ETV Bharat / sports

ರುತುರಾಜ್ ಗಾಯಕ್ವಾಡ್ ಅರ್ಧಶತಕ: ಆರ್​ಸಿಬಿ ವಿರುದ್ಧ ಸಿಎಸ್​ಕೆಗೆ  8 ವಿಕೆಟ್​ಗಳ ಸುಲಭ ಜಯ

ಆರ್​ಸಿಬಿ ನೀಡಿದ 146 ರನ್​ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಸಿಎಸ್​ಕೆ 18.4 ಓವರ್​ಗಳಲ್ಲಿ ಗೆಲುವಿನ ಗಡಿ ದಾಟುವ ಮೂಲಕ ಸೋಲಿನ ಸರಪಳಿಯನ್ನು ಕಳಚಿತು. ಯುವ ಬ್ಯಾಟ್ಸ್​ಮನ್ ರುತುರಾಜ್​ 51 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ ಅಜೇಯ 65 ರನ್​ಗಳಿಸಿ ಗೆಲುವಿನ ರೂವಾರಿಯಾದರು..

ಆರ್​ಸಿಬಿ ವಿರುದ್ಧ 8 ವಿಕೆಟ್​ಗಳ ಸುಲಭ ಜಯ ಸಾಧಿಸಿದ ಸಿಎಸ್​ಕೆ

author img

By

Published : Oct 25, 2020, 7:05 PM IST

ದುಬೈ: ಯುವ ಬ್ಯಾಟ್ಸ್​ಮನ್​ ರುತುರಾಜ್ ಗಾಯಕ್ವಾಡ್​ ಅವರ ಅಜೇಯ ಅರ್ಧಶತಕದ ನೆರವಿನಿಂದ ಆರ್ಸಿಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ ತಂಡ 8 ವಿಕೆಟ್​ಗಳ ಜಯ ಸಾಧಿಸಿದೆ.

ಆರ್​ಸಿಬಿ ನೀಡಿದ 146 ರನ್​ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಸಿಎಸ್​ಕೆ 18.4 ಓವರ್​ಗಳಲ್ಲಿ ಗೆಲುವಿನ ಗಡಿ ದಾಟುವ ಮೂಲಕ ಸೋಲಿನ ಸರಪಳಿಯನ್ನು ಕಳಚಿತು. ಯುವ ಬ್ಯಾಟ್ಸ್​ಮನ್ ರುತುರಾಜ್​ 51 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ ಅಜೇಯ 65 ರನ್​ಗಳಿಸಿ ಗೆಲುವಿನ ರೂವಾರಿಯಾದರು.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಾಯುಡು 27 ಎಸೆತಗಳಲ್ಲಿ 2 ಸಿಕ್ಸರ್ಸ್ ಹಾಗೂ 3 ಬೌಂಡರಿ ಸಹಿತ 39 ರನ್​ಳಿಸಿದರೆ, ಫ್ಲೆಸಿಸ್​ ಕೇವಲ 13 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 25 ರನ್​ಗಳಿಸಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮೋರಿಸ್ 36ಕ್ಕೆ1 ಹಾಗೂ ಚಹಾಲ್ 21ಕ್ಕೆ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 145 ರನ್​ಗಳಿಸಿತ್ತು.ವಿರಾಟ್​ ಕೊಹ್ಲಿ 43 ಎಸೆತಗಳಲ್ಲಿ 50 ರನ್​ಗಳಿಸಿದರೆ, ಎಬಿಡಿ​ 36 ಎಸೆತಗಳಲ್ಲಿ 39 ರನ್​ಗಳಿಸಿದ್ದರು.

ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಚಹಾರ್ 2, ಸ್ಯಾಮ್ ಕರ್ರನ್ 3 ಹಾಗೂ ಸ್ಯಾಂಟ್ನರ್ 1 ವಿಕೆಟ್ ಪಡೆದು ಮಿಂಚಿದ್ದರು. ಈ ಪಂದ್ಯ ಸೋತರು ಆರ್​ಸಿಬಿ 3ನೇ ಸ್ಥಾನದಲ್ಲಿ ಮುಂದುವರಿದರೆ, ಸಿಎಸ್​ಕೆ ಕೊನೆಯ ಸ್ಥಾನದಿಂದ 7ನೇ ಸ್ಥಾನಕ್ಕೆ ಬಡ್ತಿ ಪಡೆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.