ರಾಜ್ಕೋಟ್: ಭಾರತ ತಂಡದ ಪ್ರಭಾರಿ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧದ 2ನೇ ಟಿ20 ಪಂದ್ಯದ ವೇಳೆ ಟಿ20 ಕ್ರಿಕೆಟ್ನಲ್ಲಿ 100 ಪಂದ್ಯ ಪೂರೈಸಿದ ಭಾರತದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
2007ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದ ರೋಹಿತ್ ಶರ್ಮಾ 12 ವರ್ಷಗಳಲ್ಲಿ 100ನೇ ಟಿ20 ಪಂದ್ಯದ ಹೊಸ್ತಿಲಲ್ಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ಪಾಲಿಗೆ ಇಂದು ಅತ್ಯಂತ ಅವಿಸ್ಮರಣೀಯ ದಿನವಾಗಿದೆ. ಈ ಕುರಿತು ತಮ್ಮ 12 ವರ್ಷಗಳ ಕ್ರಿಕೆಟ್ ವೃತ್ತಿ ಜೀವನದ ಹಲವು ಸಂಗತಿಗಳನ್ನು ಬಿಸಿಸಿಐ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹಿಟ್ಮ್ಯಾನ್ ಹಂಚಿಕೊಂಡಿದ್ದಾರೆ.
ಭಾರತದ ಪರ 100 ನೇ ಟಿ20 ಆಡುತ್ತಿರುವುದು ಹೆಮ್ಮೆಯ ಸಂಗತಿ. ನನ್ನ ವೃತ್ತಿ ಜೀವನದಲ್ಲಿ ಹಲವು ಏಳು-ಬೀಳುಗಳನ್ನ ಕಂಡಿದ್ದೇನೆ. ಆದ್ರೆ ಎಲ್ಲಾ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.
-
.@ImRo45 is all set to play his 100th T20I tonight. Watch the Hitman share his thoughts on his memorable journey so far - by @28anand #TeamIndia pic.twitter.com/niSC8Gg0ZQ
— BCCI (@BCCI) November 7, 2019 " class="align-text-top noRightClick twitterSection" data="
">.@ImRo45 is all set to play his 100th T20I tonight. Watch the Hitman share his thoughts on his memorable journey so far - by @28anand #TeamIndia pic.twitter.com/niSC8Gg0ZQ
— BCCI (@BCCI) November 7, 2019.@ImRo45 is all set to play his 100th T20I tonight. Watch the Hitman share his thoughts on his memorable journey so far - by @28anand #TeamIndia pic.twitter.com/niSC8Gg0ZQ
— BCCI (@BCCI) November 7, 2019
ಇದೇ ಸಂದರ್ಭದಲ್ಲಿ ಟಿ20 ಕ್ರಿಕೆಟ್ನಲ್ಲಿ 4 ಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್ಮನ್ ಆಗಿರುವ ರೋಹಿತ್ ಅಭಿಮಾನಿಗಳ ಬೆಂಬಲವಿದ್ದರೆ ಇಂತಹ ಹಲವಾರು ಉತ್ತಮ ಇನ್ನಿಂಗ್ಸ್ಗಳು ಬರಲಿವೆ ಎಂದಿದ್ದಾರೆ.
ಇನ್ನು, ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನದ ಶೋಯಬ್ ಮಲಿಕ್(111) ಅತಿ ಹೆಚ್ಚು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಪಂದ್ಯಗಳನ್ನಾಡಿರುವ ಆಟಗಾರರಾಗಿದ್ದಾರೆ. ಇವರನ್ನು ಬಿಟ್ಟರೆ ರೋಹಿತ್ ಮಾತ್ರ 100 ಪಂದ್ಯಗಳನ್ನಾಡಿದ ದಾಖಲೆಗೆ ಇಂದು ಪಾತ್ರರಾಗಲಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಅಫ್ರಿದಿ 99, ಧೋನಿ 98 ಪಂದ್ಯಗಳನ್ನಾಡಿದ್ದಾರೆ.
ಈ ದಾಖಲೆಯಲ್ಲದೆ ರೋಹಿತ್ ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ(4), ಅತಿ ಹೆಚ್ಚು ರನ್(2452), ಹೆಚ್ಚು ಸಿಕ್ಸರ್(109) ಹಾಗೂ 2ನೇ ಅತಿ ಹೆಚ್ಚು ಬೌಂಡರಿ(219) ಬಾರಿಸಿರುವ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.