ರಾಜ್ಕೋಟ್: ಭಾರತ ತಂಡದ ಪ್ರಭಾರಿ ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧದ 2ನೇ ಟಿ20 ಪಂದ್ಯದ ವೇಳೆ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಲಿದ್ದಾರೆ.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ಪಾಲಿಗೆ ಗುರುವಾರ 100 ನೇ ಟಿ20 ಪಂದ್ಯವಾಗಲಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ 100ನೇ ಪಂದ್ಯವಾಡಲಿರುವ 2ನೇ ಕ್ರಿಕೆಟಿಗ ಹಾಗೂ ಮೊದಲ ಭಾರತೀಯ ಎನಿಸಿಕೊಳ್ಳಲಿದ್ದಾರೆ.
ಇವರನ್ನು ಬಿಟ್ಟರೆ ಪಾಕಿಸ್ತಾನದ ಶೋಯಬ್ ಮಲಿಕ್(111) ಮಾತ್ರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 100 ಪಂದ್ಯಗಳನ್ನಾಡಿರುವ ಆಟಗಾರರಾಗಿದ್ದಾರೆ. ಅಫ್ರಿದಿ 99 , ಧೋನಿ 98 ಪಂದ್ಯಗಳನ್ನಾಡಿದ್ದು, ನಂತರದ ಸ್ಥಾನದಲ್ಲಿದ್ದಾರೆ.
ಈ ದಾಖಲೆಯಲ್ಲದೆ ರೋಹಿತ್ ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ, ಅತಿ ಹೆಚ್ಚು ರನ್, ಹೆಚ್ಚು ಸಿಕ್ಸರ್ ಹಾಗೂ 2ನೇ ಅತಿ ಹೆಚ್ಚು ಬೌಂಡರಿ ಬಾರಿಸಿರುವ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.