ETV Bharat / sports

ಅರ್ಧಶತಕ ಸಿಡಿಸಿ ತಾವು ಟೆಸ್ಟ್​ ಕ್ರಿಕೆಟ್​​ಗೂ ಫಿಟ್​ ಎಂದು ತೋರಿಸಿದ ರೋಹಿತ್..

ಭಾರತ ತಂಡ ಸೀಮಿತ ಓವರ್​ಗಳಲ್ಲಿ ಆರಂಭಿಕ ಸ್ಫೋಟಕ ದಾಂಡಿಗನಾಗಿ ಮಿಂಚುವ ರೋಹಿತ್​ ಶರ್ಮಾ ಟೆಸ್ಟ್​ ಕ್ರಿಕೆಟ್​ನಲ್ಲಿ ಮಾತ್ರ ಅವಕಾಶಗಳ ಕೊರತೆ ಅನುಭವಿಸಿದ್ದಾರೆ.

author img

By

Published : Aug 18, 2019, 5:25 PM IST

Updated : Aug 18, 2019, 6:08 PM IST

Rohit sharma

ಆ್ಯಂಟಿಗೋವಾ: ಭಾರತ ತಂಡ ಸೀಮಿತ ಓವರ್​ಗಳಲ್ಲಿ ಆರಂಭಿಕ ಸ್ಫೋಟಕ ದಾಂಡಿಗನಾಗಿ ಮಿಂಚುವ ರೋಹಿತ್​ ಶರ್ಮಾ ಟೆಸ್ಟ್​ ಕ್ರಿಕೆಟ್​ನಲ್ಲಿ ಮಾತ್ರ ಅವಕಾಶಗಳ ಕೊರತೆ ಅನುಭವಿಸಿದ್ದಾರೆ.

ವಿಶ್ವಕಪ್​ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಅವರು 5 ದಾಖಲೆಯ ಶತಕ ಸಿಡಿಸಿ ಮಿಂಚಿದ್ದರು. ನಂತರ ವಿಂಡೀಸ್​ ವಿರುದ್ಧದ ಟಿ20 ಸರಣಿಯಲ್ಲೂ ಉತ್ತಮ ಆಟ ತೋರಿಸಿದ್ದಾರೆ. ಇದೀಗ ಟೆಸ್ಟ್​ ಸರಣಿಗೆ ಪೂರ್ವಭಾವಿಯಾಗಿ ನಡೆಯುತ್ತಿರುವ 3 ದಿನಗಳ ವಿಂಡೀಸ್​ ಎ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

Rohit sharma
ರೋಹಿತ್​ ಶರ್ಮಾ

ಆಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ 12 ವರ್ಷ ಕಳೆದಿದ್ದರೂ ರೋಹಿತ್​ ಆಡಿರುವುದು ಕೇವಲ 27 ಟೆಸ್ಟ್​ ಪಂದ್ಯಗಳು ಮಾತ್ರ. ಅದರಲ್ಲಿ 3 ಶತಕ 10 ಅರ್ಧಶತಕ ಬಾರಿಸಿದ್ದಾರೆ. 2013 ರಲ್ಲಿ ಟೆಸ್ಟ್​ಗೆ ಪದಾರ್ಪಣೆ ಮಾಡಿದ ರೋಹಿತ್ ಟೆಸ್ಟ್​ ತಂಡದಲ್ಲಿ ಖಾಯಂ ಸ್ಥಾನ ಪಡೆಯುವಲ್ಲಿ ಮಾತ್ರ ವಿಫಲರಾಗುತ್ತಿದ್ದಾರೆ.

ಕಳೆದ ಆಸ್ಟ್ರೇಲಿಯಾ ಪ್ರವಾಸದ ನಂತರ ಮತ್ತೆ ಟೆಸ್ಟ್​ ಸರಣಿಯಲ್ಲಿ ಅವಕಾಶ ಪಡೆದಿದ್ದಾರೆ. ಆದರೆ, ಆಡುವ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವರೇ ಎಂಬುದು ​ಅನುಮಾನವಾಗಿದೆ. 32 ವರ್ಷದ ರೋಹಿತ್​ ಶರ್ಮಾ ಇನ್ನು 4-5 ವರ್ಷಗಳ ಕಾಲ ಕ್ರಿಕೆಟ್​ ಆಡಲು ಶಕ್ತರಾಗಿರುವುದರಿಂದ ಮುಂದಾದರೂ ಟೆಸ್ಟ್​ ಕ್ರಿಕೆಟ್​ನಲ್ಲಿ ಖಾಯಂ ಸದಸ್ಯರಾಗುವರೇ ಎಂದು ಕಾದು ನೋಡಬೇಕಿದೆ.

Intro:Body:Conclusion:
Last Updated : Aug 18, 2019, 6:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.