ಲಂಡನ್: ಎರಡನೇ ಟೆಸ್ಟ್ ಮುಗಿಯುತ್ತಿದ್ದಂತೆ ಮೋಯಿನ್ ಅಲಿ ತವರಿಗೆ ಮರಳುವ ನಿರ್ಧಾರ ಅವರೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಕ್ಕೆ ಇಂಗ್ಲೆಂಡ್ ತಂಡದ ನಾಯಕ ಇಂಗ್ಲೆಂಡ್ ಆಲ್ರೌಂಡರ್ಗೆ ಕ್ಷಮೆ ಕೋರಿದ್ದಾರೆ.
ಎರಡನೇ ಟೆಸ್ಟ್ ನಂತರ ಆಲ್‌ರೌಂಡರ್ ಮೋಯಿನ್ ಅಲಿ ಮುಂದಿನ 2 ಟೆಸ್ಟ್ಗಳಲ್ಲಿ ಆಡುವುದಿಲ್ಲ ಎಂದು ತಿಳಿಸಿದ್ದ ರೂಟ್, ಈ ನಿರ್ಧಾರ ಅಲಿ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದರು. ಆದರೆ, ಅಲಿ ಇಂಗ್ಲೆಂಡ್ಗೆ ತೆರಳುವುದು ಪೂರ್ವ ನಿರ್ಧಾರಿತ ತಂಡದ ಯೋಜನೆಯಾಗಿದ್ದು, ತಂಡದ ರೊಟೇಷನ್ ಪದ್ದತಿಯ ಭಾಗವಾಗಿ ಮೋಯಿನ್ ಸೀಮಿತ ಓವರ್ಗಳ ಸರಣಿಗೂ ಮುನ್ನ ವಿಶ್ರಾಂತಿಗಾಗಿ ತವರಿಗೆ ಮರಳುತ್ತಿದ್ದರು.
ಎರಡನೇ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಮತ್ತು 2ನೇ ಇನ್ನಿಂಗ್ಸ್ ವೇಳೆ ಕೇವಲ 18 ಎಸೆತಗಳಲ್ಲಿ 43 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆಗಿದ್ದ ಮೋಯಿನ್ ಅಲಿ ಹಿಂದೆ ತಂಡದ ನೈಜ ಯೋಜನೆಯಂತೆ 10 ದಿನಗಳ ಬ್ರೇಕ್ ಪಡೆದು ಇಂಗ್ಲೆಂಡ್ಗೆ ತೆರಳಿದ್ದರು.
ಆದರೆ, ಇದರ ಅರಿವಿಲ್ಲದೇ ರೂಟ್ ಬಯೋಬಬಲ್ನಲ್ಲಿರುವ ಕಾರಣ ಆಟಗಾರರು ಯಾವಾಗ ತಂಡದಿಂದ ಹೊರಗುಳಿಯಲು ಬಯಸಿದರೆ ಅವರನ್ನು ಕಳುಹಿಸಿಕೊಡುವುದಕ್ಕೆ ತಂಡದಲ್ಲಿ ಒಪ್ಪಿಗೆ ಇದೆ ಎಂದು ಹೇಳಿದ್ದರು. ಆದರೆ, ಮೊಯೀನ್ ಅಲಿ ತವರಿಗೆ ಮರಳಿದ್ದು, ಪೂರ್ವ ನಿರ್ಧಾರಿತ ಯೋಜನೆಯಾದ ಕಾರಣ ಆಲ್ರೌಂಡರ್ಗೆ ಇಂಗ್ಲೆಂಡ್ ನಾಯಕ ಕ್ಷಮೆ ಕೋರಿದ್ದಾರೆ ಎಂದು ಕೆಲವು ಬ್ರಿಟೀಷ್ ಸುದ್ದಿ ಪತ್ರಿಕೆಗಳು ಬುಧವಾರ ವರದಿ ಮಾಡಿವೆ.
ಚೆನ್ನೈನಲ್ಲಿ ನಡೆದ 2ನೇ ಟೆಸ್ಟ್ನಲ್ಲಿ ಭಾರತ ತಂಡ 317 ರನ್ಗಳ ಜಯ ಸಾಧಿಸಿತ್ತು. 3 ಮತ್ತು 4ನೇ ಟೆಸ್ಟ್ ಪಂದ್ಯಗಳು ಅಹ್ಮದಾಬಾದ್ನ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿದ್ದು, ಜಾನಿ ಬೈರ್ಸ್ಟೋವ್ ಮತ್ತು ಮಾರ್ಕ್ವುಡ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಇದನ್ನು ಓದಿ: 3ನೇ ಟೆಸ್ಟ್ ಪಂದ್ಯದಲ್ಲಿ ಓಪನರ್ ಆಗಿ ಜಾನಿ ಬೈರ್ಸ್ಟೋವ್ ಕಣಕ್ಕಿಳಿಯಲಿ: ಸ್ಟೀವ್ ಹಾರ್ಮಿಸನ್