ನವದೆಹಲಿ: ಹಿಂದಿನ ಕಾಲದ ಬೌಲರ್ ವಿರುದ್ಧ ಆಡುವ ಅವಕಾಶವನ್ನು ಒದಗಿಸಿದರೆ ಆಸ್ಟ್ರೇಲಿಯಾದ ಶ್ರೇಷ್ಠ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಅವರನ್ನು ಎದುರಿಸಲು ಬಯಸುತ್ತೇನೆ ಎಂದು ಭಾರತ ಕ್ರಿಕೆಟ್ ತಡದ ಉಪನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ರೋಹಿತ್ ಅವರನ್ನು ತಾವು ಎದುರಿಸಲು ಬಯಸುವ ಹಿಂದಿನ ಬೌಲರ್‌ನನ್ನು ಆಯ್ಕೆ ಮಾಡಲು ಅಭಿಮಾನಿಯೊಬ್ಬರು ಕೇಳಿದಾಗ ರೋಹಿತ್ ಮೆಕ್‌ಗ್ರಾತ್ ಅವರನ್ನು ಆಯ್ಕೆ ಮಾಡಿದ್ದಾರೆ.
"ನಾನು ಗ್ಲೆನ್ ಮೆಕ್‌ಗ್ರಾತ್ ಅವರನ್ನು ಎದುರಿಸಲು ಬಯಸುತ್ತೇನೆ. 124 ಪಂದ್ಯಗಳಲ್ಲಿ 563 ವಿಕೆಟ್‌ಗಳನ್ನು ಪಡೆದಿರುವ ಮೆಕ್‌ಗ್ರಾತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಐದನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ. ಅವರು ಏಕದಿನ ಕ್ರಿಕೆಟ್‌ನಲ್ಲಿ 381 ವಿಕೆಟ್‌ಗಳನ್ನು ಪಡೆದಿದ್ದಾರೆ" ಎಂದು ಟ್ವಿಟರ್ನಲ್ಲಿ ರೋಹಿತ್ ಅಭಿಮಾನಿಗೆ ಉತ್ತರಿಸಿದ್ದಾರೆ.