ವಿಶಾಖಪಟ್ಟಣ: ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಂತೆ ತಮ್ಮ ನೈಜ ಆಟವನ್ನು ಪ್ರದರ್ಶಿಸುತ್ತಿರುವ ರೋಹಿತ್ ಶರ್ಮಾ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ತಾಕತ್ತು ಪ್ರದರ್ಶಿಸಿದ್ದಾರೆ.
ಸೀಮಿತ ಓವರ್ಗಳಲ್ಲಿ ಸ್ಫೋಟಕ ಆಟಕ್ಕೆ ಹೆಸರಾಗಿದ್ದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ಇನ್ನಿಂಗ್ಸ್ ಆರಂಭಿಸಿ ಎರಡೂ ಇನ್ನಿಂಗ್ಸ್ನಲ್ಲೂ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
-
Back to back 💯s for the HITMAN. What a player 👏👏 pic.twitter.com/fhNkhvik2i
— BCCI (@BCCI) October 5, 2019 " class="align-text-top noRightClick twitterSection" data="
">Back to back 💯s for the HITMAN. What a player 👏👏 pic.twitter.com/fhNkhvik2i
— BCCI (@BCCI) October 5, 2019Back to back 💯s for the HITMAN. What a player 👏👏 pic.twitter.com/fhNkhvik2i
— BCCI (@BCCI) October 5, 2019
ಕಳೆದ ಆರು ವರ್ಷಗಳಿಂದ ಟೆಸ್ಟ್ನಲ್ಲಿ ನೆಲೆ ಕಂಡುಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದ ಹಿಟ್ಮ್ಯಾನ್ ಆರಂಭಿಕರಾಗಿ ವಿಫಲರಾದ ಹಿನ್ನಲೆ ಮಧ್ಯಮ ಕ್ರಮಾಂಕದಿಂದ ಬಡ್ತಿ ಪಡೆದು ಆರಂಭಿಕನಾಗಿ ಕಣಕ್ಕಿಳಿದ ಮೊದಲ ಇನ್ನಿಂಗ್ಸ್ನಲ್ಲೇ 176 ರನ್ಗಳಿಸಿ ದಕ್ಷಿಣ ಆಫ್ರಿಕನ್ನರನ್ನ ಕಾಡಿದ್ದರು.
ಇದೀಗ ಭಾರತ ತಂಡಕ್ಕೆ ಗೆಲುವು ತಂದುಕೊಡಲು ಉತ್ತಮ ಟಾರ್ಗೆಟ್ ಅವಶ್ಯಕತೆಯಿರುವುದರಿಂದ ಹೊಡಿಬಡಿ ಆಟ ನಡೆಸುತ್ತಿರುವ ರೋಹಿತ್ 2ನೇ ಇನ್ನಿಂಗ್ಸ್ನಲ್ಲಿ 133ನೇ ಎಸೆತದಲ್ಲಿ ಶತಕ ಪೂರೈಸಿ ಮತ್ತೊಮ್ಮೆ ಹರಿಣಗಳಿಗೆ ಶಾಕ್ ನೀಡಿದ್ದಾರೆ. ಅಲ್ಲದೆ ಎರಡೂ ಇನ್ನಿಂಗ್ಸ್ನಲ್ಲೂ ಶತಕಸಿಡಿಸಿದ 6ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
ಎರಡೂ ಇನ್ನಿಂಗ್ಸ್ನಲ್ಲಿ ಶತಕಸಿಡಿಸಿದವರು
:ವಿಜಯ್ ಹಜಾರೆ
ಸುನಿಲ್ ಗವಾಸ್ಕರ್(3 ಬಾರಿ)
ರಾಹುಲ್ ದ್ರಾವಿಡ್(2 ಬಾರಿ)
ವಿರಾಟ್ ಕೊಹ್ಲಿ
ಅಜಿಂಕ್ಯಾ ರಹಾನೆ
ರೋಹಿತ್ ಶರ್ಮಾ