ಲಕ್ನೋ: ಅಫ್ಘಾನಿಸ್ತಾನ ವಿರುದ್ಧ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿಂಡೀಸ್ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಭಾರತದ ವಿರುದ್ಧದ ಸರಣಿಗೂ ಮುನ್ನ ನಡೆಯುತ್ತಿರುವ ಸರಣಿಯಲ್ಲಿ ವಿಂಡೀಸ್ ಮೊದಲ ಪಂದ್ಯದಲ್ಲಿಯೇ ಆಲ್ರೌಂಡ್ ಪ್ರದರ್ಶನ ತೋರಿ ವಿಜಯಶಾಲಿಯಾಗಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಆಫ್ಘನ್ನರು 45.2 ಓವರ್ಗಳಲ್ಲಿ ಕೇವಲ 194 ರನ್ಗಳಿಗೆ ಆಲೌಟ್ ಆದರು. ರಹ್ಮತ್ ಶಾ 61, ಇಕ್ರಮ್ ಅಲಿ ಖಿಲ್ 58 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟುವಂತೆ ನೋಡಿಕೊಂಡರು.
-
It's a win for West Indies!
— ICC (@ICC) November 6, 2019 " class="align-text-top noRightClick twitterSection" data="
An ODI career-best 94 from Roston Chase guides them to victory over Afghanistan by seven wickets 👏 👏 pic.twitter.com/aJxa0hWJMW
">It's a win for West Indies!
— ICC (@ICC) November 6, 2019
An ODI career-best 94 from Roston Chase guides them to victory over Afghanistan by seven wickets 👏 👏 pic.twitter.com/aJxa0hWJMWIt's a win for West Indies!
— ICC (@ICC) November 6, 2019
An ODI career-best 94 from Roston Chase guides them to victory over Afghanistan by seven wickets 👏 👏 pic.twitter.com/aJxa0hWJMW
ವಿಂಡೀಸ್ ಪರ ಹೋಲ್ಡರ್ 2, ರೊಮಾರಿಯೋ ಶೆಫರ್ಡ್ 2, ರೋಸ್ಟನ್ ಚೇಸ್ 2 ಹೈಡನ್ ವಾಲ್ಸ್ ಹಾಗೂ ಶೆಲ್ಡಾನ್ ಕಾಟ್ರೆಲ್ ತಲಾ ಒಂದು ವಿಕೆಟ್ ಪಡೆದರು.
ಇನ್ನು, 195 ರನ್ಗಳ ಗುರಿ ಪಡೆದ ವಿಂಡೀಸ್ ಲೆವಿಸ್(7) ಹೆಟ್ಮೆರ್(3) ವಿಕೆಟ್ ಬೇಗ ಕಳೆದುಕೊಂಡರೂ, ರೋಸ್ಟನ್ ಚೇಸ್ 94, ಶಾಯ್ ಹೋಪ್ ಔಟಾಗದೆ 77 ರನ್ಗಳ ನೆರವಿನಿಂದ 46.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿತಲುಪಿತು.
ಅಫ್ಘಾನಿಸ್ತಾನದ ಪರ ಮುಜೀಬ್ 2 ವಿಕೆಟ್ ನವೀನ್ ಉಲ್ ಹಕ್ ಒಂದು ವಿಕೆಟ್ ಪಡೆದರು. 94 ರನ್ ಹಾಗೂ 2 ವಿಕೆಟ್ ಪಡೆದ ರೋಸ್ಟನ್ ಚೇಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.