಿಂಪಾಲ ಹಾಗೂ ಲುಂಗಿ ಅಂಗಿಡಿ ತಲಾ ಒಂದು ವಿಕೆಟ್ ಪಡೆದರು.